ಸಮಾಜ ಕಲ್ಯಾಣ ಇಲಾಖೆ ಹೆಸರಲ್ಲಿ ವಂಚನೆ ವಂಚಿಸುತ್ತಿದ್ದ ಮೂವರ ಬಂಧನ

ಬೆಂಗಳೂರು, ಜ.25- ಬಿಬಿಎಂಪಿ ಸಮಾಜ ಕಲ್ಯಾಣ ಇಲಾಖೆ ಹೆಸರೇಳಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಜಾಲವೊಂದನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ. ವಿದ್ಯಾರಣ್ಯಪುರದ ಹರ್ಷ(20), ವಿಜಯನಗರದ ರೂಪೇಶ್(18) ಮತ್ತು ಬಾಪೂಜಿ ನಗರದ ಮೋಹನ್ ಅಲಿಯಾಸ್ ಬೋರ(21) ಬಂಧಿತ ವಂಚಕರು. ಬಿಬಿಎಂಪಿಯ ಸಮಾಜ ಕಲ್ಯಾಣ ಇಲಾಖೆಯ ಹೆಸರನ್ನು ಬಳಸಿಕೊಂಡು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್‍ಗಳನ್ನು ಕೊಡುತ್ತೇವೆಂದು ಸಾರ್ವಜನಿಕರಿಗೆ ಕರೆ ಮಾಡಿ ನಂಬಿಸಿ, ಹಣ ಹಾಕಿಸಿಕೊಂಡು ಅಮಾಯಕ ಜನರನ್ನು ಈ ಮೂವರು ವಂಚಿಸುತ್ತಿದ್ದರು. ವಿದ್ಯಾರಣ್ಯಪುರದ ವ್ಯಕ್ತಿಯೊಬ್ಬರಿಗೆ […]

ಡ್ರಗ್ ಪೆಡ್ಲಿಂಗ್ : ರೌಡಿ ಸೇರಿ ಮೂವರು ವಶಕ್ಕೆ

ಬೆಂಗಳೂರು, ಜ.3- ಡ್ರಗ್ ಪೆಡ್ಲಿಂಗ್‍ನಲ್ಲಿ ತೊಡಗಿದ್ದ ರೌಡಿ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 3 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಮ್ರಾನ್ ಬಾಷಾ, ಶಹಬಾಜ್ ಖಾನ್, ರೌಡಿ ಸೈಯದ್ ಯಾರಬ್ ಬಂಧಿತ ಡ್ರಗ್ ಪೆಡ್ಲರ್‍ಗಳು. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕೊಲೆ ಪ್ರಕರಣದ ಆರೋಪಿಯಾಗಿರುವ ಸೈಯದ್ ಯಾರಬ್ ಅದೇ ಠಾಣೆಯ ರೌಡಿ ಪಟ್ಟಿಯಲ್ಲಿ ಈತನ ಹೆಸರಿದೆ. ಈತ ಸಹಚರರ ಗುಂಪು ಕಟ್ಟಿಕೊಂಡು ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಬ್ಬ ರೌಡಿಯಿಂದ ಮಾದಕ ವಸ್ತುಗಳನ್ನು […]

ರಕ್ತಚಂದನ ಕಳ್ಳಸಾಗಾಣೆ-ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಬೆಂಗಳೂರು, ಡಿ.26- ಆಂಧ್ರ ಪ್ರದೇಶದಿಂದ ರಕ್ತ ಚಂದನ ಮರಗಳನ್ನು ಕಳ್ಳಸಾಗಣೆ ಮಾಡಿಕೊಂಡು ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿ 29 ಲಕ್ಷ ಮೌಲ್ಯದ ರಕ್ತ ಚಂದನ ತುಂಡುಗಳು ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕೊಡಿಗೇನಹಳ್ಳಿ ನಿವಾಸಿಗಳಾದ ಎಜಾಜ್, ಶೌಖತ್ ಮತ್ತು ಇಮ್ತಿಯಾಜ್ ಬಂಧಿತ ಆರೋಪಿಗಳು.ಆರೋಪಿಗಳು ಕರ್ನಾಟಕ, ತಮಿಳು ನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ರಕ್ತ ಚಂದನ ತುಂಡುಗಳನ್ನು ಆಂಧ್ರಪ್ರದೇಶದ ಕಾಡಿನಿಂದ ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ […]

ಬೆಂಗಳೂರಲ್ಲಿ ಡಬಲ್ ಮರ್ಡರ್ ಕೇಸ್ ಪ್ರಕರಣ, ಕಾರು ಚಾಲಕ ಸೇರಿ ಮೂವರು ಅರೆಸ್ಟ್

ಬೆಂಗಳೂರು, ಡಿ. 20- ಉದ್ಯಮಿ ರಾಜಗೋಪಾಲ ರೆಡ್ಡಿ ಅವರ ಮನೆಯ ಕೆಲಸಗಾರ ಹಾಗೂ ಸೆಕ್ಯುರಿಟಿ ಗಾರ್ಡ್‍ನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಕಾರು ಚಾಲಕ ಸೇರಿದಂತೆ ಮೂವರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ ಹಣ, ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಗ್ಗನಹಳ್ಳಿಯ ನಿವಾಸಿ, ಕುಣಿಗಲ್ ತಾಲೂಕಿನ ಕಾರು ಚಾಲಕ ಜಗದೀಶ್ ಹಾಗೂ ಮೂಲತಃ ನಾಗಮಂಗಲ ತಾಲೂಕಿನವರಾದ ಹೆಗ್ಗನಹಳ್ಳಿಯ ನಿವಾಸಿ, ಸಹೋದರರಾದ ಅಭಿಷೇಕ್ ಮತ್ತು ಕಿರಣ್ ಬಂಧಿತ ಆರೋಪಿಗಳು.ಪ್ರಮುಖ ಆರೋಪಿ ಜಗದೀಶ್ ಈ ಹಿಂದೆ ಉದ್ಯಮಿ ರಾಜಗೋಪಾಲ ರೆಡ್ಡಿ ಅವರ […]

ರೌಡಿ ಕಾರಿನ ಮೇಲೆ ಗುಂಡಿನ ಸುರುಮಳೆಗೈದಿದ್ದ ಮೂವರ ಬಂಧನ

ಬೆಂಗಳೂರು, ಡಿ.10- ಆಂಧ್ರಪ್ರದೇಶದ ಮದನ ಪಲ್ಲಿಯ ರೌಡಿ ಹಾಗೂ ಆತನ ಕಾರು ಚಾಲಕನ ಮೇಲೆ ಗುಂಡಿ ನ ಸುರಿಮಳೆಗೈದು ಕೊಲೆಗೆ ಪ್ರಯತ್ನಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ವೈಟ್‍ಫೀಲ್ಡ್ ವಿಭಾಗದ ವಿಶೇಷ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳ ಬಂಧನಕ್ಕಾಗಿ ರಚಿಸಲಾಗಿದ್ದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ಆಂಧ್ರದ ಪ್ರಕಾಶಂ ಜಿಲ್ಲೆಯ ಮುಂಡ್ಲಮೂರಿನಲ್ಲಿ ಆರೋಪಿಗಳಾದ ಮನೋಜ್‍ಕುಮಾರ್, ಜಯಪ್ರಕಾಶ್ ಹಾಗೂ ಪ್ರವೀಣ್‍ನನ್ನು ಬಂಧಿಸಿದೆ. ಆಂಧ್ರಪ್ರದೇಶದ ತಂಬಲಪಲ್ಲಿಯ ವನಮರೆಡ್ಡಿಗಾರುಪಲ್ಲಿ ಗ್ರಾಮದ ರೌಡಿ ಶಿವಶಂಕರ್ ರೆಡ್ಡಿಯ ತಂದೆ ಜಯಚಂದ್ರರೆಡ್ಡಿ ಕುಟುಂಬದವರಿಗೂ ಇವರ ಮನೆ ಪಕ್ಕದ […]