ವಿಮಾನದಲ್ಲಿ ಸಿಗರೇಟ್ ಸೇದಿದ ವ್ಯಕ್ತಿ, ಇದೆಂಥಾ ಭದ್ರತೆ..?

ಡೆಹ್ರಾಡೂನ್,ಆ.11- ವಿಮಾನದಲ್ಲಿ ವ್ಯಕ್ತಿಯೊಬ್ಬ ಧೂಮಪಾನ ಮಾಡುತ್ತಿರುವ ವಿಡಿಯೋ ವಿವಾದಕ್ಕೆ ಕಾರಣವಾಗಿರುವ ಜೊತೆ ಭದ್ರತೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಉತ್ತರಖಂಡ್‍ನ ಶಾಸಕ ಉಮೇಶ್ ಕುಮಾರ್ ಅವರು ತಮ್ಮ ಟ್ವೀಟರ್‍ನಲ್ಲಿ ಹಂಚಿಕೊಂಡಿರುವ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಿಮಾನದ ಸೀಟಿನಲ್ಲಿ ಅಡಗಿಕೊಳ್ಳುವಂತೆ ಮಲಗಿ ಕಾಲ ಮೇಲೆ ಕಾಲು ಹಾಕಿದ್ದು, ಲೈಟರ್‍ನಿಂದ ಸಿಗರೇಟ್ ಅಂಟಿಸಿ ಧೂಮಪಾನ ಮಾಡಿದ್ದಾನೆ. ಅದೇ ವಿಮಾನದ ಮುಂಭಾಗ ಸೀಟ್‍ಗಳಲ್ಲಿ ಪ್ರಯಾಣಿಕರು ಕುಳಿತಿರುವು ಕಂಡುಬಂದಿದೆ. ಆತ ಸಿಗರೇಟ್ ಸೇದುವುದನ್ನು ಮತ್ತೊಬ್ಬ ವ್ಯಕ್ತಿ ವಿಡಿಯೋ ಮಾಡಿದ್ದಾರೆ. […]