ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

ಹೇಗ್,ಮಾ.18-ಉಕ್ರೇನಿಯನ್ ಮಕ್ಕಳನ್ನು ಕಾನೂನುಬಾಹಿರವಾಗಿ ಗಡಿಪಾರು ಮಾಡಿದ ಯುದ್ಧ ಅಪರಾಧದ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಬಂಧನ ವಾರಂಟ್ ಪ್ರಕಟಿಸಿದೆ. ಇದೇ ಆರೋಪದ ಮೇಲೆ ಮಕ್ಕಳ ಹಕ್ಕುಗಳ ರಷ್ಯಾದ ಅಧ್ಯಕ್ಷೀಯ ಕಮಿಷನರ್ ಮರಿಯಾ ಲ್ವೊವಾ-ಬೆಲೋವಾ ವಿರುದ್ಧವೂ ವಾರೆಂಟ್ ಹೊರಡಿಸಿರುವುದಾಗಿ ಹೇಗ್ ಮೂಲದ ಕೋರ್ಟ್ ಹೇಳಿದೆ. ಕೋರ್ಟ್ ಆದೇಶವನ್ನು ಉಕ್ರೇನ್ ಸ್ವಾಗತಿಸಿದೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಪ್ರಶಂಸಿದ್ದಾರೆ. ಚೀನಾದ ನಾಯಕ ಕ್ಸಿ ಜಿನ್‍ಪಿಂಗ್‍ನಿಂದ ಮಾಸ್ಕೋ […]
ಯುದ್ಧ ನಿಲ್ಲಿಸುವಂತೆ ಭಾರತ ರಷ್ಯಾದ ಮನವೊಲಿಸಲಿಸಬೇಕು : ಅಮೆರಿಕ

ನವದೆಹಲಿ,ಫೆ.11- ಉಕ್ರೇನ್ ಯುದ್ಧವನ್ನು ನಿಲ್ಲಿಸಲು ರಷ್ಯಾಗೆ ಇನ್ನೂ ಸಮಯವಿದೆ ಯುದ್ದ ನಿಲ್ಲಿಸುವಂತೆ ರಷ್ಯಾ ಮನವೊಲಿಸುವ ಕಾರ್ಯವನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈಗೊಂಡರೆ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಅಮೆರಿಕಾ ಅಭಿಪ್ರಾಯಪಟ್ಟಿದೆ. ಯುದ್ಧವನ್ನು ನಿಲ್ಲಿಸಲು ಪುಟಿನ್ ಅವರಿಗೆ ಇನ್ನೂ ಸಮಯವಿದೆ ಎಂದು ನಾನು ಭಾವಿಸುತ್ತೇನೆ. ಪ್ರಧಾನಿ ಮೋದಿ ಅವರು ಕೈಗೊಳ್ಳಲು ಸಿದ್ಧರಿರುವ ಯಾವುದೇ ಪ್ರಯತ್ನಗಳ ಬಗ್ಗೆ ಮಾತನಾಡಲು ನಾವು ಮುಕ್ತ ಅವಕಾಶ ನೀಡುತ್ತೇನೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. […]
ಉಕ್ರೇನ್ ಜನವಸತಿ ಕಟ್ಟಡದ ಮೇಲೆ ರಷ್ಯಾ ರಾಕೆಟ್ ದಾಳಿ, ಮೂವರ ಸಾವು

ಉಕ್ರೇನ್,ಫೆ.2- ಜನವಸತಿ ಕಟ್ಟಡದ ಮೇಲೆ ರಷ್ಯಾ ನಡೆಸಿದ ರಾಕೆಟ್ ದಾಳಿಗೆ ಮೂವರು ಬಲಿಯಾಗಿದ್ದು, 20ಕ್ಕೂ ಹೆಚ್ಚು ನಾಗರೀಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಪೂರ್ವ ನಗರದ ಕ್ರಾಮಾಟೋಸ್ರ್ಕ್‍ನಲ್ಲಿ ನಡೆದಿದೆ. ಎರಡು ಗಂಟೆಗಳ ಹಿಂದೆ, ರಷ್ಯಾದ ಆಕ್ರಮಣಕಾರರು ನಗರದ ಮಧ್ಯಭಾಗದಲ್ಲಿರುವ ವಸತಿ ಕಟ್ಟಡವನ್ನು ರಾಕೆಟ್‍ನಿಂದ ಹೊಡೆದು ಅದನ್ನು ಸಂಪೂರ್ಣವಾಗಿ ನಾಶಪಡಿಸಿದರು ಎಂದು ಪ್ರಾದೇಶಿಕ ಗವರ್ನರ್ ಪಾವ್ರೋ ಕಿರಿಲೆಂಕೊ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ತಮ್ಮ ಅಧಿಕೃತ ವೆಬ್‍ಸೈಟ್‍ನಲ್ಲಿ ಮೂವರು ನಾಗರಿಕರು ಹತರಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ […]
ರಷ್ಯಾ-ಉಕ್ರೇನ್ ಯುದ್ಧ ನಿರ್ಣಾಯಕ ಹಂತದಲ್ಲಿದೆ : ಬಿಡೆನ್

ವಾಷಿಂಗ್ಟನ್, ಜ.6-ರಷ್ಯಾ – ಉಕ್ರೇನ್ ಯುದ್ಧ ಇದೀಗ ನಿರ್ಣಾಯಕ ಹಂತದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ. ರಷ್ಯಾದ ಆಕ್ರಮಣವನ್ನು ಎದುರಿಸಲು ಉಕ್ರೇನಿಯನ್ನರಿಗೆ ಏನ್ನೆಲ್ಲಾ ಸಹಾಯ ಮಾಡಬೇಕೊ ಅದನ್ನು ನಾವು ಮಾಡಿದ್ದೇವೆ ಎಂದು ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಜಪಾನ್ ಒಳಗೊಂಡಂತೆ ನಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳುವ ಇತರ ದೇಶಗಳ ದೊಡ್ಡ ತಂಡವನ್ನು ನಾವು ಹೊಂದಿದ್ದೇವೆ. ಆದರೆ ನಾವು ಏನು ಮಾಡಲಿದ್ದೇವೆ ಎಂಬುದರ ಕುರಿತು ಸುದೀರ್ಘವಾಗಿ ಚರ್ಚಿಸಿದ್ದೇವೆ ಎಂದು ಅವರು ಹೇಳಿದರು. ನಾವು ಉಕ್ರೇನ್‍ಗೆ ಬೆಂಬಲವನ್ನು […]
ಅಮೆರಿಕದ ಶ್ವೇತಭವನದಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ..!

ಕೀವ್,ಡಿ.21-ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ರಷ್ಯಾ ತೀವ್ರತರ ದಾಳಿ ಮುಂದುವರೆಸಿರುವ ಸಂದರ್ಭದಲ್ಲಿ ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಅವರು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರನ್ನು ಭೇಟಿಯಾಗಲು ತೀರ್ಮಾನಿಸಿದ್ದಾರೆ. ಕಳೆದ ಫೆಬ್ರವರಿಯಿಂದಲೇ ರಷ್ಯಾ ಉಕ್ರೇನ್ ಮೇಲೆ ನಿರಂತರ ದಾಳಿ ನಡೆಸುತ್ತಲೆ ಬಂದಿದೆ. ಆದರೆ, ಇದುವರೆಗೂ ವಿದೇಶ ಪ್ರವಾಸ ಕೈಗೊಳ್ಳದ ಅಧ್ಯಕ್ಷರು ಇದೇ ಮೊದಲ ಬಾರಿಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಉಭಯ ನಾಯಕರು ಶ್ವೇತಭವನದಲ್ಲಿ ಭೇಟಿಯಾಗುವ ನಿರೀಕ್ಷೆಯಿದೆ. ಝೆಲೆನ್ಸ್ಕಿಯವರ ಭೇಟಿಯ ನಂತರ […]
ಉಕ್ರೇನ್ ರಾಜಧಾನಿ ಕೀವ್ ವಶಕ್ಕೆ ಪಡೆಯಲು ಸಜ್ಜಾದ ರಷ್ಯಾ ಪಡೆ

ಕೀವ್, ಡಿ.16- ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ಮತ್ತೆ ದಾಳಿ ಮಾಡಲು ರಷ್ಯಾ 200,000 ಹೊಸ ಪಡೆಗಳನ್ನು ಸಿದ್ಧಪಡಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಕೀವ್ ನಗರದ ಮೇಲೆ ದಾಳಿ ನಡೆಸಲು ರಷ್ಯನ್ನರು ಎರಡು ಲಕ್ಷ ಹೊಸ ಪಡೆಗಳನ್ನು ಸಿದ್ದಪಡಿಸಿದ್ದಾರೆ ಎಂದು ಉಕ್ರೇನ್ ಸೇನೆಯ ಜನರಲ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಜನರಲ್ ವ್ಯಾಲೆರಿ ಜಲುಜ್ನಿ ಅವರು ರಷ್ಯ ಸೇನೆ ಕೀವ್ ನಗರವನ್ನು ವಶಕ್ಕೆ ಪಡೆದುಕೊಳ್ಳಲೇಬೇಕು […]
ರಷ್ಯಾ-ಉಕ್ರೇನ್ ಸಂಘರ್ಷ ಕುರಿತು ಜಿ-20 ಸಮ್ಮೇಳನದಲ್ಲಿ ಮೋದಿ ಪ್ರಸ್ತಾಪ

ಬಾಲಿ,ನ.15- ಉಕ್ರೇನ್ ಮತ್ತು ರಷ್ಯಾ ಸಂಘರ್ಷದ ಕುರಿತು ಜಿ-20 ಸಮ್ಮೇಳನದಲ್ಲಿ ಪ್ರಸ್ತಾಪ ಮಾಡಿರುವ ಪ್ರಧಾನಿ ನರೇಂದ್ರಮೋದಿ ಅವರು, ಶಾಂತಿ ಪಾಲನೆಗಾಗಿ ಕದನ ವಿರಾಮ ಮತ್ತು ರಾಜತಾಂತ್ರಿಕ ಮಾರ್ಗಗಳಿಗೆ ಮರಳುವಂತೆ ಒತ್ತಾಯಿಸಿದ್ದಾರೆ. ಇದೇ ವೇಳೆ ರಷ್ಯಾ ಮೇಲೆ ವಿಧಿಸಲಾಗಿರುವ ಹಲವು ನಿರ್ಬಂಧಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಿ-20 ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆ, ಕೋವಿಡ್-19, ಉಕ್ರೇನ್ ಬೆಳವಣಿಗೆಗಳು ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಪ್ರಧಾನಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ, ವಿಶ್ವದಲ್ಲಿ ಸರಬರಾಜು ಸರಪಳಿಗೆ ಧಕ್ಕೆಯಾಗಲು ಅವಕಾಶ ನೀಡಬಾರದು ಎಂದು ಪ್ರತಿಪಾದಿಸಿದ್ದಾರೆ. […]
ಉಕ್ರೇನ್ ಮೇಲೆ ಅಣ್ವಸ್ತ್ರ ಪ್ರಯೋಗಿಸಲ್ಲ: ಪುಟಿನ್

ಮಾಸ್ಕೋ, ಅ.28- ಉಕ್ರೇನ್ ಮೇಲೆ ಪರಮಾಣು ಆಸ್ತ್ರ ಪ್ರಯೋಗಿಸುವ ಯಾವುದೇ ಉದ್ದೇಶವನ್ನು ರಷ್ಯಾ ಹೊಂದಿಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿಪ್ರಾಯಪಟ್ಟಿದ್ದಾರೆ. ಅಂತರಾಷ್ಟ್ರೀಯ ವಿದೇಶಾಂಗ ನೀತಿ ತಜ್ಞರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ ಬೆಂಬಲಕ್ಕೆ ನಿಲ್ಲುವ ಮೂಲಕ ತಮ್ಮ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ಅಂತವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಅವರ ಎಚ್ಚರಿಸಿದರು. ರಷ್ಯಾವನ್ನು ರಕ್ಷಿಸಲು ಲಭ್ಯವಿರುವ ಎಲ್ಲಾ ವಿಧಾನಗಳನ್ನು ಬಳಸಲು ಸಿದ್ದ ಎಂಬ ನಮ್ಮ ಹೇಳಿಕೆಯನ್ನು […]
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ತಡೆಯುವಲ್ಲಿ ವಿಶ್ವಸಂಸ್ಥೆ ವಿಫಲ : ಜಪಾನ್ ಪ್ರಧಾನಿ
ವಿಶ್ವಸಂಸ್ಥೆ,ಸೆ.21- ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ತಡೆಯುವಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವೈಫಲ್ಯವಿದೆ ಎಂದು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾಗತಿಕ ಶಾಂತಿ ಮತ್ತು ಸುವ್ಯವಸ್ಥೆ ಸಂರಕ್ಷಿಸಲು ವಿಶ್ವಸಂಸ್ಥೆ ಕೂಡಲೆ ಸುಧಾರಣಾ ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿದ್ದಾರೆ. ವಿಶ್ವ ಶಾಂತಿಯನ್ನು ಕಾಪಾಡುವಲ್ಲಿ ವಿಶ್ವಸಂಸ್ಥೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ಅಂತರರಾಷ್ಟ್ರೀಯ ಕ್ರಮದ ಅಡಿಪಾಯವು ಇದೀಗ ಹಿಂಸಾತ್ಮಕವಾಗಿ ಅಲುಗಾಡುತ್ತಿದೆ ಎಂದು ಕಿಶಿಡಾ ವಿಶ್ವ ನಾಯಕರ ವಾರ್ಷಿಕ ಅದಿವೇಶನದ ಭಾಷಣದಲ್ಲಿ ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ […]
BIG NEWS : ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಕಾರು ಅಪಘಾತ, ಗಂಭೀರ ಗಾಯ
ಕೈವ್, ಸೆ.15- ಉಕ್ರೇನ್‍ನ ಅಧ್ಯಕ್ಷ ಝೆಲೆನ್‍ಸ್ಕಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ರಷ್ಯಾ ವಿರುದ್ಧ ನಡೆಯುತ್ತಿರುವ ಯುದ್ಧದ ನಡೆವೆಯೇ ಉಕ್ರೇನ್ ಸೇನಾ ಪಡೆಯ ಯೋಧರನ್ನು ಭೇಟಿ ಮಾಡಿ ಕೈವ್‍ಗೆ ತೆರಳುತ್ತಿದ್ದಾಗ ಅವರ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-09-2022) ಅಪಘಾತವಾಗುತ್ತಿದ್ದಂತೆಯೇ ಗಾಯಗೊಂಡಿದ್ದ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ […]