Monday, May 19, 2025
Homeರಾಷ್ಟ್ರೀಯ | Nationalಹೊಂಡಕ್ಕೆ ಕಾರು ಬಿದ್ದು ದಂಪತಿ ದುರ್ಮರಣ

ಹೊಂಡಕ್ಕೆ ಕಾರು ಬಿದ್ದು ದಂಪತಿ ದುರ್ಮರಣ

ಚೆನ್ನೈ,ಏ.29- ನೀರು ತುಂಬಿದ್ದ ಹೊಂಡಕ್ಕೆ ಕಾರು ಬಿದ್ದು ಕಾರಿನಲ್ಲಿದ್ದ ದಂಪತಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತೆಂಕಶಿ ಜಿಲ್ಲೆಯ ಶಂಕರಕೋಯಿಲ್‌ ಬಳಿ ತಿರುನಲ್ವೇಲಿ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ರಸ್ತೆ ಬದಿಯ ನೀರು ತುಂಬಿದ್ದ ಹೊಂಡಕ್ಕೆ ಕಾರು ಬಿದ್ದ ಪರಿಣಾಮ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ದಂಪತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಂಡಕ್ಕೆ ಬಿದ್ದು ಮೃತಪಟ್ಟ ದಂಪತಿಯನ್ನು ವೆಂಕಟೇಶ್‌ ಮತ್ತು ಸುಮಿತ್ರಾ ಎಂದು ಗುರುತಿಸಲಾಗಿದೆ. ದಂಪತಿ ಪಳಯಂಕೊಟ್ಟೈನಲ್ಲಿರುವ ಸಂಬಂಧಿಕರ ನಿವಾಸದಿಂದ ಹಿಂತಿರುಗುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

RELATED ARTICLES

Latest News