ಚೆನ್ನೈ, ಜು.1- ತಮಿಳುನಾಡಿನ ಶಿವಕಾಶಿ ಸಂಭವಿಸಿದ ಪಟಾಕಿ ಸ್ಫೋಟಕ್ಕೆ ಏಳು ಮಂದಿ ಬಲಿಯಾಗಿದ್ದಾರೆ.ಶಿವಕಾಶಿಯ ಚಿನ್ನಕಾಮನಪಟ್ಟಿಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದು, ಐದು ಮಂದಿ ಗಾಯಗೊಂಡಿದ್ದು ಸಾವಿ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಚಿಕಿತ್ಸೆ ಗಾಗಿ ವಿರುಧುನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ವಿರುಧುನಗರ ಜಿಲ್ಲಾ ಎಸ್‌ಪಿ ಕಣ್ಣನ್ ತಿಳಿಸಿದ್ದಾರೆ.
- ಐದು ರಾಷ್ಟ್ರಗಳ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ, ಟೀಕಿಸಿದ ಕಾಂಗ್ರೆಸ್
- ರಾಜ್ಯದಲ್ಲಿ ಮೂರು ದಿನಗಳ ಕಾಲ ಸಾಧಾರಣ ಮಳೆ ನಿರೀಕ್ಷೆ
- ಬಿಎಸ್ಎಫ್ ಯೋಧನ ಪತ್ನಿ ಮೇಲೆ ಅತ್ಯಾಚಾರ
- ನನಗೆ ಮಂತ್ರಿಗಿರಿಯ ಆಸೆಯಿಲ್ಲ : ರಾಜುಕಾಗೆ
- ಕೋಲಾರದಲ್ಲಿ ರಾಜಕೀಯ ಕಾದಾಟ, ಶಾಸಕರ ನಡುವೆ ಬಹಿರಂಗ ವಾಕ್ಸಮರ