ಸಂಗರೆಡ್ಡಿ, ಜುಲೈ.1 – ಸಿಗಾಚಿ ಇಂಡಸ್ಟ್ರೀಸ್‌ನ ಪಾಶಮಿಲರಾಮ್ ನಲ್ಲಿರುವ ಫಾರ್ಮಾ ಪ್ಲಾಂಟ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 42ಕ್ಕೆ ಏರಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವಶೇಷಗಳನ್ನು ತೆಗೆದುಹಾಕುವಾಗ ಹಲವಾರು ಶವಗಳು ಅವಶೇಷಗಳ ಅಡಿಯಲ್ಲಿ ಪತ್ತೆಯಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿತೋಷ್ ಪಂಕಜ್ ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಕಳೆದ ರಾತ್ರಿ ಅವಶೇಷಗಳಿಂದ 31 ಶವಗಳನ್ನು ಹೊರತೆಗೆಯಲಾಗಿದೆ ಮತ್ತು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತ ಇನ್ನೂ ಮುಂದುವರೆದಿದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಇಂದು ಬೆಳಿಗ್ಗೆ ದುರಂತ ನಡದ ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಗ್ಯ ಸಚಿವ ಸಿ ದಾಮೋದರ್ ರಾಜನರಸಿಂಹ ಕೂಡ ಜೊತೆಗಿದ್ದರು.
ರಾಸಾಯನಿಕ ಕ್ರಿಯೆಯಿಂದ ಬೆಂಕಿ ಉಂಟಾಗಿದೆ ಎಂದು ಶಂಕಿಸಲಾಗಿದೆ. ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್ ಒಂದು ಔಷಧೀಯ ಕಂಪನಿಯಾಗಿದ್ದು,ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.
- ರಾಜ್ಯಾದ್ಯಂತ ಟೆಲಿ ಇಸಿಜಿ ವ್ಯವಸ್ಥೆ ಜಾರಿ : ಸಚಿವ ದಿನೇಶ್ ಗುಂಡೂರಾವ್
- ಕೃಷ್ಣ ಜನಾಷ್ಟಮಿ ಮೆರವಣಿಗೆ ವೇಳೆ ವಿದ್ಯುತ್ ಅವಘಡ, ಐದು ಮಂದಿ ದಾರುಣ ಸಾವು
- ಬಿಹಾರ ಮತದಾರರ ಪಟ್ಟಿಯಿಂದ ಅಳಿಸಲಾದ 65 ಲಕ್ಷ ಜನರ ಹೆಸರು ಬಹಿರಂಗ
- ಎಸ್ಐಆರ್ ಮತಚೋರಿಯ ಹೊಸ ಆಸ್ತ್ರ ; ರಾಹುಲ್ ಗಾಂಧಿ
- ನಾಳೆ ಟಿ20 ತಂಡದ ಆಯ್ಕೆ, ತಂಡ ಸೇರುವರೇ ಗಿಲ್..?