ಬೆಂಗಳೂರು, ಸೆ.24- ಖಾಸಗಿ ಶಾಲೆಯ ದೈಹಿಕ ಶಿಕ್ಷಕನಿಂದ ವಂಚನೆಯಾಗಿದೆ ಮತ್ತು ಆತನ ಮೊಬೈಲ್‌ನಲ್ಲಿ ಹಲವು ಮಹಿಳೆಯರ ಖಾಸಗಿ ಕ್ಷಣಗಳ ವಿಡಿಯೋಗಳಿವೆ ಎಂದು ಸಂತ್ರಸ್ಥೆಯೊಬ್ಬರು ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಸಂತ್ರಸ್ಥ ಮಹಿಳೆ ನೀಡಿದ್ದ ದೂರು ಆಧರಿಸಿ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಎಬಿವಿ ಮಾಥ್ಯೂ ತಲೆ ಮರೆಸಿಕೊಂಡಿದ್ದು, ಅತನ ಬಂಧನಕ್ಕೆ ಕಾರ್ಯಚರಣೆ ಕೈಗೊಳ್ಳಲಾಗಿದೆ.
ಸಂತ್ರಸ್ಥ ಮಹಿಳೆ ಸುದ್ದಿಗಾರರೊಂದಿಗೆ ಮಾತನಾಡಿ, ತಮಗೆ ಮದುವೆಯಾಗಿ ಒಂದು ಹೆಣ್ಣು ಮಗುವಿದೆ. ಆಕೆಯನ್ನು ಖಾಸಗಿ ಶಾಲೆಗೆ ಸೇರಿಸಲಾಗಿತ್ತು. ಅದೇ ಶಾಲೆಯಲ್ಲಿ ದೈಹಿಕ ಶಿಕ್ಷಕ ಹಾಗೂ ಕ್ರಿಕೆಟ್ ಕೋಚ್ ಆಗಿದ್ದ ಮ್ಯಾಥ್ಯೂ ಜೊತೆ, ಮಗಳ ವಿಚಾರಕ್ಕೆ ನನ್ನ ಪರಿಚಯವಾಗಿತ್ತು. ಇತ್ತ ನನ್ನ ಕೌಟಂಬಿಕ ಸಮಸ್ಯೆ ಕೂಡ ಹೆಚ್ಚಾಗಿದ್ದು, ಗಂಡನ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಅದರಿಂದ ನಾನು ಅಲ್ಲಿಂದ ಹೊರಬಂದೆ ಎಂದು ಹೇಳಿದ್ದಾರೆ.
ಸಹೋದರರು, ಸಂಬಂಽಕರು ಸಹಾಯ ಮಾಡದಿದ್ದಾಗ ಸ್ನೇಹಿತರ ಬೆಂಬಲ ಕೇಳಿದ್ದೇನೆ. ಮ್ಯಾಥ್ಯೂ ಅವರ ಬಳಿ 2 ಸಾವಿರ ರೂ. ನೆರವು ಪಡೆದಿದ್ದೆ. ಪತಿ ನನಗೆ ಜೀವನಾಂಶ ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ್ದರು. ಈ ಸಂದರ್ಭದಲ್ಲಿ ಮ್ಯಾಥ್ಯೂ ನನಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದರು.
ನಾನು ಅಮ್‌ಆದ್ಮಿ ಪಕ್ಷದ ನಾಯಕನಾಗಿದ್ದು, ಪೊಲೀಸರ ಸಂಪರ್ಕ ಇದೆ. ಎಂದು ಹೇಳಿ ನನ್ನನ್ನು ಶಾನುಭೋಗನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿ ಇರಿಸಿದ್ದರು ಎಂದು ತಿಳಿಸಿದ್ದಾರೆ.
ಕಳೆದ ಸೆಪ್ಟಂಬರ್‌ನಲ್ಲಿ ನನಗೆ ಗಂಡನಿಂದ ವಿಚ್ಛೇದನ ಸಿಕ್ಕಿದೆ. ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಮ್ಯಾಥ್ಯೂ ನನ್ನೊಂದಿಗೆ ಸಹ ಜೀವನ ನಡೆಸಿದ್ದಾನೆ.
ಮದುವೆ ಮಾಡಿಕೊಳ್ಳಲು ಒತ್ತಾಯಿಸಿದಾಗ, ಅಪ್ಪ-ಅಮ್ಮನನ್ನು ಒಪ್ಪಿಸಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ತಾವು ಗರ್ಭಿಣಿಯಾಗಿದ್ದು, ಮದುವೆ ಮಾಡಿಕೊಳ್ಳುವಂತೆ ಪಟ್ಟು ಹಿಡಿದಾಗ ಕಳೆದ ಶನಿವಾರ ನನ್ನ ಮೊಬೈಲ್ ಹಾಗೂ ಆತನ ಬಟ್ಟೆಗಳೊಂದಿಗೆ ಅಪ್ಪ-ಅಮ್ಮನ ಜೊತೆ ಪರಾರಿಯಾಗಿದ್ದಾನೆ ಎಂದಿದ್ದಾರೆ. ನ್ಯಾಯಕ್ಕಾಗಿ ತಾವು ಅಲೆದಾಡುವಂತಾಗಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ದೂರು ನೀಡಿದ್ದೇನೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ನಾನು ಗರ್ಭಿಣಿಯಾಗಿರುವುದನ್ನು ದೂರಿನಲ್ಲಿ ನಮೂದಿಸಿದ್ದರೂ, ಅದನ್ನು ಆರಂಭದಲ್ಲಿ ಕಡೆಗಣಿಸಲಾಗಿತ್ತು ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ.
ಮದುವೆಯಾಗು ಎಂದು ಕೇಳಿದ್ದಾಗ ಮ್ಯಾಥ್ಯೂ ತಮ್ಮನ್ನು ಅವಹೇಳನಕಾರಿಯಾಗಿ ನಿಂದಿಸಿದ್ದು, ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಆತ ತೆಗೆದುಕೊಂಡು ಹೋಗಿರುವ ನನ್ನ ಮೊಬೈಲ್‌ನಲ್ಲಿ ನಮ್ಮಿಬ್ಬರ ಸಂಬಂಧಕ್ಕೆ ಪೂರಕವಾದ ಸಾಕ್ಷಿಗಳಿವೆ ಎಂದಿದ್ದಾರೆ. ಮ್ಯಾಥ್ಯೂ ಹಲವರ ಜೊತೆ ಇದೆ ರೀತಿ ನಡೆದುಕೊಂಡಿದ್ದಾರೆ. ಆತನ ಮೊಬೈಲ್‌ನಲ್ಲಿ ಹಲವು ಮಹಿಳೆಯರ ಜೊತೆಗಿರುವ ಖಾಸಗಿ ಕ್ಷಣಗಳ ೇಟೊ ಹಾಗೂ ವಿಡಿಯೋಗಳಿವೆ ಎಂದು ಸಂತ್ರಸ್ಥೆ ಗಂಭೀರ ಆರೋಪ ಮಾಡಿದ್ದಾರೆ.