ಬಲಿಯಾ,ಮಾ. 2: ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿದ ಆರೋಪದ ಮೇಲೆ ಕಾನ್ವೆಂಟ್ ಶಾಲೆಯ ಮೂವರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಲಿಯಾದ ಉಭಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯ ನಿವಾಸಿಯಾದ 16 ವರ್ಷದ ಬಾಲಕಿ ಫೆಬ್ರವರಿ 25 ರಂದು ಪರೀಕ್ಷೆಗೆ ಹಾಜರಾಗಲು ಮನೆಯಿಂದ ಹೊರಟಿದ್ದವಳು ನಂತರ ನಾಪತ್ತೆಯಾಗಿದ್ದರು. ಶಾಲೆಯ ಮಾಜಿ ಶಿಕ್ಷಕ ಅಜಯ್ ಚೌಹಾಣ್ ಅವರು ಇತರ ಇಬ್ಬರು ಶಿಕ್ಷಕರಾದ ಪ್ರಿಯಾಂಶು ಯಾದವ್ ಮತ್ತು ಸಂದೀಪ್ ಶುಕ್ಲಾ ಅವರ ಸಹಾಯದಿಂದ ಬಾಲಕಿಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 137 (2) (ಅಪಹರಣ) ಮತ್ತು 61 (2) ಎ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಝಾ ತಿಳಿಸಿದ್ದಾರೆ.