ಬೆಂಗಳೂರು,ಮಾ.28– ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ ಶವವನ್ನು ಸೂಟ್‌ಕೇಸ್‌ನಲ್ಲಿಟ್ಟು ಪರಾರಿಯಾಗಲು ಯತ್ನಿಸಿದ ಆರೋಪಿ ಸಾಫ್ಟ್ ವೇರ್ ಎಂಜಿನಿಯರ್ ಮಹಾರಾಷ್ಟ್ರದ ಪುಣೆಯಲ್ಲಿ ಆತಹತ್ಯೆಗೆ ಯತ್ನಿಸಿದ್ದಾನೆ. ಫಿನಾಯಿಲ್ ಕುಡಿದು ಆತಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಆರೋಪಿ ರಾಕೇಶ್ ರಾಜೇಂದ್ರ ಖೆಡೇಕರ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರ ಮೂಲದ ರಾಕೇಶ್ ಕೆಲ ತಿಂಗಳ ಹಿಂದಷ್ಟೆ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದು ಪತ್ನಿ ಗೌರಿ ಅನಿಲ್ ಸಾಂಬೇಕರ್ ಅವರೊಂದಿಗೆ ಬನ್ನೇರುಘಟ್ಟ ರಸ್ತೆಯ ದೊಡ್ಡಕಮನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಖಾಸಗಿ ಐಟಿ ಸಂಸ್ಥೆಯಲ್ಲಿ ಸಾಫ್‌್ಟವೇರ್ ಎಂಜಿನಿಯರ್ ಆಗಿದ್ದ ರಾಕೇಶ್ ಮನೆಯಿಂದಲೇ ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದ.
ಪತ್ನಿ ಕೂಡ ಪದವೀಧರೆಯಾಗಿದ್ದು, ಆಕೆ ಕೂಡ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ಮೊನ್ನೆ ಅದೇನಾಯ್ತೋ ರಾಕೇಶ್ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಶವ ಸಾಗಿಸಲು ಮುಂದಾಗಿದ್ದಾನೆ. ಅದು ಸಾಧ್ಯವಾಗದಿದ್ದಾಗ ಆಕೆಯ ದೇಹವನ್ನು ತುಂಡು ತುಂಡು ಮಾಡಿ ಸೂಟ್‌ಕೇಸ್‌ನಲ್ಲಿ ತುಂಬಿ ಶೌಚಾಲಯದಲ್ಲಿಟ್ಟು ಮಹಾರಾಷ್ಟ್ರಕ್ಕೆ ಪಲಾಯನ ಮಾಡಲು ಯತ್ನಿಸಿದ್ದ.
ಮಹಾರಾಷ್ಟ್ರಕ್ಕೆ ತೆರಳುವ ಮಾರ್ಗ ಮಧ್ಯದಲ್ಲೇ ಆತ ಗೌರಿ ಕುಟುಂಬದವರಿಗೆ ನಿಮ ಮಗಳು ಆತಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕರೆ ಮಾಡಿ ಮೊಬೈಲ್ ಕಟ್ ಮಾಡಿದ್ದ ಆದೇ ಸಂದರ್ಭದಲ್ಲಿ ಆತ ತಾನು ವಾಸಿಸುತ್ತಿದ್ದ ಬಾಡಿಗೆ ಮನೆ ಕೆಳಗಿದ್ದ ಸ್ನೇಹಿತನಿಗೆ ಕರೆ ಮಾಡಿ ನಾನು ನನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿಯೂ ತಿಳಿಸಿದ್ದ.
ರಾಕೇಶ್ ಸ್ನೇಹಿತ ಮನೆ ಮಾಲೀಕರಿಗೆ ಕೊಲೆ ವಿಷಯ ತಿಳಿಸಿದ್ದಾನೆ. ತಕ್ಷಣ ಅವರು ಹುಳಿಮಾವು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಶೌಚಾಲಯದಲ್ಲಿ ಸೂಟ್‌ಕೇಸ್ ಪತ್ತೆಯಾಗಿತ್ತು.ಸೂಟ್‌ಕೇಸ್ ತೆರೆದು ನೋಡಿದಾಗ ಗೌರಿಯ ದೇಹದ ತುಂಡುಗಳು ಪತ್ತೆಯಾಗಿದ್ದವು. ತಕ್ಷಣ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಆರೋಪಿ ಬಂಧನಕ್ಕೆ ಕಾರ್ಯಚರಣೆ ಕೈಗೊಳ್ಳಲಾಗಿತ್ತು.
ಆರೋಪಿ ರಾಕೇಶ್ ಆತನ ಸ್ನೇಹಿತನ ಮೊಬೈಲ್‌ಗೆ ಮಾಡಿದ ಕರೆ ಆಧರಿಸಿ ಕಾರ್ಯಚರಣೆಗಿಳಿದ ಪೊಲೀಸರು ಆತ ಪುಣೆ ಮಾರ್ಗ ಮಧ್ಯದಲ್ಲಿ ಸಂಚರಿಸುತ್ತಿರುವುದರ ಸುಳಿವರಿತು ಅಲ್ಲಿನ ಪೊಲೀಸರಿಗೆ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದರು.ಪುಣೆಗೆ ಬರುತ್ತಿರುವ ಆರೋಪಿಯನ್ನು ಬಂಧಿಸಲು ಅಲ್ಲಿನ ಪೊಲೀಸರು ಸಿದ್ದರಾಗಿ ನಿಂತಿದ್ದರು. ಊರಿಗೆ ಬರುತ್ತಿದ್ದಂತೆ ಆರೋಪಿಗೆ ಅದೇನಾಯ್ತೋ ಇದ್ದಕ್ಕಿದ್ದಂತೆ ತನ್ನ ಕಾರು ನಿಲ್ಲಿಸಿ ರಸ್ತೆ ಪಕ್ಕದ ಅಂಗಡಿಯೊಂದರಿಂದ ಪೆನಾಯಿಲ್ ಖರೀದಿಸಿ ಅದನ್ನು ಕುಡಿದು ಆತಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ.
ಆತ ಫೆನಾಯಿಲ್ ಕುಡಿಯುವ ಸಮಯಕ್ಕೆ ಅಲ್ಲಿಗೆ ಬಂದ ಪುಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿರುವುದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಆರೋಪಿ ಪುಣೆ ಕಡೆ ಹೋಗುತ್ತಿರುವ ಮಾಹಿತಿ ಪಡೆದು ಆತನನ್ನು ಬೆನ್ನತ್ತಿದ್ದ ಹುಳಿಮಾವು ಪೊಲೀಸರ ತಂಡ ಕೂಡ ಪುಣೆ ತಲುಪಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಕೇಶ್ ಗುಣಮುಖನಾದ ನಂತರ ಆತನನ್ನು ವಶಕ್ಕೆ ಪಡೆದು ನಗರಕ್ಕೆ ಕರೆತರಲಿದ್ದಾರೆ.