ಓಮ್ನಿ ಕಾರಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

ಬೆಂಗಳೂರು, ಜ.20- ಓಮ್ನಿ ವಾಹನದಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರನ್ನು ಬಾಣಸವಾಡಿ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿ 30 ಲಕ್ಷ ರೂ. ಬೆಲೆಬಾಳುವ ಒಂದು ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕೇರಳದ ಪನಯಾಂಪದಂ ನಿವಾಸಿ ಅನಂತು (29) ಮತ್ತು ನಂದೀಪುಲಂನ ಬಾಬು (40) ಬಂಧಿತರು. ಇತ್ತೀಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಿಗಳಾಗುತ್ತಿರುವ ಬಗ್ಗೆ ಹಾಗೂ ಸಮಾಜದ ಶಾಂತಿ ಮತ್ತು ನೆಮ್ಮದಿ ಹಾಳಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಬಾಣಸವಾಡಿ ಠಾಣೆ ಪೊಲೀಸರು […]

ಮೊಬೈಲ್ ಟವರ್​​ಗಳಿ ಅಳವಡಿಸಿದ್ದ RRU ಬಾಕ್ಸ್ ಕದ್ದಿದ್ದ ಇಬ್ಬರ ಬಂಧನ

ಬೆಂಗಳೂರು, ಜ.19- ಮೊಬೈಲ್ ಟವರ್‍ಗೆ ಅಳವಡಿಸಿದ ಆರ್‌ಆರ್‌ಯು ಬಾಕ್ಸ್‍ಗಳನ್ನು ಕಳವು ಮಾಡಿದ ಇಬ್ಬರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿ 11 ಲಕ್ಷ ಮೌಲ್ಯದ 14 ಆರ್‍ಆರ್‍ಯು ಬಾಕ್ಸ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಂಗೇರಿ ಹೋಬಳಿಯ ಚೆಳ್ಳೇಘಟ್ಟ ನಿವಾಸಿ ದೀಪಕ್ ರಾವ್ ಪವಾರ್(22) ಮತ್ತು ಜಾನ್‍ಪಿಂಟು(20) ಬಂಧಿತರು.ಆರೋಪಿಗಳು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ 11 ಲಕ್ಷ ಮೌಲ್ಯದ ಮೊಬೈಲ್ ಟವರ್‍ಗೆ ಅಳವಡಿಸಿದ್ದ 14 ಆರ್‍ಆರ್‍ಯು ಬಾಕ್ಸ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಂಗೇರಿ ಉಪನಗರ 80 ಅಡಿ ರಸ್ತೆ ಕಾರ್ಡಿಯಾಲಜಿ ಆಸ್ಪತ್ರೆ ಕಟ್ಟಡದ […]

8.92 ಕೋಟಿ ಮೌಲ್ಯದ 12 ಕಾರುಗಳ ವಶ : ಇಬ್ಬರು ಬಂಧನ

ಬೆಂಗಳೂರು, ಡಿ.26- ಕಳವು ಹಾಗೂ ಮೋಸದಿಂದ ಕಾರುಗಳನ್ನು ಪಡೆದು ವಂಚಿಸುತ್ತಿದ್ದ ಆರೋಪಿ ಸೇರಿದಂತೆ ಇಬ್ಬರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿ 8 ಕೋಟಿ 92 ಲಕ್ಷ ರೂ. ಬೆಲೆಬಾಳುವ 12 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರುಗಳನ್ನು ಮಾರಾಟ ಮಾಡಿ ಹಣ ಕೊಡುವುದಾಗಿ ನಂಬಿಸಿ ಮಾಲೀಕರನ್ನು ಯಾಮಾರಿಸುತ್ತಿದ್ದ ಪ್ರಮುಖ ಆರೋಪಿ ಜಬ್ರಾನ್ ಹಾಗೂ ಕಳವು ಮಾಲೆಂದು ಗೊತ್ತಿದ್ದರೂ ಈತನಿಂದ ಕಾರು ಪಡೆದುಕೊಂಡಿದ್ದ ಹೇಮೀಚಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಸತೀಶ್ ಎಂಬುವರು ಜನವರಿ 9ರಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ […]

35 ಲಕ್ಷ ಬೆಲೆಯ ಗಾಂಜಾ ವಶ : ಇಬ್ಬರ ಬಂಧನ

ಬೆಂಗಳೂರು,ಡಿ.24- ಮಾದಕವಸ್ತು ಗಾಂಜಾವನ್ನು ಒಡಿಶಾ ಮತ್ತು ಆಂಧ್ರದ ಗಡಿ ಪ್ರದೇಶದ ಕಾಡುಜನರಿಂದ ಕಡಿಮೆ ಬೆಲೆಗೆ ಖರೀದಿಸಿ ತಂದು ಮೂಟೆಗಳಲ್ಲಿಟ್ಟುಕೊಂಡು ಮಾರಲು ಯತ್ನಿಸುತ್ತಿದ್ದ ಒರಿಸ್ಸಾ ಮೂಲದ ಇಬ್ಬರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿ 35 ಲಕ್ಷ ಬೆಲೆ ಬಾಳುವ ಗಾಂಜಾ ವಶಪಡಿಸಿಕೊಂಡಿದ್ದಾರೆ. ಒರಿಸ್ಸಾದ ಗಂಜಾಂ ಜಿಲ್ಲೆಯ ಬಿಜೆಯನಗರಗಡದ ಜಾಗಿಲ್ ಸೇಥಿ ಅಲಿಯಾಸ್ ಜಾಕಿಲ್ ಶೆಟ್ಟಿ(44) ಮತ್ತು ಮುರುಳಿ ಬೆಹ್ರ ಅಲಿಯಾಸ್ ಮುರುಳಿ(26) ಬಂಧಿತರು. ಕೋಣನಕುಂಟೆ ವ್ಯಾಪ್ತಿಯ ಪಿಳ್ಳಗಾನಹಳ್ಳಿ ಡಿಪೋ ಪಕ್ಕದಲ್ಲಿರುವ ಬಯಲು ಪ್ರದೇಶದ ಪಾಳುಬಿದ್ದ ಮನೆಯಲ್ಲಿ ಇಬ್ಬರು ಗಾಂಜಾ […]

ಆಂಧ್ರದ ರೌಡಿಯ ಕಾರು ಚಾಲಕನ ಮೇಲೆ ಗುಂಡು ಹಾರಿಸಿದ್ದ ಮತ್ತಿಬ್ಬರ ಬಂಧನ

ಬೆಂಗಳೂರು, ಡಿ.20- ಆಂಧ್ರಪ್ರದೇಶದ ರೌಡಿ ಶಿವಶಂಕರ ರೆಡ್ಡಿ ಹಾಗೂ ಅವರ ಕಾರು ಚಾಲಕನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಕೆಆರ್ ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ತಂಬಲ ಪಲ್ಲಿ, ಕುರುಬಲಕೋಟದ ವನಮರೆಡ್ಡಿಗಾರುಪಲ್ಲಿ ಗ್ರಾಮದ ನಿವಾಸಿ, ರೌಡಿ ಶಿವಶಂಕರ ರೆಡ್ಡಿ ಹಾಗೂ ಕಾರು ಚಾಲಕ ಅಶೋಕ್ ರೆಡ್ಡಿ ಅವರ ಮೇಲೆ ಡಿ. 8ರಂದು ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ದುಷ್ಕರ್ಮಿಗಳು ಏಕಾಏಕಿ ಪಿಸ್ತೂಲಿನಿಂದ ಗುಂಡುಗಳನ್ನು ಹಾರಿಸಿ […]

ನಕಲಿ ಕೀ ಬಳಸಿ- ಹ್ಯಾಂಡ್‍ಲಾಕ್ ಮುರಿದು ಕಳ್ಳತನ

ಬೆಂಗಳೂರು, ಡಿ.15- ದ್ವಿಚಕ್ರ ವಾಹನಗಳ ಹ್ಯಾಂಡ್ ಲಾಕ್ ಮುರಿದು ಹಾಗೂ ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿ ಐದು ಲಕ್ಷ ಬೆಲೆಬಾಳುವ ಹತ್ತು ದ್ವಿಚಕ್ರ ವಾಹನಗಳು ಹಾಗೂ ಮಾರುತಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ನಗರದ ನಿವಾಸಿಗಳಾದ ಶ್ರೀನಿವಾಸ್ ಅಲಿಯಾಸ್ ಎಕ್ಸ್‍ಎಲ್ ಸೀನ(22) ಮತ್ತು ಸೈಯದ್ ವಾಸೀಮ್ ಅಕ್ರಂ(23) ಬಂಧಿತ ಆರೋಪಿಗಳು. ಈ ಇಬ್ಬರು ಪಾರ್ಕಿಂಗ್ ಸ್ಥಳಗಳಲ್ಲಿ ಹಾಗೂ ಮನೆ ಮುಂದೆ ನಿಲ್ಲಿಸಿದಂತಹ ದ್ವಿಚಕ್ರ ವಾಹನಗಳನ್ನು ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದರಲ್ಲದೆ, […]

ಒಂಟಿಯಾಗಿ ವಾಸವಾಗಿದ್ದ ನಿವೃತ್ತ ಶಿಕ್ಷಕಿ ಕೊಲೆ ಮಾಡಿದ್ದ ಇಬ್ಬರ ಸೆರೆ

ಬೆಂಗಳೂರು,ಸೆ.17-ಆಭರಣಗಳನ್ನು ದೋಚುವ ಸಲುವಾಗಿ ಒಂಟಿಯಾಗಿ ವಾಸವಾಗಿದ್ದ ನಿವೃತ್ತ ಶಿಕ್ಷಕಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಎದುರು ಮನೆ ನಿವಾಸಿ ಸೇರಿದಂತೆ ಇಬ್ಬರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ 68ಗ್ರಾಂ ಚಿನ್ನಾಭರಣ, ಬೈಕ್ ಹಾಗೂ ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾರಣ್ಯಪುರದ ನಾಗೇಂದ್ರ (31) ಮತ್ತು ಆಂಧ್ರಪ್ರದೇಶದ ರಾಮರಾಜು ಅಲಿಯಾಸ್ ವಿಜಯ್ (28) ಬಂಧಿತರು.ಅಂಬಾಭವಾನಿ ಲೇಔಟ್, 1ನೇ ಹಂತದ ಮನೆಯೊಂದರ 2ನೇ ಮಹಡಿಯಲ್ಲಿ ನಿವೃತ್ತ ಶಿಕ್ಷಕಿ ಪ್ರಸನ್ನಕುಮಾರಿ (68) ಅವರು ಒಂಟಿಯಾಗಿ ವಾಸಿಸುತ್ತಿದ್ದರು. ಇವರು ಮೂಲತಃ ಆಂಧ್ರಪ್ರದೇಶದ ವಿಜಯವಾಡದವರು. ಸೆ.8ರಂದು ಮಧ್ಯಾಹ್ನ […]