Sunday, September 8, 2024
Homeರಾಷ್ಟ್ರೀಯ | Nationalಅನುದಾನಿತ ಶಾಲೆಗಳಿಗೂ ಉಪಹಾರ ಯೋಜನೆ ವಿಸ್ತರಿಸಿದ ಸ್ಟಾಲಿನ್‌

ಅನುದಾನಿತ ಶಾಲೆಗಳಿಗೂ ಉಪಹಾರ ಯೋಜನೆ ವಿಸ್ತರಿಸಿದ ಸ್ಟಾಲಿನ್‌

ಚೆನ್ನೈ, ಜು 15 (ಪಿಟಿಐ) ಪ್ರಾಥಮಿಕ ಶಾಲಾ ಮಕ್ಕಳ ಉಪಹಾರ ಯೋಜನೆಯನ್ನು ಸರ್ಕಾರಿ ಅನುದಾನಿತ ಖಾಸಗಿ ಶಾಲೆಗಳಿಗೆ ವಿಸ್ತರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ತೀರ್ಮಾನಿಸಿದ್ದಾರೆ.ತಿರುವಳ್ಳೂರು ಜಿಲ್ಲೆಯ ಸೇಂಟ್‌ ಆನ್ಸ್ ಶಾಲೆಯಲ್ಲಿ ಯೋಜನೆಯನ್ನು ಉದ್ಘಾಟಿಸಿದ ಸ್ಟಾಲಿನ್‌ ಅವರು ಮಕ್ಕಳೊಂದಿಗೆ ಕುಳಿತು ಅವರಿಗೆ ಊಟ ಬಡಿಸಿದರು ಮತ್ತು ಅವರೊಂದಿಗೆ ಊಟ ಮಾಡಿದರು.

ಯೋಜನೆಯ ವಿಸ್ತರಣೆಯು ದಿವಂಗತ ಮುಖ್ಯಮಂತ್ರಿ ಕೆ ಕಾಮರಾಜ್‌ ಅವರ ಜನದಿನವನ್ನು ಗುರುತಿಸುತ್ತದೆ, ಇದನ್ನು ರಾಜ್ಯ ಸರ್ಕಾರವು ಶಿಕ್ಷಣ ಅಭಿವದ್ಧಿ ದಿನ ಎಂದು ಆಚರಿಸುತ್ತದೆ. ಈ ಕ್ರಮದಿಂದ ರಾಜ್ಯಾದ್ಯಂತ 3,995 ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ 2,23,536 ಮಕ್ಕಳಿಗೆ ಪ್ರಯೋಜನವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಸೆಪ್ಟೆಂಬರ್‌ 15, 2022 ರಂದು ಮುಖ್ಯಮಂತ್ರಿಗಳು ಉಪಹಾರ ಯೋಜನೆಯನ್ನು ಉದ್ಘಾಟಿಸಿದಾಗ, 1,545 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 5 ನೇ ತರಗತಿಯ 1.14 ಲಕ್ಷ ವಿದ್ಯಾರ್ಥಿಗಳು ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದರು. 2023 ರಂದು ರಾಜ್ಯದಾದ್ಯಂತ ಯೋಜನೆಯ ವಿಸ್ತರಣೆಯೊಂದಿಗೆ, ಎಲ್ಲಾ 30,992 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 18.50 ಲಕ್ಷ ವಿದ್ಯಾರ್ಥಿಗಳನ್ನು ಉಪಕ್ರಮಡಿ ಯೋಜನೆ ವಿಸ್ತರಿಸಲಾಗಿತ್ತು.

ಅನುದಾನಿತ ಶಾಲೆಗಳನ್ನು ಯೋಜನೆಯ ವ್ಯಾಪ್ತಿಗೆ ತರುವ ಮೂಲಕ ಒಟ್ಟು 21.87 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. ಅಲ್ಲದೆ, ಈ ಯೋಜನೆಯು ಸರ್ಕಾರಿ ಮತ್ತು ರಾಜ್ಯ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತದೆ.

RELATED ARTICLES

Latest News