Wednesday, August 20, 2025
Homeರಾಜ್ಯಮಾಸ್ಕ್‌ ಮ್ಯಾನ್‌ಗೆ ಬುರುಡೆ ಕೊಟ್ಟಿದ್ದು ನಾನಲ್ಲ : ಸಂಸದ ಸಸಿಕಾಂತ್‌ ಸೆಂಥಿಲ್‌

ಮಾಸ್ಕ್‌ ಮ್ಯಾನ್‌ಗೆ ಬುರುಡೆ ಕೊಟ್ಟಿದ್ದು ನಾನಲ್ಲ : ಸಂಸದ ಸಸಿಕಾಂತ್‌ ಸೆಂಥಿಲ್‌

Tamil Nadu MP Sasikanth Senthil Is 'Mastermind' Behind The Plot To Malign Dharmasthala

ನವದೆಹಲಿ, ಆ.20- ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ಮಾಸ್ಕ್‌ ಮ್ಯಾನ್‌ಗೆ ಬುರುಡೆ ಕೊಟ್ಟಿದ್ದು ನಾನು ಎಂಬ ಶಾಸಕ ಜನಾರ್ಧನ ರೆಡ್ಡಿ ಹೇಳಿಕೆಯನ್ನು ಸಂಸದ ಸಸಿಕಾಂತ್‌ ಸೆಂಥಿಲ್‌ ತಳ್ಳಿ ಹಾಕಿದ್ದಾರೆ.

ಜನಾರ್ದನ ರೆಡ್ಡಿ ಹೇಳಿಕೆಗಳು ಆಧಾರ ರಹಿತ, ಅದರಲ್ಲಿ ಯಾವುದೇ ಸತ್ಯವಿಲ್ಲ. ಬಳ್ಳಾರಿಯಲ್ಲಿ ನಾನು ಸಹಾಯಕ ಆಯುಕ್ತನಾಗಿದ್ದಾಗ ಅವರ ಅಪರಾಧಗಳನ್ನ ಬಹಿರಂಗಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ನನ್ನ ಕೆಲಸದ ಭಾಗವಾಗಿ ನಾನು ಇದನ್ನು ಮಾಡಿದ್ದೇನೆ. ಬಹುಶಃ ಆ ಕಾರಣಗಳಿಂದ ಅವರು ನನ್ನ ಮೇಲೆ ಇಂತಹ ಆರೋಪ ಮಾಡಿರಬಹುದು ಎಂದಿದ್ದಾರೆ.

ಇದನ್ನ ಹೊರತುಪಡಿಸಿ ಇದು ಬಿಜೆಪಿಯ ಹತಾಶ ರಾಜಕೀಯವಾಗಿರಬಹುದು ಎಂದು ತಿರುಗೇಟು ನೀಡಿದ್ದಾರೆ.ಇತ್ತಿಚೇಗೆ ಕರ್ನಾಟಕದಲ್ಲಿ ಹೊರ ಬಂದ ವೋಟ್‌ ಚೋರಿ ಪ್ರಕರಣದ ಗಮನವನ್ನ ಬೇರೆಡೆ ಸೆಳೆಯುವ ಪ್ರಯತ್ನಕ್ಕಾಗಿ ರೆಡ್ಡಿ ಆರೋಪ ಮಾಡಿರಬಹುದು. ವದಂತಿಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಮಾಜಿ ಐಎಎಸ್‌‍ ಅಧಿಕಾರಿ, ತಮಿಳುನಾಡಿನ ಕಾಂಗ್ರೆಸ್‌‍ ಸಂಸದ ಸಸಿಕಾಂತ್‌ ಸೆಂಥಿಲ್‌ ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟು ಕಳುಹಿಸಿದ್ದಾರೆ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪಿಸಿದ್ದರು.

ಕಳೆದ 15-20 ದಿನದಿಂದ ಧರ್ಮಸ್ಥಳದ ವಿಚಾರದಲ್ಲಿ ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಬಳ್ಳಾರಿ ಮೂಲದ ಅನ್ಯಮತಿಯ ಯುಟ್ಯೂಬರ್‌ ಒಬ್ಬ ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿದ ವಿಡಿಯೋಗೆ ಮಿಲಿಯನ್‌್ಸ ವ್ಯೂವ್‌್ಸ ಬಂತು. ಆಗ ಎಡ ಪಂತಿಯ ಮೂವರು ಸೇರಿಕೊಂಡು ಇದನ್ನ ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲು ಮುಂದಾದರು.

ಕರ್ನಾಟಕ, ಭಾರತ ಅಷ್ಟೇ ಅಲ್ಲ ಈ ಜಗತ್ತಿನಲ್ಲಿ ಕೋಟ್ಯಂತರ ಜನ ನಂಬುವ ಸತ್ಯ ದೇವರು ಧರ್ಮಸ್ಥಳ. ಇಂತಹ ಧರ್ಮಸ್ಥಳದ ಬಗ್ಗೆ ಎಡಪಂತಿಯರು ಸಸಿಕಾಂತ್‌ ಸೆಂಥಿಲ್‌ ಕಾಂಗ್ರೆಸ್‌‍ ಹೈಕಮಾಂಡ್‌ ಮೇಲೆ ಒತ್ತಡ ತಂದಿದ್ದಾರೆ. ಹೈಕಮಾಂಡ್‌ ಸರ್ಕಾರಕ್ಕೆ ಒತ್ತಡ ಹಾಕಿದ್ದರಿಂದ ವಿಶೇಷ ತನಿಖಾ ತಂಡ ರಚನೆಯಾಗಿದೆ. ಧರ್ಮಸ್ಥಳ ಬುರುಡೆ ರಹಸ್ಯದ ಮಾಸ್ಟರ್‌ ಮೈಂಡ್‌ ಸೆಂಥಿಲ್‌ ಎಂದು ರೆಡ್ಡಿ ಆರೋಪಿಸಿದ್ದರು.

RELATED ARTICLES

Latest News