Friday, November 22, 2024
Homeರಾಷ್ಟ್ರೀಯ | Nationalಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡಲು ಮುಂದಾದ ಟಾಟಾ ಸಂಸ್ಥೆ

ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡಲು ಮುಂದಾದ ಟಾಟಾ ಸಂಸ್ಥೆ

ರಾಂಚಿ, ಫೆ 13 (ಪಿಟಿಐ) ಟ್ರಾನ್ಸ್‌ಜೆಂಡರ್‌ಗಳನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಮುಂದಾಗುವ ಮೂಲಕ ಟಾಟಾ ಸ್ಟೀಲ್ ಹೊಸ ಇತಿಹಾಸ ಬರೆಯಲು ಮುಂದಾಗಿದೆ. ತಮ್ಮ ಸಂಸ್ಥೆಯಲ್ಲಿರುವ ವಿವಿಧ ಹುದ್ದೆಗಳಿಗೆ ಟ್ರಾನ್ಸ್‍ಜೆಂಡರ್ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಮೂಲಕ ಟಾಟಾ ಸ್ಟೀಲ್ಸ್ ಸಂಸ್ಥೆ ಮಹತ್ವದ ಹೆಜ್ಜೆಯನ್ನು ತೆಗೆದುಕೊಂಡಿದೆ ಎಂದು ಕಂಪನಿ ತಿಳಿಸಿದೆ.

ಪ್ರಮುಖ ಜಾಗತಿಕ ಉಕ್ಕಿನ ಕಂಪನಿಯಾಗಿರುವ ಟಾಟಾ ಸ್ಟೀಲ್ ಸಮಾಜದಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆಯಂತೆ.ಇಂಗ್ಲೀಷ್ ಅಥವಾ ಐಟಿಐನಲ್ಲಿ ಮೆಟ್ರಿಕ್ಯುಲೇಷನ್ ಅಥವಾ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಎಐಸಿಟಿಇ ಅಥವಾ ಯುಜಿಸಿ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಎಂಜಿನಿಯರಿಂಗ್‍ನಲ್ಲಿ ಡಿಫ್ಲೋಮಾ… ಅಥವಾ ಯಾವುದೇ ವಿಭಾಗದಲ್ಲಿ ಬಿಇ/ಬಿ ಟೆಕ್‍ನಲ್ಲಿ ಪದವಿ ಸಂಸ್ಥೆ, ಎಐಸಿಟಿಇ ಅಥವಾ ಯುಜಿಸಿ ಪಾಸಾದವರು ಅರ್ಜಿ ಸಲ್ಲಿಸಬಹುದು ಎಂದು ಟಾಟಾ ಸ್ಟೀಲ್ ಅಸೂಚನೆಯಲ್ಲಿ ತಿಳಿಸಿದೆ.ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನಾಂಕವಾಗಿದೆ.

ಬೆಂಗಳೂರಿನ ಮಹಿಳೆ ಮೇಲೆ ಅತ್ಯಾಚಾರ ಆರೋಪಿ ಬಂಧನ

ಎಲ್ಲಾ ಶಾರ್ಟ್‍ಲಿಸ್ಟ್ ಮಾಡಿದ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಒಳಗಾಗುತ್ತಾರೆ, ಇದು ಅಗತ್ಯಕ್ಕೆ ಅನುಗುಣವಾಗಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ ಎಂದು ಅದು ಹೇಳಿದೆ.

RELATED ARTICLES

Latest News