ಖಲಿಸ್ತಾನಿಗಳ ಕಿರಿಕ್ : ಬ್ರಿಟನ್ ರಾಯಭಾರಿ ಕಚೇರಿ ಮೇಲೆ ಮತ್ತೆ ರಾರಾಜಿಸಿದ ತಿರಂಗಾ

ನವದೆಹಲಿ,ಮಾ.20-ಭಾರತದಲ್ಲಿ ಖಲಿಸ್ತಾನಿ ನಾಯಕ ಅಮೃತ್‍ಪಾಲ್ ಬಂಧನಕ್ಕೆ ತೀವ್ರ ಕಾರ್ಯಚರಣೆ ನಡೆಸಿರುವ ಬೆನ್ನಲ್ಲೇ ಲಂಡನ್ ಆತನ ಬೆಂಬಲಿಗರು ಭಾರತೀಯ ಹೈ ಕಮೀಷನ್ ಕಚೇರಿ ಮೇಲೆ ಹಾರಿಸಲಾಗಿದ್ದ ರಾಷ್ಟ್ರಧ್ವಜ ಕೆಳಗಿಳಿಸಿ ಅಟ್ಟಹಾಸ ಮೆರೆದಿದ್ದಾರೆ. ಲಂಡನ್‍ನಲ್ಲಿರುವ ಆಲ್ಡ್‍ವಿಚ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲಿನ ರಾಷ್ಟ್ರಧ್ವಜವನ್ನು ಖಲಿಸ್ತಾನಿಗಳು ಕೆಳಗಿಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬ್ರಿಟನ್ ಸರ್ಕಾರ ಕೂಡಲೇ ಬೃಹತ್ ತ್ರಿವರ್ಣ ಧ್ವಜಾರೋಹಣ ನೆರವೇರಿಸುವಲ್ಲಿ ಯಶಸ್ವಿಯಾಗಿದೆ. ಲಂಡನ್‍ನ ಆಲ್ಡ್‍ವಿಚ್‍ನಲ್ಲಿರುವ ಇಂಡಿಯಾ ಹೌಸ್‍ನಲ್ಲಿ ಬೃಹತ್ ರಾಷ್ಟ್ರಧ್ವಜ ಹಾರಾಡುತ್ತಿರುವ ಛಾಯಾಚಿತ್ರವು ವೈರಲ್ ಆಗಿದ್ದು, […]

ತ್ರಿವರ್ಣ ಧ್ವಜ ನಿರಾಕರಿಸಿ ವಿವಾದಕ್ಕೆ ಸಿಲುಕಿದ ಜೈಶಾ

ನವದೆಹಲಿ,ಆ.29- ಪಾಕಿಸ್ತಾನ ಮತ್ತು ಭಾರತದ ನಡುವಿನ ಹೈವೊಲ್ಟೇಜ್ ಪಂದ್ಯಾವಳಿಯ ಗೆಲುವಿನ ಸಂಭ್ರಮಾಚರಣೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಭಾರತೀಯ ತ್ರಿವರ್ಣ ಧ್ವಜ ಹಿಡಿಯಲು ನಿರಾಕರಿಸಿರುವುದು ವಿವಾದಕ್ಕೀಡಾಗಿದೆ. ನಿನ್ನೆ ದುಬೈನಲ್ಲಿ ನಡೆದ ಏಷ್ಯಾ ಕಪ್-2022ರ ಪಂದ್ಯಾವಳಿಯಲ್ಲಿ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಜೋಡಿಯ ಸಹಾಯದಿಂದ ಭಾರತ ಪಾಕಿಸ್ತಾನವನ್ನು ಐದು ವಿಕೆಟ್‍ಗಳಿಂದ ಸೋಲಿಸುವ ಹಂತದಲ್ಲಿ ಕ್ರೀಡಾಂಗಣದಲ್ಲಿ ಭಾರೀ ಕರತಾಡನ ಕೇಳಿ ಬಂತು. ಅಭಿಮಾನಿಗಳು ಚಪ್ಪಾಳೆ ತಟ್ಟಿ ತಮ್ಮ ಅಭಿಮಾನವನ್ನು ಮೆರೆದರು. ಈ ಸಂದರ್ಭದಲ್ಲಿ ಜೈ ಶಾ ಕೂಡ […]