ತಂದೆಯಾದ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್

ಪಾಟ್ನಾ,ಮಾ.27-ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ತಂದೆಯಾಗಿದ್ದಾರೆ. ತಮ್ಮ ಚೊಚ್ಚಲ ಮಗುವನ್ನು ಎತ್ತಿಕೊಂಡು ಮುದ್ದಿಸುತ್ತಿರುವ ತಮ್ಮ ಭಾವಚಿತ್ರವನ್ನು ಅವರು ಟ್ವಿಟ್ ಮಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ದೇವರು ಸಂತೋಷಪಟ್ಟು ಮಗಳ ರೂಪದಲ್ಲಿ ಉಡುಗೊರೆಯನ್ನು ಕಳುಹಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಒಂಬತ್ತು ಮಕ್ಕಳಲ್ಲಿ ಕಿರಿಯರಾಗಿರುವ ತೇಜಸ್ವಿ ಯಾದವ್ ಅವರು ರಾಚೆಲ್ ಗೊಡಿನೋ ಅವರನ್ನು ವಿವಾಹವಾಗಿದ್ದಾರೆ. ಬಸವಣ್ಣ, ಕೆಂಪೇಗೌಡ ಪ್ರತಿಮೆ ಅನಾವರಣ ರಾಷ್ಟ್ರೀಯ ಜನತಾ ದಳ (ಆರ್‍ಜೆಡಿ) ನಾಯಕನ ಸಹೋದರಿ […]

ಸಿಬಿಐ ವಿಚಾರಣೆಗೆ ಹಾಜರಾದ ತೇಜಸ್ವಿ ಯಾದವ್

ನವದೆಹಲಿ,ಮಾ.25-ಅಂತೂ ಇಂತೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ಮೂರು ಬಾರಿ ಸಿಬಿಐ ವಿಚಾರಣೆಗೆ ಹಾಜರಾಗದ ತೇಜಸ್ವಿ ಅವರು, ಇಂದು ಬೆಳಿಗ್ಗೆ ಸಿಬಿಐ ಕೇಂದ್ರ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿದರು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಈ ತಿಂಗಳು ಯಾದವ್ ಅವರನ್ನು ಬಂಧಿಸುವುದಿಲ್ಲ ಎಂದು ಸಿಬಿಐ ಕಳೆದ ವಾರ ದೆಹಲಿ ಹೈಕೋರ್ಟ್‍ಗೆ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ತೇಜಸ್ವಿ ಇಂದು ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ. ಆರ್‍ಜೆಡಿ ನಾಯಕ […]

ಇಡಿಯಿಂದ ಮತ್ತೊಂದು ಹೊಸ ಕತೆ : ತೇಜೆಸ್ವಿ ಯಾದವ್

ಪಾಟ್ನಾ,ಮಾ.12- ತಮ್ಮ ಮನೆ, ಕಚೇರಿ ಮತ್ತು ಆಪ್ತರಿಗೆ ಸೇರಿ ಸ್ಥಳಗಳಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ 600 ಕೋಟಿ ರೂಪಾಯಿ ಪತ್ತೆಯಾಗಿದೆ ಎಂಬುದು ಸುಳ್ಳು ವದ್ಧಂತಿ ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅಲ್ಲಗಳೆದಿದ್ದಾರೆ. ಕಳೆದ ಮೂರು ದಿನಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಅಪರಾಧಿಕ ಮೊತ್ತ 600 ಕೋಟಿ ರೂಪಾಯಿಗಳು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ನಿನ್ನೆ ಹೇಳಿಕೆ ನೀಡಿತ್ತು. ಇದನ್ನು ಅಲ್ಲಗಳೆದ ತೇಜೆಸ್ವಿ ಯಾದವ್ ಜಾರಿನಿರ್ದೇಶನಾಲಯದ ಹೇಳಿಕೆಗಳು ವದ್ಧಂತಿಗಳು ಎಂದು ಅಲ್ಲಗಳೆದಿದ್ದಾರೆ. ಮೋದಿ ರೋಡ್‌ ಶೋ : ‘ಉರಿಗೌಡ […]

ಸಿಬಿಐ ವಿಚಾರಣೆಗೆ ಗೈರಾದ ತೇಜಸ್ವಿಯಾದವ್

ನವದೆಹಲಿ,ಮಾ.11-ಸಿಬಿಐ ಎದುರು ವಿಚಾರಣೆಗೆ ಹಾಜರಾಗಲು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತೆ ನಿರಾಕರಿಸಿದ್ದಾರೆ. ಜಮೀನು ಮತ್ತು ಉದ್ಯೋಗಕ್ಕಾಗಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟೀಸ್ ನೀಡಿತ್ತು ಆದರೂ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಇಂದು ವಿಚಾರಣೆಗೆ ಹಾಜರಾಗಿಲ್ಲ. ಈ ಹಿಂದೆ ಮಾರ್ಚ್ 4 ರಂದು ಯಾದವ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು ಆದರೆ ಅವರು ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿರಲಿಲ್ಲ, ನಂತರ ಇಂದಿಗೆ ಹೊಸ ದಿನಾಂಕ ನಿಗದಿಪಡಿಸಿದ್ದರು ಅವರು ವಿಚಾರಣೆಗೆ ಬಂದಿಲ್ಲ. […]