Friday, September 20, 2024
Homeಮನರಂಜನೆ"ನೆಪೋಲಿಯನ್" ಆಗಿ "ನಟ್ವರ್ ಲಾಲ್" ಆಗಮನ

“ನೆಪೋಲಿಯನ್” ಆಗಿ “ನಟ್ವರ್ ಲಾಲ್” ಆಗಮನ

ಇತ್ತೀಚೆಗೆ ತೆರೆಕಂಡ ತನುಷ್ ಶಿವಣ್ಣ ಅಭಿನಯದ “ನಟ್ವರ್ ಲಾಲ್” ಚಿತ್ರ ಜನಮನಸೂರೆಗೊಂಡಿತ್ತು. ಅಮೇಜಾನ್ ಪ್ರೈಮ್ ನಲ್ಲೂ ಈ ಚಿತ್ರವನ್ನು ಅಧಿಕ ಸಂಖ್ಯೆಯ ಜನರು ‌ವೀಕ್ಷಿಸುತ್ತಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸುತ್ತಿರುವ ಮತ್ತೊಂದು ಚಿತ್ರದ ಘೋಷಣೆಯಾಗಿದೆ.

ಚಿತ್ರಕ್ಕೆ “ನೆಪೋಲಿಯನ್” ಎಂದು ಹೆಸರಿಡಲಾಗಿದೆ. ಸಂಕ್ರಾಂತಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು “ನಟ್ವರ್ ಲಾಲ್” ಚಿತ್ರದ ನಿರ್ದೇಶಕ ಲವ ವಿ ಅವರೆ ನಿರ್ದೇಶಿಸುತ್ತಿದ್ದಾರೆ‌. “ವಿಕ್ರಾಂತ್ ರೋಣ” ಖ್ಯಾತಿಯ ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಹಾಗೂ “ಮಾರ್ಟಿನ್” ಖ್ಯಾತಿಯ ಮಹೇಶ್ ಅವರ ಸಂಕಲನ ಈ ನೂತನ ಚಿತ್ರಕ್ಕಿದೆ.

ಮುಂದಿನ ತಿಂಗಳ ಮಧ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಕರ್ನಾಟಕದ ಅನೇಕ‌ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಶೋಷಿತ ಹೆಣ್ಣುಮಕ್ಕಳ ಪರ ಧ್ವನಿ ಎತ್ತುವ ಕಥಾಹಂದರ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ದ್ಯಾವಿಪ್ರಸಾದ್ ಸಂಗೀತ ನೀಡುತ್ತಿದ್ದಾರೆ‌. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.

RELATED ARTICLES

Latest News