ಹೊಲದಲ್ಲಿ ನಾಲ್ಕು ಮುದ್ದಾದ ಹುಲಿ ಮರಿಗಳು ಪತ್ತೆ

ಹೈದರಾಬಾದ್.ಮಾ.9-ದಾರಿ ತಪ್ಪಿದ ನಾಲ್ಕು ಹುಲಿ ಮರಿಗಳನ್ನು ತಾಯಿ ಬಳಿ ಸೇರಿಸಲು ಆಂಧ್ರ ಅರಣ್ಯಾಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ. ಆಂಧ್ರಪ್ರದೇಶದ ನಂದ್ಯಾಲ-ಕರ್ನೂಲ್ ಪ್ರದೇಶ ಬಳಿಯ ಕೃಷಿ ಹೊಲದಲ್ಲಿ ನಾಲ್ಕು ಮುದ್ದಾದ ಹುಲಿ ಮರಿಗಳು ಪತ್ತೆಯಾಗಿವೆ. ಸಣ್ಣ ಹುಲಿ ಮರಿಗಳನ್ನು ಬೀದಿ ನಾಯಿಗಳಿಂದ ರಕ್ಷಿಸಲು ಅವರು ಮೊದಲು ಅವುಗಳನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿ ನಂತರ ಪಶುವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮರಿಗಳನ್ನು ಕಳೆದುಕೊಂಡಿರುವ ಹುಲಿ ಆಕ್ರಮಣಕಾರಿಯಾಗುವ ಸಾಧ್ಯತೆ ಇರುವುದರಿಂದ ಹುಲಿ ಮರಿಗಳನ್ನು ತಾಯಿ ಹುಲಿ ಬಳಿಗೆ ಸೇರಿಸಲು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು […]