ಭಯಂಕರ ಸುಂಟರಗಾಳಿಗೆ 6 ಮಂದಿ ಬಲಿ

ವಾಷಿಂಗ್ಟನ್,ಜ.13- ದಕ್ಷಿಣ ಅಮೇರಿಕದ ಅಲ್ಬಾಮಾ ರಾಜ್ಯದಲ್ಲಿ ಬೀಸಿದ ಸುಂಟರಗಾಳಿ ಮತ್ತು ಚಂಡಮಾರುತಕ್ಕೆ 6 ಮಂದಿ ಬಲಿಯಾಗಿದ್ದಾರೆ. ಅಲಬಾಮಾದಲ್ಲಿ ಸುಂಟರಗಾಳಿ ಸೃಷ್ಟಿಸಿದ ಅವಾಂತರದಲ್ಲಿ ಸಾಕಷ್ಟು ಹಾನಿಯಾಗಿದ್ದು, ಹಲವಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. 6 ಮಂದಿ ಬಲಿಯಾಗಿದ್ದು, ಇನ್ನಿತರ ಹಲವಾರು ಮಂದಿ ಕಣ್ಮರೆಯಾಗಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಸಂಜೆ ಕಾಣಿಸಿಕೊಂಡ ಸುಂಟರಗಾಳಿ ನಂತರ ನೆರೆಯ ರಾಜ್ಯವಾದ ಜಾರ್ಜಿಯಾದತ್ತ ತೆರಳಿದ್ದು ಅಲ್ಲೂ ಸಾಕಷ್ಟು ಅನಾಹುತ ಸೃಷ್ಟಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಡಲ್ಲೆಸ್ ಕೌಂಟಿಯಲ್ಲಿ ಸುಂಟರಗಾಳಿಯು ಕಟ್ಟಡಗಳ ಮೇಲ್ಛಾವಣಿ ಹಾರಿ […]