ಬೆಂಗಳೂರು, ಅ.24- ಬೇರೆ ಬೇರೆ ರಾಜ್ಯಗಳಲ್ಲಿ ನೋದಾಯಿಸಿಕೊಂಡು ತೆರಿಗೆ ವಂಚಿಸಿ, ರಾಜ್ಯದಲ್ಲಿ ಸಂಚರಿಸುತ್ತಿದ್ದ 30ಕ್ಕೂ ಹೆಚ್ಚು ಖಾಸಗಿ ಬಸ್‌ಗಳನ್ನು ಸಾರಿಗೆ ಇಲಾಖೆಯ ವಿಶೇಷ ಕಾರ್ಯಪಡೆ ವಶಕ್ಕೆ ಪಡೆದುಕೊಂಡಿದೆ.
ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ತಮಿಳು ನಾಡು, ಪಾಂಡೀಚೇರಿ ಸೇರಿದಂತೆ ವಿವಿಧ ರಾಜ್ಯ ಗಳಲ್ಲಿ ನೋಂದಣಿ ಮಾಡಿಸಿಕೊಂಡು ರಾಜ್ಯದಲ್ಲಿ ಸಂಚರಿಸುತ್ತಿರುವ ಹಲವು ಖಾಸಗಿ ಬಸ್‌ಗಳು ತೆರಿಗೆ ಪಾವತಿಸದೇ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.2023ರ ಅಖಿಲ ಭಾರತ ಸಾರಿಗೆ ಪರವಾನಗಿ ನಿಯಮದಡಿ ಯಾವುದೇ ರಾಜ್ಯದಲ್ಲಿ ವಾಹನಗಳನ್ನು ಅದರಲ್ಲೂ ವಾಣಿಜ್ಯ ಉದ್ದೇಶಕ್ಕಾಗಿ ಖಾಸಗಿ ಬಸ್‌ಗಳನ್ನು ನೋಂದಾಯಿಸಿದರೆ ಶುಲ್ಕ 90 ಸಾವಿರ ರೂ.ಗಳನ್ನು ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಇದು ಕೇವಲ ನೋಂದಣಿ ಶುಲ್ಕ ಮಾತ್ರವಾಗಿದ್ದು, ತೆರಿಗೆಯೆಂದು ಪರಿಗಣಿಸಲ್ಪಡುವುದಿಲ್ಲ.
ಯಾವುದೇ ರಾಜ್ಯದಲ್ಲಿ ಬಸ್‌ಗಳು ಸಂಚರಿಸಬೇಕಾದರೂ ಆಯಾ ರಾಜ್ಯಕ್ಕೆ ಸಾರಿಗೆ ಇಲಾಖೆ ನಿಗದಿಪಡಿಸಿದ ತೆರಿಗೆಯನ್ನು ಪಾವತಿಸಬೇಕಿದೆ. ಆದರೆ ಬಹುತೇಕ ಟ್ರಾವೆಲ್‌್ಸ ಸಂಸ್ಥೆಗಳು ತೆರಿಗೆ ಪಾವತಿಸದೇ ಹೊರ ರಾಜ್ಯದಲ್ಲಿ ನೋಂದಣಿಯ ವೇಳೆ ಪಾವತಿಸಿದ ಶುಲ್ಕದ ರಶೀದಿಯನ್ನೇ ತೋರಿಸಿ ತೆರಿಗೆ ಪಾವತಿಸದೇ ತಪ್ಪಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಇಂತಹ ಬಸ್‌ಗಳನ್ನು ಬೆನ್ನತ್ತಿದ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಾದ ಶೋಭಾ ಅವರ ನೇತೃತ್ವದ ಕಾರ್ಯಪಡೆ 30ಕ್ಕೂ ಹೆಚ್ಚು ಖಾಸಗಿ ಬಸ್‌ಗಳನ್ನು ವಶಕ್ಕೆ ಪಡೆದುಕೊಂಡಿದೆ. ತೆರಿಗೆ ಪಾವತಿಯ ಬಳಿಕ ಬಸ್‌ಗಳನ್ನು ಬಿಡುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಓಂಕಾರೇಶ್ವರಿ, ಗಾಯತ್ರಿ, ದೀಪಾ ಸೇರಿದಂತೆ 5 ಮಂದಿ ಆರ್‌ಟಿಓಗಳು 25 ಮಂದಿ ಮೋಟಾರ್ ಇನ್‌್ಸಪೆಕ್ಟರ್‌ಗಳ ತಂಡ ಭಾಗವಹಿಸಿತ್ತು.
ತೆರಿಗೆ ವಂಚಿಸುತ್ತಿದ್ದ ಖಾಸಗಿ ಬಸ್‌ಗಳನ್ನು ಅರ್ಧ ದಾರಿಯಲ್ಲೇ ತಡೆದು ವಶಕ್ಕೆ ಪಡೆದ ಸಾರಿಗೆ ಅಧಿಕಾರಿಗಳು ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಿಎಂಟಿಸಿ ಬಸ್‌ಗಳನ್ನು ವ್ಯವಸ್ಥೆ ಮಾಡಿ, ಶುಲ್ಕ ಪಡೆಯದೆ ಮುಂದಿನ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.ಬೇರೆ ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಸಿಕೊಂಡಿರುವ ಖಾಸಗಿ ಬಸ್‌ಗಳ ಮಾಲೀಕರು ಇಲ್ಲಿ ತೆರಿಗೆ ಪಾವತಿಸದೇ ಮತ್ತು ಯಾವುದೇ ನಿಯಮಗಳಿಗೂ ಬಗ್ಗದೆ ಸಾರಿಗೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.
ಹಬ್ಬ ಹರಿ ದಿನಗಳಲ್ಲಿ ದುಬಾರಿ ಪ್ರಯಾಣ ದರ ವಸೂಲಿ ಮಾಡುವ ಮೂಲಕ ಜನರಿಗೆ ತೊಂದರೆ ಕೊಡುತ್ತಿದ್ದರು. ಅವರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಕೊಂಡಿರುವುದರಿಂದ ಅವರ ಪರವಾನಗಿಯನ್ನು ಅಮಾನತುಗೊಳಿಸಲಾಗದೆ, ರಾಜ್ಯ ಸರ್ಕಾರ ಅಸಹಾಯಕವಾಗಿತ್ತು. ಇದಕ್ಕಾಗಿ ಇತ್ತೀಚೆಗೆ ಕಾನೂನು ತಿದ್ದುಪಡಿಯನ್ನು ತರಲಾಗಿದೆ.ನೋಂದಣಿ ಶುಲ್ಕ ಮಾತ್ರ ಪಾವತಿಸಿ, ತೆರಿಗೆ ಪಾವತಿಸದೆ ವಂಚನೆ ಮಾಡುತ್ತಿದ್ದ ಬಸ್ ಮಾಲೀಕರಿಗೆ, ಸಾರಿಗೆ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ನಿನ್ನೆ ತಡ ರಾತ್ರಿ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಅಪಘಾತದಿಂದಾಗಿ ಬೆಂಕಿಗಾಹುತಿಯಾದ ಖಾಸಗಿ ಬಸ್ ಕೂಡ ಜಾರ್ಖಂಡ್‌ನ ನೋಂದಣಿ ಸಂಖ್ಯೆ ಹೊಂದಿತ್ತು ಎನ್ನಲಾಗಿದೆ. ಅಪಘಾತದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆಯ ಅಧಿಕಾರಿಗಳು ಖಾಸಗಿ ಬಸ್‌ಗಳಲ್ಲಿನ ಸುರಕ್ಷತಾ ಕ್ರಮ ಹಾಗೂ ಸಲಕರಣೆಗಳ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ.
