ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಹೋಗಬೇಕು : ಷಾ

ಹುಬ್ಬಳ್ಳಿ,ಜ.28- ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಹೋಗಬೇಕು. ಇದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಶಪಥ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಕರೆ ನೀಡಿದರು. ಇಲ್ಲಿನ ಬಿವಿಬಿ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಕ್ಷೇತ್ರದಲ್ಲಿ ಭಾರತ ವಿಶ್ವಗುರುವಾಗಿ ಹೊರಹೊಮ್ಮುತ್ತಿದೆ. ಐಟಿಬಿಟಿ ಸೇರಿದಂತೆ ಪ್ರತಿಯೊಂದು ಕ್ಷೇತ್ರವು ನಮ್ಮದಾಗಬೇಕು. ಇದಕ್ಕಾಗಿ ವಿದ್ಯಾರ್ತಿಗಳು ಹೆಚ್ಚು ಶ್ರಮ ಪಡಬೇಕೆಂದು ಸಲಹೆ ಮಾಡಿದರು. ಭಾರತ ಹಿಂದಿನಂತಿಲ್ಲ. ನಾವು ಒಂದು ಕಾಲದಲ್ಲಿ ಪ್ರತಿಯೊಂದಕ್ಕೂ ವಿದೇಶದತ್ತ ನೋಡುತ್ತಿದ್ದೆವು. […]
ತಂತ್ರಜ್ಞಾನ ಮೂಲಕ ಕುತಂತ್ರ: ಚೀನಾ ವಿರುದ್ಧ ಬ್ರಿಟನ್ ಗರಂ

ಲಂಡನ್ , ಅ. 12 – ಆರ್ಥಿಕ ಮತ್ತು ತಾಂತ್ರಿಕ ಪ್ರಭಾವವನ್ನು ಬಳಸಿ ಅಂತರರಾಷ್ಟ್ರೀಯ ಭದ್ರತೆಯ ನಿಯಮಗಳ ಮೇಲೆ ಹಿಡಿತ ಸಾಧಿಸಲು ಚೀನಾ ಹವಣಿಸುತ್ತಿದೆ ಎಂದು ಬ್ರಿಟನ್ ಸೈಬರ್ಗುಪ್ತಚರ ಸಂಸ್ಥೆ ಹೇಳಿದೆ. ಬೀಜಿಂಗ್ನ ಹೊಸ ನಿಯಮ ರಚಿಸುವ ಪ್ರಯತ್ನ ನಮ್ಮ ಭವಿಷ್ಯವದ ರಾಷ್ಟ್ರೀಯ ಭದ್ರತಾ ಸಮಸ್ಯೆಯಾಗಿದೆ ಎಂದು ಜಿಸಿಎಸ್ಕ್ಯೂನ ನಿರ್ದೇಶಕ ಜೆರೆಮಿ ಫ್ಲೆಮಿಂಗ ಹೇಳಿದ್ದಾರೆ. ತಂತ್ರಜ್ಞಾನದ ವಿಷಯಕ್ಕೆ ಬಂದಾಗ, ಚೀನೀ ರಾಜಕೀಯ ಪ್ರೇರಿತ ಕ್ರಮಗಳು ಹೆಚ್ಚು ತುರ್ತು ಸಮಸ್ಯೆಯಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಪರಿಹರಿಸಬೇಕು ಎಂದು […]
ತಂತ್ರಜ್ಞಾನ ಮತ್ತು ಪ್ರತಿಭೆ ಭಾರತದ ಅಭಿವೃದ್ಧಿ ಪಯಣದ ಎರಡು ಸ್ತಂಭಗಳು : ಮೋದಿ

ಹೈದರಾಬಾದ್, ಅ.11- ತಂತ್ರಜ್ಞಾನ ಮತ್ತು ಪ್ರತಿಭೆ ಭಾರತದ ಅಭಿವೃದ್ಧಿ ಪಯಣದ ಎರಡು ಆಧಾರ ಸ್ತಂಭಗಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಎರಡನೇ ಜಾಗತಿಕ ಜಿಯೋಸ್ಪೇಷಿಯಲ್ ಇನಾರ್ಮೇಶನ್ ಕಾಂಗ್ರೆಸ್-2022ಕ್ಕೆ ವಿಡಿಯೋ ಸಂದೇಶ ರವಾನಿಸಿರುವ ಪ್ರಧಾನಿಯವರು, ದೇಶದ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ತಮ್ಮ ಸರ್ಕಾರ ಅಂತ್ಯೋದಯದ ದೃಷ್ಟಿಕೋದಲ್ಲಿ ಕೆಲಸ ಮಾಡುತ್ತಿದೆ. ದೇಶದ ಕೊನೆಯ ಮೈಲಿನಲ್ಲಿರುವ ಕೊನೆಯ ವ್ಯಕ್ತಿಗೂ ಸೌಲಭ್ಯ ಸಿಗಬೇಕು, ಆತ ಸಬಲೀಕರಣಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಮಿಷನ್ ಮೋಡ್ನಲ್ಲಿ ಕೆಲಸ ಮಾಡಲಾಗುತ್ತಿದೆ […]