Tuesday, July 1, 2025
Homeರಾಜ್ಯಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಸೀಲ್ದಾರ್‌

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಸೀಲ್ದಾರ್‌

Tahsildar falls into Lokayukta trap while accepting bribe

ಬೆಂಗಳೂರು,ಜು.1- ಜಮೀನಿನ ಖಾತೆ ಮಾಡಿಕೊಡಲು ಲಂಚ ಪಡೆಯುವಾಗ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್‌-2 ತಹಸೀಲ್ದಾರ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಡಿ.ಎ.ದಿವಾಕರ್‌ ಅವರನ್ನು ವಶಕ್ಕೆ ಪಡೆದಿರುವ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೆಲಮಂಗಲ ತಾಲ್ಲೂಕು ಗಿರಿಯನಪಾಳ್ಯದಲ್ಲಿ 8.20 ಎಕರೆ ಜಮೀನು ನ್ಯಾಯಾಲಯದ ಆದೇಶದಂತೆ ನೋಂದಣಿ ಮಾಡಿ ಖಾತೆ ಮಾಡಿಕೊಡಲು 2 ಲಕ್ಷ ಲಂಚದ ಬೇಡಿಕೆ ಇಡಲಾಗಿತ್ತು.

ನಂತರ 1.5 ಲಕ್ಷ ರೂಗೆ ಮಾತುಕತೆ ನಡೆದು ದೊಡ್ಡಬಳ್ಳಾಪುರದ ಶ್ರೀನಿಧಿ ಮೈಭವ್‌ ಹೋಟೆಲ್‌ ಬಳಿ ಕಾರಿನಲ್ಲಿ ದೂರುದಾರರಿಂದ ಹಣ ಪಡೆಯುವಾಗ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ರಮೇಶ್‌ ಮತ್ತಿತರರ ತಂಡ ರೆಡ್‌ಹ್ಯಾಂಡ್‌ ಆಗಿ ಗ್ರೇಡ್‌-2 ತಹಸೀಲ್ದಾರ್‌ ಡಿ.ದಿವಾಕರ್‌ ಸಿಕ್ಕಿಬಿದ್ದಿದ್ದಾರೆ.

RELATED ARTICLES

Latest News