Thursday, December 12, 2024
Homeರಾಷ್ಟ್ರೀಯ | Nationalಚೆನ್ನೈನಲ್ಲಿ ಮತ್ತೆ ಭಾರಿ ಮಳೆ, ಶಾಲೆಗಳಿಗೆ ರಜೆ ಘೋಷಣೆ

ಚೆನ್ನೈನಲ್ಲಿ ಮತ್ತೆ ಭಾರಿ ಮಳೆ, ಶಾಲೆಗಳಿಗೆ ರಜೆ ಘೋಷಣೆ

Tamil Nadu Rains: Schools Holiday Declared In 22 Districts Including Chennai

ಚೆನ್ನೈ, ಡಿ 12 (ಪಿಟಿಐ) ತಮಿಳುನಾಡಿನ ಕೆಲವು ಭಾಗಗಳಲ್ಲಿ ಇಂದು ವ್ಯಾಪಕ ಮಳೆಯಾಗಿದ್ದು, ಚೆನ್ನೈ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಚೆನ್ನೈ ಮತ್ತು ನೆರೆಯ ತಿರುವಳ್ಳೂರು, ಚೆಂಗಲ್‌ಪೇಟ್‌ ಮತ್ತು ಕಾಂಚೀಪುರಂ, ವಿಲ್ಲುಪುರಂ ಮತ್ತು ಕಾವೇರಿ ಡೆಲ್ಟಾ ಪ್ರದೇಶದ ಕೆಲವು ಪ್ರದೇಶಗಳಲ್ಲಿ ರಾತ್ರಿಯಿಡೀ ಮಳೆ ಸುರಿದಿದೆ.

ತೀವ್ರ ತುಂತುರು ಮಳೆಯ ನಂತರ, ಅಧಿಕಾರಿಗಳು ಚೆನ್ನೈ, ತಿರುವಳ್ಳೂರು, ಚೆಂಗಲ್‌ಪೇಟ್‌‍, ಕಾಂಚೀಪುರಂ, ವಿಲ್ಲುಪುರಂ, ರಾಮನಾಥಪುರಂ, ತಂಜಾವೂರು, ಮೈಲಾಡುತುರೈ ಮತ್ತು ಕಡಲೂರು ಸೇರಿದಂತೆ ಜಿಲ್ಲೆಗಳಲ್ಲಿ ಶಾಲೆಗಳಿಗೆ ಒಂದು ದಿನದ ರಜೆ ಘೋಷಿಸಿದ್ದಾರೆ.

ನೆರೆಯ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಜೊತೆಗೆ ರಾಜ್ಯದ ಚೆನ್ನೈ, ತಿರುವಳ್ಳೂರು, ಚೆಂಗಲ್‌ಪೇಟ್‌ ಮತ್ತು ಕಾಂಚೀಪುರಂ, ವಿಲ್ಲುಪುರಂ, ಕಲ್ಲಕುರಿಚಿ, ತಿರುವರ್ರೂ, ತಂಜಾವೂರು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ.

ಇದರ ಪರಿಣಾಮ ರಾಜ್ಯದ ಮೇಲೂ ಬಿದ್ದಿರುವುದರಿಂದ ಬೆಂಗಳೂರು ಸೇರಿದಂತೆ ಇತರ ಹಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆಗಳಿವೆ.

RELATED ARTICLES

Latest News