ಮಾಗಡಿ ತಾಲೂಕಿನ TAPCMS ಅಧ್ಯಕ್ಷರು ಹಾಗೂ ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರಾದ ಹೆಚ್.ಜಿ. ನಾರಾಯಣಸ್ವಾಮಿ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದು ಅವರ ಅಂತ್ಯ ಸಂಸ್ಕಾರ ಹುಲಿಕಟ್ಟೆಯಲ್ಲಿ ಇಂದು ಸಂಜೆ ನೆರವೇರಲಿದೆ. ಅವರ ನಿಧನಕ್ಕೆ ಕಟ್ಟೆಮನೆ ಕುಟುಂಬಸ್ಥರು ಹಾಗೂ TAPCMS ಮಾಗಡಿ ತಾಲೂಕು ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
