ಗಾಂಧಿ,- ಶಾಸ್ತ್ರಿಗೆ ಪ್ರಧಾನಿ ಮೋದಿ ನಮನ
ನವದೆಹಲಿ, ಅ.2 – ಮಹಾತ್ಮ ಗಾಂಧಿ ಅವರಿಗೆ ಗೌರವವಾಗಿ ಸ್ಮರಿಸಿ ನಮಿಸಿ ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ಎಲ್ಲರೂ ಖರೀದಿಸಿ ಎಂದು ಪ್ರಧಾನಿ ನರೇಂದ್ರ ಮೊದಿ ದೇಶದ ಜನತೆಗೆ ಕರೆ ನೀಡಿದ್ದಾರೆ. ಇದೇ ವೇಳೆ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಂಡು ಇಂದು ಅವರ ಜನ್ಮ ವಾರ್ಷಿಕೊತ್ಸವದಲ್ಲಿ ಅವರ ಸರಳತೆ ಮತ್ತು ದೇಶ ಸೇವೆಯ ಬದ್ದತೆ ಅಜರಾಮರ ಎಂದು ಇಬ್ಬರು ಮಹನೀಯರಿಗೆ ಶ್ರದ್ಧಾಂಜಲಿ ಅರ್ಪಿಸಿ ದ್ದಾರೆ. ಈ ಗಾಂಧಿ ಜಯಂತಿ ಇನ್ನಷ್ಟು […]
ದೇಶದಲ್ಲಿ ಕ್ರೀಡೆ ಮತ್ತಷ್ಟು ಪ್ರಖ್ಯಾತಿ ಪಡೆಯಲಿ : ಧ್ಯಾನ್‍ಚಂದ್‍ಗೆ ಮೋದಿ ನಮನ
ನವದೆಹಲಿ, ಆ. 29- ದೇಶದಲ್ಲಿ ಕ್ರೀಡೆಗಳು ಮತ್ತಷ್ಟು ಪ್ರಖ್ಯಾತಗೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್‍ರ ಜನ್ಮದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ವರ್ಷ ದೇಶವು ಕ್ರೀಡೆಯಲ್ಲಿ ಬಲು ದೊಡ್ಡ ಸಾಧನೆ ಮಾಡಿದೆ ಎಂದು ಕ್ರೀಡಾಪಟುಗಳ ಗುಣಗಾನ ಮಾಡಿ ಧ್ಯಾನ್‍ಚಂದ್‍ಗೆ ನಮನ ಸಲ್ಲಿಸಿದರು. 1905 ಆಗಸ್ಟ್ 29 ರಂದು ಜನಿಸಿದ ಮೇಜರ್ ಧ್ಯಾನ್‍ಚಂದ್ ಅವರು ಹಾಕಿಯಲ್ಲಿ ತಮ್ಮದೇ ಆದ ಮೈಲುಗಲ್ಲನ್ನು […]
ರಾಜೀವ್ ಗಾಂಧಿ ಜನ್ಮದಿನ : ತಂದೆಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಹುಲ್, ಪ್ರಿಯಾಂಕಾ
ನವದೆಹಲಿ,ಆ.20- ಭಾರತದ ಮಾಜಿ ಪ್ರಧಾನಿ, ರಾಜೀವ್ ಗಾಂಧಿ ಅವರ 78ನೇ ಜಯಂತಿ ಅಂಗವಾಗಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ವೀರ ಭೂಮಿಗೆ ತೆರಳಿ ತಮ್ಮ ತಂದೆಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ, ಸಂಸದ ಕೆ.ಸಿ.ವೇಣುಗೋಪಾಲ್, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ನಮನ ಸಲ್ಲಿಸಿದ್ದಾರೆ. ಹಾಗಯೇ ಹಲವಾರು ಸಚಿವರು ಮತ್ತು ನಾಯಕರು ಟ್ವೀಟ್ ಮಾಡಿ, ರಾಷ್ಟ್ರದ ಅಭಿವೃದ್ಧಿಗೆ ಮಾಜಿ ಪ್ರಧಾನಿಯವರ […]
ಪುಣ್ಯತಿಥಿ: ವಾಜಪೇಯಿ ಸ್ಮಾರಕಕ್ಕೆ ಗಣ್ಯರ ನಮನ
ನವದೆಹಲಿ,ಆ.16- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 4ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಖರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ದೆಹಲಿಯಲ್ಲಿರುವ ಎ.ಬಿ.ವಾಜಪೇಯಿ ಅವರ ಸದೈವ್ ಅಟಲ್ ಸ್ಮಾರಕಕ್ಕೆ ತೆರಳಿದ ರಾಷ್ಟ್ರ ನಾಯಕರು ಅವರಿಗೆ ಗೌರವ ನಮನ ಸಲ್ಲಿಸಿದರು. ಪ್ರಧಾನಿ ಮೋದಿಯಲ್ಲದೆ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಲೋಕಸಭಾ ಸ್ಪೀಕರ್ ಓಂ […]