ನೀರಿನ ಮಟ್ಟ ಹಠಾತ್ ಏರಿಕೆಯಾಗಿ ಜಲಪಾತದ ಬಳಿ ಸಿಲುಕಿದ್ದ 40 ಪ್ರವಾಸಿಗರ ರಕ್ಷಣೆ

ಪಣಜಿ, ಅ.15- ಭಾರೀ ಮಳೆಯಿಂದ ನೀರಿನ ಮಟ್ಟ ಹಠಾತ್ ಏರಿಕೆಯಾಗಿ ಮಾಂಡೋವಿ ನದಿಯ ಮೇಲಿನ ಸಣ್ಣ ಸೇತುವೆ ಕೊಚ್ಚಿಹೋಗಿದ್ದರಿಂದ ದಕ್ಷಿಣ ಗೋವಾದ ದೂಧ್‍ಸಾಗರ್ ಜಲಪಾತದ ಬಳಿ ಸಿಲುಕಿಕೊಂಡಿದ್ದ ಸುಮಾರು 40 ಪ್ರವಾಸಿಗರನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮಾಂಡೋವಿ ನದಿಯ ಬಳಿ ಬಂದಿದ್ದ 40 ಪ್ರವಾಸಿಗರು ಕೊಚ್ಚಿಹೋದರು. ಇವರು ದೂಧ್‍ಸಾಗರ್ ಜಲಪಾತದ ಬಳಿ ಸಿಲುಕಿಕೊಂಡಿದ್ದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ನಡೆಸಿ ಜೀವ ಉಳಿಸಲಾಗಿದೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು […]