ನಾಲ್ವರು ಶ್ರೀಗಂಧ ಚೋರರ ಬಂಧನ : 16.50 ಲಕ್ಷ ಮೌಲ್ಯದ ಮಾಲು ಜಪ್ತಿ

ಬೆಂಗಳೂರು, ಜ.9- ಅರಣ್ಯದಿಂದ ರಕ್ತ ಚಂದನದ ಮರಗಳನ್ನು ಕಡಿದು ಸಾಗಿಸುತ್ತಿದ್ದ ನಾಲ್ವರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 16.50 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರದ ತುಂಡುಗಳು ಹಾಗೂ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕಾಮಾಕ್ಷಿಪಾಳ್ಯದ ಮೀನಾಕ್ಷಿ ನಗರ ನಿವಾಸಿ ಸಿದ್ದಪ್ಪ(27), ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹರೀಶ್(34), ಕಮಲಾನಗರದ ಪೊನ್ನರಾಜು ಅಲಿಯಾಸ್ ಪೊನ್ನ(35) ಮತ್ತು ಲಗ್ಗೇರಿಯ ಪ್ರೇಮನಗರ ನಿವಾಸಿ ಧೃವಕುಮಾರ್ ಅಲಿಯಾಸ್ ಧೃವ(29) ಬಂಧಿತ ಶ್ರೀಗಂಧ ಚೋರರು. ಕಾಮಾಕ್ಷಿಪಾಳ್ಯದ ಕಾವೇರಿ ಪುರ ಗುಡ್ಡದ ಬಳಿಯಿಂದ ಮಹೇಂದ್ರ ಜಿತೋ […]

40ಕ್ಕೂ ಹೆಚ್ಚು ಕುರಿ, ಮೇಕೆ ಕದ್ದೊಯ್ದ ಕಳ್ಳರು

ಕೊರಟಗೆರೆ, ಡಿ.3- ಬಡ ರೈತಾಪಿ ವರ್ಗದ ಕುಟುಂಬವೊಂದರ ಕುರಿ ರಪ್ಪದಲ್ಲಿನ 40ಕ್ಕೂ ಹೆಚ್ಚು ಕುರಿ ಹಾಗೂ ಮೇಕೆಯನ್ನ ಟೆಂಪೋದಲ್ಲಿ ತುಂಬಿಕೊಂಡು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ತಾಲೂಕು ಅರಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಶಾಪುರ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ನಾಗರಾಜು ಎಂಬ ಬಡ ರೈತನ ಒಂದೇ ರಪ್ಪದಲ್ಲಿ 40ಕ್ಕೂ ಹೆಚ್ಚು ಕುರಿ- ಮೇಕೆಗಳಿದ್ದವು. ಗುರುವಾರ ಮಧ್ಯರಾತ್ರಿ ಎರಡು ಗಂಟೆ ನಂತರ ಕಳ್ಳತನವಾಗಿರಬಹುದು ಎನ್ನಲಾಗಿದೆ. ಈ ರೈತನ ಕುಟುಂಬ ಸಂಬಂಧಿಕರ […]

ಇಬ್ಬರು ಚೋರರ ಸೆರೆ, 3.50 ಲಕ್ಷ ಮೌಲ್ಯದ ವಾಹನಗಳ ವಶ

ಬೆಂಗಳೂರು, ನ.30- ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿ, 3.50 ಲಕ್ಷ ರೂ. ಮೌಲ್ಯದ ಆರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಗ್ಗನಹಳ್ಳಿ ಕ್ರಾಸ್, ಸಂಜೀವಿನಿ ನಗರದ ಸಾಗರ್(19) ಮತ್ತು ಆಂಧ್ರಹಳ್ಳಿ ಮುಖ್ಯರಸ್ತೆಯ ಗಣೇಶ್(20) ಬಂಧಿತರು.ಸೆಪ್ಟೆಂಬರ್ 30ರಂದು ಮಧ್ಯಾಹ್ನ 2.30ರ ಸುಮಾರಿನಲ್ಲಿ ಸುಜಯ್ ಗಣೇಶ್ ಎಂಬುವರು ತಮ್ಮ ಹೊಂಡಾ ಡಿಯೋ ದ್ವಿಚಕ್ರ ವಾಹನವನ್ನು ತಮ್ಮ ಮನೆ ಮುಂಭಾಗ ನಿಲ್ಲಿಸಿದ್ದು, ಮಾರನೇ ದಿನ ನೋಡಿದಾಗ ಬೈಕ್ ಕಳ್ಳತನವಾಗಿತ್ತು. ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕಾಲೇಜು […]

ಇಬ್ಬರು ಮನೆಗಳ್ಳರ ಬಂಧನ : 12.5 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

ಬೆಂಗಳೂರು,ಸೆ.20- ಮನೆಗಳ್ಳ ತನವನ್ನೇ ಚಾಳಿಯನ್ನಾಗಿಸಿಕೊಂಡು ಹಗಲು ಮತ್ತು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿ 12.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪೀಣ್ಯಾ ನಿವಾಸಿಗಳಾದ ಕಾಂತರಾಜ್ ಅಲಿಯಾಸ್ ಮೋರಿ(45 ) ಮತ್ತು ಸುರೇಶ್ ಅಲಿಯಾಸ್ ಸೂಪರ್ ಸೂರಿ(47) ಬಂಧಿತ ಆರೋಪಿಗಳು. ಆರೋಪಿಗಳ ಬಂಧನದಿಂದ ಅಶೋಕನಗರ ಪೊಲೀಸ್ ಠಾಣೆ, ಆರ್‍ಎಂಸಿಯಾರ್ಡ್ ಹಾಗೂ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಒಂದು ಪ್ರಕರಣ ಸೇರಿ ಒಟ್ಟು 3 ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು 12.5 ಲಕ್ಷ […]

ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ, 29 ದ್ವಿಚಕ್ರ ವಾಹನ, ಆಟೋ ವಶ

ಬೆಂಗಳೂರು,ಸೆ.17- ದ್ವಿಚಕ್ರ ವಾಹನಗಳ ಹ್ಯಾಂಡಲ್‍ಲಾಕ್ ಮುರಿದು ಕಳ್ಳತನ ಮಾಡಿ ನಂಬರ್ ಪ್ಲೇಟ್ ತೆಗೆದು ತಮಿಳುನಾಡಿನಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ 15 ಲಕ್ಷ ರೂ. ಮೌಲ್ಯದ 29 ದ್ವಿಚಕ್ರ ವಾಹನಗಳು ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ನಗರ ನಿವಾಸಿ ಶಾನ್, ತಮಿಳುನಾಡು ಮೂಲದ ರಂಜಿತ್‍ಕುಮಾರ್, ಶಾಹೇನ್ ಶಾ ಮತ್ತು ಶಿವ ಬಂಧಿತ ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳರು. ಆರೋಪಿಗಳಿಂದ 9 ಹೋಂಡಾ […]

ಮಕ್ಕಳ ಕಳ್ಳರೆಂದು ಶಂಕಿಸಿ ನಾಲ್ವರು ಸಾಧುಗಳ ಮೇಲೆ ಹಲ್ಲೆ

ಸಾಂಗ್ಲಿ, ಸೆ 14 – ಮಕ್ಕಳ ಕಳ್ಳರೆಂದು ಶಂಕಿಸಿ ನಾಲ್ವರು ಸಾಧುಗಳ ಮೇಲೆ ಗುಂಪೊಂದು ಹಲ್ಲೇ ನಡೆಸಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೇಯ ಜಟ್ ತೆಹಸಿಲನ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ನಾಲ್ವರು ಕಾರಿನಲ್ಲಿ ಕರ್ನಾಟಕದ ಬಿಜಾಪುರದಿಂದ ಪಂಢರಪುರದ ದೇವಸ್ಥಾನದ ಕಡೆಗೆ ಹೋಗುತ್ತಿದ್ದಾಗ ಲವಂಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-09-2022) ಸೋಮವಾರ ಗ್ರಾಮದ ದೇವಸ್ಥಾನದಲ್ಲಿ ತಂಗಿದ್ದರು. ಮಂಗಳವಾರ ಪ್ರಯಾಣವನ್ನು ಪುನರಾರಂಭಿಸುವಾಗ, ಅವರು ಹುಡುಗನನ್ನು ದಾರಿ […]

ಇಬ್ಬರು ಅಂತಾರಾಜ್ಯ ಮನೆಗಳ್ಳರ ಸೆರೆ

ಬೆಂಗಳೂರು,ಆ.20- ಮನೆಗಳ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿ 4 ಲಕ್ಷ ನಗದು ಸೇರಿದಂತೆ 21 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಿಹಾರ ರಾಜ್ಯದ ರಾಮ್‍ಕುಮಾರ್(20) ಮತ್ತು ಮಧಸೂದನ್ ಪ್ರಸಾದ್ ವರ್ಮ(45) ಬಂಧಿತರು. ಕಾಡುಗೋಡಿ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸಿ 230 ಗ್ರಾಂ ತೂಕದ ಚಿನ್ನದ ಒಡವೆಗಳು, 200 ಗ್ರಾಂ ಬೆಳ್ಳಿ ಸಾಮಾನುಗಳು, […]

ಇಬ್ಬರು ಮೊಬೈಲ್ ಸುಲಿಗೆಕೋರರ ಸೆರೆ, 512 ಸ್ಮಾರ್ಟ್ ಫೋನ್ ವಶ

ಬೆಂಗಳೂರು,ಆ.11- ಸರಣಿ ಮೊಬೈಲ್ ಸುಲಿಗೆ ಮಾಡಿ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, 78.84 ಲಕ್ಷ ರೂ. ಮೌಲ್ಯದ 512 ಸ್ಮಾರ್ಟ್‍ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪಾದರಾಯನಪುರದ ನಿವಾಸಿ ಅಜ್ಮಲ್ ಪಾಷಾ ಮತ್ತು ಶಿವಾಜಿನಗರದ ನಿವಾಸಿ ಇಜಾಜ್ ಬಂಧಿತ ಆರೋಪಿಗಳು. ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮೊಬೈಲ್ ಫೋನ್ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳಿಗಾಗಿ ಶೋಧ ಕೈಗೊಂಡು ಇಬ್ಬರನ್ನು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು 7ರಿಂದ 8 ಜನರ […]

ಇಬ್ಬರು ಸರಗಳ್ಳರ ಬಂಧನ

ಬೆಂಗಳೂರು,ಜು.19-ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಗುಲ್ಬರ್ಗ ಮೂಲದ ಇಬ್ಬರನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿ 29 ಗ್ರಾಂ ತೂಕದ 1.25 ಲಕ್ಷ ರೂ. ಬೆಲೆ ಬಾಳುವ ಸರವನ್ನು ವಶಪಡಿಸಿಕೊಂಡಿದ್ದಾರೆ. ಸುರೇಶ್(26) ಮತ್ತು ಸಂಗಮೇಶ ಮ್ಯಾಗೇರಿ(22) ಬಂಧಿತ ಆರೋಪಿಗಳು. ಜು.12ರಂದು ರಾತ್ರಿ 9 ಗಂಟೆ ಸುಮಾರಿನಲ್ಲಿ ಶೀಲ ಎಂಬುವರು ಡಿ ಗ್ರೂಪ್ ಲೇಔಟ್‍ನ ಪೂರ್ಣಚಂದ್ರ ಲೇಔಟ್ 22ನೇ ಕ್ರಾಸ್‍ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ್ ಸೈಕಲ್‍ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ತಕ್ಷಣ ಶೀಲಾ […]