ನವದೆಹಲಿ,ಫೆ.14- ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಯುಕೆ-ಭಾರತ ವ್ಯವಹಾರ ಸಂಬಂಧಗಳಿಗೆ ನೀಡಿದ ಸೇವೆಗಾಗಿ ಯುನೈಟೆಡ್ ಕಿಂಗ್‌ಡಮ್‌ನ ಗೌರವ ನೈಟ್ ಹುಡ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅವರಿಗೆ ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂರ್ಪೆರ್ (ಸಿವಿಲ್ ಡಿವಿಷನ್) ಗೌರವ ಪ್ರಶಸ್ತಿ ನೀಡಲಾಗಿದೆ. ಚಂದ್ರಶೇಖರನ್ ಅವರಿಗೆ ಯುಕೆ-ಭಾರತ ವ್ಯವಹಾರ ಸಂಬಂಧಗಳಿಗೆ ನೀಡಿದ ಸೇವೆಗಾಗಿ ಹಿಸ್ ಮೆಜೆಸ್ಟಿ ಕಿಂಗ್ ಚಾರ್ಲ್ಸ್ ಅವರಿಂದ ಗೌರವ ನೈಟ್ ಹುಡ್ ಪ್ರಶಸ್ತಿಯನ್ನು ಪಡೆದರು ಎಂದು ಸಂಸ್ಥೆ ಎಕ್ಸ್ ಮಾಡಿದೆ.
ಮನ್ನಣೆ ಕುರಿತು ಪ್ರತಿಕ್ರಿಯಿಸಿದ ಚಂದ್ರಶೇಖರನ್ ಅವರು, ತಂತ್ರಜ್ಞಾನ, ಗ್ರಾಹಕ, ಆತಿಥ್ಯ, ಉಕ್ಕು, ರಾಸಾಯನಿಕಗಳು ಮತ್ತು ಆಟೋಮೋಟಿವ್ ವಲಯಗಳಲ್ಲಿ ಯುಕೆಯೊಂದಿಗೆ ಇಂತಹ ಬಲವಾದ ಕಾರ್ಯತಂತ್ರದ ಸಂಬಂಧವನ್ನು ಕಾಪಾಡಿಕೊಳ್ಳಲು ಟಾಟಾ ಗ್ರೂಪ್ ಹೆಮ್ಮೆಪಡುತ್ತದೆ ಎಂದಿದ್ದಾರೆ.
ಜಾಗ್ವಾರ್, ಲ್ಯಾಂಡ್ ರೋವರ್ ಮತ್ತು ಟೆಟ್ಟಿಯಂತಹ ನಮ್ಮ ಐಕಾನಿಕ್ ಬ್ರಿಟಿಷ್ ಬ್ರಾಂಡ್‌ಗಳ ಬಗ್ಗೆ ನಮಗೆ ನಂಬಲಾಗದಷ್ಟು ಹೆಮ್ಮೆಯಿದೆ. ನಾವು ಯುಕೆಯಲ್ಲಿ 70,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದ್ದೇವೆ. ಟಾಟಾ ಗ್ರೂಪ್, ಆಕ್ಸಫರ್ಡ್ ವಿಶ್ವವಿದ್ಯಾಲಯ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ವಾರ್ವಿಕ್ ವಿಶ್ವವಿದ್ಯಾಲಯ ಮತ್ತು ಸ್ವಾನ್ಸ್ ವಿಶ್ವವಿದ್ಯಾಲಯ ಸೇರಿದಂತೆ ಯುಕೆಯಲ್ಲಿರುವ ಶ್ರೇಷ್ಠ ಸಂಸ್ಥೆಗಳೊಂದಿಗೆ ಫಲಪ್ರದ ಮತ್ತು ವಿಶ್ವ ದರ್ಜೆಯ ಸಂಶೋಧನೆ ಮತ್ತು ಶೈಕ್ಷಣಿಕ ಪಾಲುದಾರಿಕೆಯನ್ನು ಹೊಂದಿದೆ ಎಂದು ಅವರು ಹೇಳಿದರು