Friday, November 22, 2024
Homeರಾಷ್ಟ್ರೀಯ | Nationalತೆಲಂಗಾಣದ ಸರ್ಕಾರ ಚುನಾವಣಾ ಖರ್ಚಿಗೆ "ರಾಹುಲ್‌ ರೇವಂತ್‌ ತೆರಿಗೆ' ಸಂಗ್ರಹಿಸುತ್ತಿದೆ ; ಅಮಿತ್‌ ಶಾ

ತೆಲಂಗಾಣದ ಸರ್ಕಾರ ಚುನಾವಣಾ ಖರ್ಚಿಗೆ “ರಾಹುಲ್‌ ರೇವಂತ್‌ ತೆರಿಗೆ’ ಸಂಗ್ರಹಿಸುತ್ತಿದೆ ; ಅಮಿತ್‌ ಶಾ

ಹೈದರಾಬಾದ್‌, ಮೇ.6- ತೆಲಂಗಾಣದ ಕಾಂಗ್ರೆಸ್‌‍ ಸರ್ಕಾರವು ದೇಶದಲ್ಲಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಹಣ ನೀಡಲು ರಾಹುಲ್‌ ರೇವಂತ್‌ ತೆರಿಗೆ ಸಂಗ್ರಹಿಸುತ್ತಿದೆ ಎಂದು ಕೇಂದ್ರ ಗಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ. ಸಿಕಂದರಾಬಾದ್‌ನಲ್ಲಿ ಬಿಜೆಪಿಯ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿ ತೆಲಂಗಾಣವನ್ನು ಕಾಂಗ್ರೆಸ್‌‍ನ ಎಟಿಎಂ ಆಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿದರು. ತೆಲಂಗಾಣದ ಜನರು ಆರ್‌ಆರ್‌ ತೆರಿಗೆಯಲ್ಲಿ ತಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಗಹ ಸಚಿವ ಶಾ ಹೇಳಿದ್ದಾರೆ.

ನಮ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಈ ಎಟಿಎಂನಲ್ಲಿ ಹಣ ಖಾಲಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಗಹ ಸಚಿವರು ಮಲ್ಕಾಜ್‌ಗಿರಿ ಲೋಕಸಭಾ ಕ್ಷೇತ್ರ ಮತ್ತು ಸಿಕಂದರಾಬಾದ್‌ ಕಂಟೋನೆಂಟ್‌ ವಿಧಾನಸಭಾ ಕ್ಷೇತ್ರಕ್ಕೆ (ಉಪಚುನಾವಣೆ) ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಜನರಿಗೆ ಮನವಿ ಮಾಡಿದರು. .

ಇದಕ್ಕೂ ಮುನ್ನ ನಿಜಾಮಾಬಾದ್‌ನಲ್ಲಿ ಮಾತನಾಡಿದ ಅಮಿತ್‌ ಶಾ, ತೆಲಂಗಾಣದಿಂದ ದೆಹಲಿ ದರ್ಬಾರ್‌ಗೆ ಪ್ರತಿನಿತ್ಯ ನೂರಾರು ಕೋಟಿ ರವಾನೆಯಾಗುತ್ತಿದೆ. ಇತ್ತೀಚೆಗೆ ಚುನಾವಣಾ ರ್ಯಾಲಿಯಲ್ಲಿ ಮಕ್ಕಳನ್ನು ಸೇರಿಸಿಕೊಳ್ಳುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಹೈದರಾಬಾದ್‌ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಅಮಿತ್‌ ಶಾ ಉಲ್ಲೇಖಿಸಿದ್ದಾರೆ.

ರೇವಂತ್‌ ರೆಡ್ಡಿ ಇತ್ತೀಚೆಗಷ್ಟೇ ಮುಖ್ಯಮಂತ್ರಿಯಾದರು. ಇತ್ತೀಚೆಗಷ್ಟೇ ಕೇಸ್‌‍ ದಾಖಲಿಸಿದ್ದರು. ಆದರೆ ನಾನು ರೇವಂತ್‌ ರೆಡ್ಡಿಯಂತೆ ಅಳುವುದಿಲ್ಲ. ಅದನ್ನು ರದ್ದುಪಡಿಸಲು ನಾನು ಹೈಕೋರ್ಟ್‌ಗೆ ಹೋಗುತ್ತೇನೆ ಎಂದು ಅವರು ಹೇಳಿದರು.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಎಸ್‌‍ಸಿ, ಎಸ್‌‍ಟಿ ಮತ್ತು ಒಬಿಸಿ ಮೀಸಲಾತಿಯನ್ನು ಕಸಿದುಕೊಳ್ಳುತ್ತೇವೆ ಎಂದು ಕಾಂಗ್ರೆಸ್‌‍ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು. ಕಳೆದ 10 ವರ್ಷಗಳಿಂದ ನಾವು ಬಹುಮತ ಹೊಂದಿದ್ದೇವೆ, ಆದರೆ ನಾವು ಮೀಸಲಾತಿಯನ್ನು ರದ್ದುಗೊಳಿಸಿಲ್ಲ ಎಂದು ಅವರು ಹೇಳಿದರು.

RELATED ARTICLES

Latest News