ಪಣಜಿ,ಅ.28- ಗೋವಾದಲ್ಲಿ ನಡೆದ ಐರನ್ ಮ್ಯಾನ್ 70.3 ಟ್ರಯಥ್ಲಾನ್ ರೇಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಸಂಸದ ತೇಜಸ್ವಿ ಸೂರ್ಯ ಅವರು ಈ ಸ್ಪರ್ಧೆಯನ್ನು ಪೂರ್ಣಗೊಳಿಸಿದ ಮೊದಲ ಜನಪ್ರತಿನಿಧಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಈ ರೇಸ್‌ನಲ್ಲಿ ಅವರು ಕೇವಲ 8 ಗಂಟೆ 27 ನಿಮಿಷ 32 ಸೆಕೆಂಡ್‌ಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾ ರೆ. ಈ ಸ್ಪರ್ಧೆಯು 1.9 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21.1 ಕಿ.ಮೀ ಓಟ ಸೇರಿದಂತೆ ಒಟ್ಟು 113 ಕಿ.ಮೀ ದೂರ ಕ್ರಮಿಸುವುದು ಸೇರಿರುತ್ತದೆ.
ಗೋವಾದಲ್ಲಿ ನಡೆದ ಈ ಐರನ್ ಮ್ಯಾನ್ 70.3 ಸ್ಪರ್ಧೆಯು ಕ್ರೀಡೆಗೆ ಹೆಚ್ಚು ಪ್ರಸಿದ್ಧವಾಗಿದ್ದು, ಇದರಲ್ಲಿ ಸುಮಾರು 50 ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಭಾರತ ಮತ್ತು ವಿಶ್ವದ ಕ್ರೀಡಾಪಟುಗಳು, ಫಿಟ್ನೆಸ್ ಪ್ರಿಯರ ಪ್ರಮುಖ ಸ್ಪರ್ಧೆ ಇದು ಎನ್ನಲಾಗಿದೆ. ತುಂಬಾ ಕಠಿಣವಾದ ಈ ಐರನ್ ಮ್ಯಾನ್ 70.3 ಗೋವಾ ಸ್ಪರ್ಧೆಗಾಗಿ ಕಳೆದ 4 ತಿಂಗಳಿಂದ ನಾನು ಫಿಟ್ನೆಸïಗಾಗಿ ಕಷ್ಟಕರವಾದ ತರಬೇತಿ ಪಡೆದಿದ್ಧಾರೆ. ಈ ಕಾರಣದಿಂದಲೇ ನಾನು ಈ ಸ್ಪರ್ಧೆಯನ್ನು ಪೂರ್ಣಗೊಳಿಸಿ, ಯಶಸ್ವಿಯಾಗಿದ್ದೇನೆ. ಇದಕ್ಕೆ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಫಿಟ್ ಇಂಡಿಯಾ ಅಭಿಯಾನವೇ ಸೂರ್ತಿ ಎಂದು ತೇಜಸ್ವಿ ಸೂರ್ಯ ಸಂತಸ ಹಂಚಿಕೊಂಡಿದ್ದಾರೆ.
ಇಂದು ನಾನು ಈ ಸವಾಲನ್ನು ಪೂರ್ಣಗೊಳಿಸಿದ್ದೇನೆ. ನನ್ನ ದೀರ್ಘಕಾಲದ ಕನಸನ್ನು ಪೂರ್ಣಗೊಳಿಸಿದೆ ಎಂದು ಹಂಚಿಕೊಳ್ಳಲು ಹರ್ಷವಾಗಿದೆ. ಈ ಗೆಲುವನ್ನು ನಾನು ಪ್ರಧಾನಿಯವರಿಗೆ ವಿನಮ್ರವಾಗಿ ಅರ್ಪಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ದೇಶದ ಅಭಿವೃದ್ಧಿಗೆ ನನ್ನ ಸಾಮರ್ಥ್ಯ ಸಹಕಾರಿ ಎನ್ನುವ ವಿಶ್ವಾಸ ಮೂಡಿದೆ. ಭಾರತವು ದೊಡ್ಡಮಟ್ಟದಲ್ಲಿ ಅವಕಾಶಗಳನ್ನು ಬೆನ್ನಟ್ಟುತ್ತಿದ್ದು, ಯುವರಾಷ್ಟವಾಗಿ ರೂಪುಗೊಳ್ಳಲು ದೈಹಿಕ ಸಾಮರ್ಥ್ಯ ಉತ್ತೇಜನಕಾರಿ ಎಂದಿದ್ದಾರೆ.
ಮೋದಿ ಶ್ಲಾಘನೆ: ಸಂಸದ ತೇಜಸ್ವಿ ಸೂರ್ಯ ಅವರ ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ನಾಯಕರು ಶ್ಲಾಘಿಸಿದ್ದರೆ . ಮೋದಿ ಅವರು ಎಕ್ಸ್ ಮೂಲಕ ಇದು ಯುವಕರಿಗೆ ಫಿಟ್‌ನೆಸ್ ಸಂಬಂಧಿತ ಚಟುವಟಿಕೆಗಳನ್ನು ಮುಂದುವರಿಸಲು ಇನ್ನೂ ಸೂರ್ತಿ ನೀಡುತ್ತದೆ. ಈ ಬಗ್ಗೆ ನನಗೆ ನನಗೆ ಖಾತ್ರಿಯಿದೆ ಎಂದು ಅವರುಹೇಳಿದ್ದಾರೆ.