ಅಂಬ್ರೋನಾಲ್, ಡಾಕ್-1 ಕಾಫ್ ಸಿರಫ್ ಬಳಕೆ ನಿಷೇಧ

ಜಿನೀವಾ,ಜ.12- ಭಾರತದ ಮೂಲದ ಬಯೋಟೆಕ್ ಸಂಸ್ಥೆ ತಯಾರಿಸಿರುವ ಎರಡು ಕೆಮ್ಮಿನ ಸಿರಪ್‍ಗಳನ್ನು ಮಕ್ಕಳ ಮೇಲೆ ಬಳಕೆ ಮಾಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಸಂಸ್ಥೆ ತಯಾರಿಸಿರುವ ಕೆಮ್ಮಿನ ಸಿರಪ್‍ಗಳು ಗುಣಮಟ್ಟದ ಮಾನದಂಡಗಳನ್ನು ಹಾಗೂ ವಿಶೇಷಣಗಳನ್ನು ಪೂರೈಸಲು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂಬ್ರೋನಾಲ್ ಹಾಗೂ ಡಾಕ್-1 ಕಾಫ್ ಸಿರಫ್‍ಗಳನ್ನು ಸೇವಿಸಿದ ಮಕ್ಕಳು ಸಾವನ್ನಪ್ಪಿದ ನಂತರ ವಿಶ್ವ ಆರೋಗ್ಯ ಸಂಸ್ಥೆ ಈ ನಿರ್ಧಾರ ಕೈಗೊಂಡಿರುವುದರಿಂದ […]

ಕೋವಿಡ್ ವಾಸ್ತವ ದತ್ತಾಂಶ ಹಂಚಿಕೊಳ್ಳಲು ಚೀನಾಗೆ ವಿಶ್ವಸಂಸ್ಥೆ ಸೂಚನೆ

ಜಿನೇವಾ,ಡಿ.31- ಕೋವಿಡ್ ಸೋಂಕುಗಳು ಹಾಗೂ ಆರೋಗ್ಯ ಪರಿಸ್ಥಿತಿಯ ಕುರಿತು ವಾಸ್ತವ ಅಂಕಿ ಅಂಶಗಳನ್ನು ಹಂಚಿಕೊಳ್ಳುವಂತೆ ವಿಶ್ವಸಂಸ್ಥೆ ಚೀನಾಗೆ ಸೂಚನೆ ನೀಡಿದೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಚೀನಾದ ಅಧಿಕಾರಿಗಳ ನಡುವೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ. ಚೀನಾದಲ್ಲಿ ಕೋವಿಡ್ ಶೂನ್ಯ ಪಾಲಿಸಿ ಸಡಿಲಿಸಿದ ಮೇಲೆ ಸೋಂಕಿನ ಪ್ರಮಾಣ ಏರಿಕೆಯಾಗಿದೆ, ಸಾವಿನ ಪ್ರಕರಣಗಳಲ್ಲೂ ಹೆಚ್ಚಳವಾಗಿದೆ ಎಂಬ ವರದಿಗಳಿವೆ. ಚೀನಾ ಕೂಡ ಇದ್ದಕ್ಕಿದ್ದಂತೆ ಸೋಂಕಿನ ಪ್ರಕರಣಗಳ ಕುರಿತ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದೆ. 2019ರಲ್ಲಿ ಕೋವಿಡ್ ಕಾಣಿಸಿಕೊಂಡ […]

ಮಂಕಿ ಫಾಕ್ಸ್ : ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆ

ನವದೆಹಲಿ, ಆ.1- ಕೋವಿಡ್ ಬಳಿಕ ಮಂಕಿಫಾಕ್ಸ್ ಸೋಂಕು ಹರಡುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದ್ದು, ರೋಗ ಹರಡುವಿಕೆ ಮೇಲೆ ತೀವ್ರ ನಿಗಾ ವಹಿಸಿದೆ. ವಿಶ್ವದ ಸುಮಾರು 75 ರಾಷ್ಟ್ರಗಳಲ್ಲಿ 16 ಸಾವಿರಕ್ಕೂ ಹೆಚ್ಚು ಮಂದಿ ಮಂಕಿ ಫಾಕ್ಸ್ ಸೋಂಕಿಗೆ ಸಿಲುಕಿದ್ದಾರೆ. ಹೀಗಾಗಿ ಇತ್ತೀಚೆಗೆ ಸಭೆ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ. ಈ ಹಿಂದೆ ಎಬೋಲಾ, ಹೆಚ್-1ಎನ್-1, ಜೈಕಾ, ಕೋವಿಡ್-19 ಸೇರಿದಂತೆ 7ಕ್ಕೂ ಹೆಚ್ಚು […]