ಬೆಂಗಳೂರು, ನ.13- ಮೇಕೆದಾಟು ಯೋಜನೆಗೆ ಅಡ್ಡಿಪಡಿಸಿ, ತಮಿಳುನಾಡು ಸಲ್ಲಿಸಿದ ತಕರಾರು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸುವ ಮೂಲಕ ರಾಜ್ಯದ ಜನರ ಪ್ರಾರ್ಥನೆ ಫಲಿಸಿದೆ ಎಂದು ಜಲ ಸಂಪನೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟೆ ನಿರ್ಮಿಸಿರುವ ರಾಜ್ಯದ ಸದುದ್ದೇಶಕ್ಕೆ ಸಿಹಿ ಸುದ್ದಿ ಕೇಳಿ ಬಂದಿದೆ ಎಂದರು.ನಮ ನೀರು ನಮ ಹಕ್ಕು. ಕರ್ನಾಟಕಕ್ಕೆ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯ ಸಿಕ್ಕಿದೆ. ಜನರ ಭಾವನೆಗಳು ಮತ್ತು ಕಷ್ಟಗಳಿಗೆ ಸ್ಪಂದನೆ ದೊರಕಿದೆ. ಈ ತೀರ್ಪು ಮೇಕೆದಾಟು ಯೋಜನೆ ಮುಂದುವರಿಸಲು ಸಹಕಾರಿಯಾಗಬಹುದು ಎಂದು ಹೇಳಿದರು.
ಮೇಕೆದಾಟು ಯೋಜನೆಯಿಂದಾಗಿ ತಮಿಳುನಾಡು ತನ್ನ ಪಾಲಿನ ನೀರನ್ನು ಪಡೆದುಕೊಳ್ಳಲಿದೆ. ಕರ್ನಾಟಕ ಸರ್ಕಾರ ತನ್ನದೇ ನೆಲದಲ್ಲಿ ತಾನೇ ಹಣ ಖರ್ಚುಮಾಡಿ ಸಮತೋಲಿತ ಅಣೆಕಟ್ಟು ನಿರ್ಮಿಸುತ್ತದೆ. ಇದರಿಂದ ತಮಿಳುನಾಡಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಇಂತಹ ವಿಚಾರಗಳಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ಕೇಂದ್ರ ಜಲ ಆಯೋಗ ಬಗೆಹರಿಸಬೇಕೆಂದು ಸುಪ್ರೀಂಕೋರ್ಟ್ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಯೋಜನೆಗೆ ಅನುಮತಿ ನೀಡದೆ ಕೇಂದ್ರ ಜಲ ಆಯೋಗಕ್ಕೆ ಬೇರೆ ಆಯ್ಕೆಗಳಿಲ್ಲ. ಹೀಗಾಗಿ ನಮಗೆ ನ್ಯಾಯ ಒದಗಿಸಿಕೊಡಲೇ ಬೇಕು ಎಂದಿದ್ದಾರೆ.
