Thursday, November 21, 2024
Homeರಾಷ್ಟ್ರೀಯ | Nationalಹೊಸ ರಾಜಕೀಯ ಪಕ್ಷ ಘೋಷಿಸಿದ ಇಳಯದಳಪತಿ ವಿಜಯ್

ಹೊಸ ರಾಜಕೀಯ ಪಕ್ಷ ಘೋಷಿಸಿದ ಇಳಯದಳಪತಿ ವಿಜಯ್

ಚೆನ್ನೈ, ಫೆ.2- ಕಾಲಿವುಡ್‍ನ ಖ್ಯಾತ ನಟ ಇಳಯದಳಪತಿ ವಿಜಯ್ ಅವರು ಫೆಬ್ರವರಿ 2 (ಶುಕ್ರವಾರ)ರಂದು ತಮ್ಮ ರಾಜಕೀಯ ಪಕ್ಷ ಘೋಷಿಸಿದ್ದು, ತಮಿಳುನಾಡಿನ ರಾಜಕೀಯದಲ್ಲಿ ಹೊಸ ಸಂಚಲನ ಉಂಟಾಗಿದೆ. ತಮ್ಮ ರಾಜಕೀಯ ಪಕ್ಷಕ್ಕೆ ವಿಜಯ್ ತಮಿಳಗ ವೆಟ್ರಿ ಕಳಂ' ಎಂದು ಹೆಸರಿಟ್ಟಿದ್ದಾರೆ.

ಲೋಕಸಭೆಗೆ ಕೆಲವೇ ತಿಂಗಳು ಬಾಕಿ ಉಳಿದಿರುವಾಗಲೇ ಅವರು ತಮ್ಮ ಹೊಸ ಪಕ್ಷ ಘೋಷಿಸಿದ್ದರೂ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ರ್ಪಧಿಸದೆ 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ರಾಜಕೀಯದಲ್ಲಿ ಅದರಲ್ಲೂ ಮುಖ್ಯವಾಗಿ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಲು ಹೊರಟಿರುವ ವಿಜಯ್ ಅವರು, ಪಾರದರ್ಶಕ, ಜಾತ್ಯತೀತ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವುದೇ ನನ್ನ ಪರಮ ಗುರಿ ಎಂದು ತಾವು ಬರೆದಿರುವ ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ.

ಕಳೆದ ವಾರವಷ್ಟೇ ತಮ್ಮ ಅಭಿಮಾನಿ ಸಂಘವಾದ ವಿಜಯ್ ಮಕ್ಕಳ್ ಇಯಕ್ಕಂನೊಂದಿಗೆ ಚೆನ್ನೈನಲ್ಲಿ ಸಭೆ ನಡೆಸಿದ್ದ ದಳಪತಿ ವಿಜಯ್ ಅಂದು ಘೋಷಿಸಿದಂತೆ ಫೆಬ್ರವರಿ 2 (ಶುಕ್ರವಾರ)ರಂದು ತಮ್ಮ ಹೊಸ ಪಕ್ಷವನ್ನು ಘೋಷಿಸಿ ಅದನ್ನು ನೋಂದಣಿ ಮಾಡಲು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರಜೆಗಳು ಬಯಸಿದಂತೆ ಪಾರದರ್ಶಿಕ ಆಡಳಿತ ತರುವ ದೃಷ್ಟಿಯಿಂದ ಇಂದು ನಾವು ಚುನಾವಣಾ ಆಯೋಗದಲ್ಲಿ ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷದ ಹೆಸರನ್ನು ನೋಂದಾಯಿಸಲು ಅರ್ಜಿ ಸಲ್ಲಿಸಿದ್ದು, 2026ರ ತಮಿಳುನಾಡು ವಿಧಾನಸಭಾ ಚುನಾವಣೆ ಮೂಲಕ ಅಖಾಡಕ್ಕೆ ಇಳಿಯುತ್ತೇವೆ’ ಎಂದು ವಿಜಯ್ ಹೇಳಿದ್ದಾರೆ.

ಮಂಡ್ಯ ಬಂದ್ ನಡೆಸಲು ಮುಂದಾದ ಪ್ರತಿಪಕ್ಷಗಳ ವಿರುದ್ಧ ಸಚಿವ ಚೆಲುವರಾಯಸ್ವಾಮಿ ಕಿಡಿ

`ಸಿನಿಮಾರಂಗದಂತೆ ರಾಜಕೀಯ ನನ್ನ ಮತ್ತೊಂದು ವೃತ್ತಿಯಲ್ಲ. ರಾಜಕೀಯ ಭಯದಲ್ಲಿರುವವರು ಮಾಡುವ ಕೆಲಸ. ಹಲವು ವರ್ಷಗಳಿಂದ ನಾನು ರಾಜಕೀಯಕ್ಕೆ ಬರಲು ಪೂರ್ವತಯಾರಿ ನಡೆಸುತ್ತಿದ್ದೆ. ರಾಜಕೀಯ ನನ್ನ ಬಯಕೆಯಾಗಿದೆಯೇ ವಿನಃ ಹವ್ಯಾಸ ಅಲ್ಲ. ನಾನು ಇದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ’ ಎಂದು ವಿಜಯ್ ತಿಳಿಸಿದ್ದಾರೆ.

ಸದ್ಯಕ್ಕೆ ಈಗ ಚುನಾವಣಾ ಆಯೋಗದಲ್ಲಿ ಪಕ್ಷದ ಹೆಸರನ್ನು ನೋಂದಾಯಿಸಲು ಅರ್ಜಿ ಸಲ್ಲಿಸಿದ್ದು ಅಲ್ಲಿಂದ ಹಸಿರುನಿಶಾನೆ ಬಂದ ನಂತರ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಸಭೆ ನಡೆಸಿ ಪಕ್ಷದ ಚಿನ್ಹೆ ಸೇರಿದಂತೆ ಮತ್ತಿತರ ಮಾಹಿತಿಗಳನ್ನು ಬಹಿರಂಗಪಡಿಸುತ್ತೇನೆ ಎಂದು ವಿಜಯ್ ಹೇಳಿದ್ದಾರೆ.

RELATED ARTICLES

Latest News