Monday, August 18, 2025
Homeರಾಜ್ಯರಾಜ್ಯಾದ್ಯಂತ ಟೆಲಿ ಇಸಿಜಿ ವ್ಯವಸ್ಥೆ ಜಾರಿ : ಸಚಿವ ದಿನೇಶ್‌ ಗುಂಡೂರಾವ್‌

ರಾಜ್ಯಾದ್ಯಂತ ಟೆಲಿ ಇಸಿಜಿ ವ್ಯವಸ್ಥೆ ಜಾರಿ : ಸಚಿವ ದಿನೇಶ್‌ ಗುಂಡೂರಾವ್‌

Tele-ECG System implemented across the state: Minister Dinesh Gundu Rao

ಬೆಂಗಳೂರು,ಆ.18- ಹೃದಯಾಘಾತ ಇಲ್ಲವೇ ಬೇರೆ ಅವಘಡಗಳು ಸಂಭವಿಸಿದಾಗ ತಕ್ಷಣವೇ ರೋಗಿಗೆ ಚಿಕಿತ್ಸೆ ಒದಗಿಸಿ ಜೀವ ಉಳಿಸಲು ಅನುಕೂಲವಾಗುವಂತೆ ರಾಜ್ಯಾದ್ಯಂತ ಟೆಲಿ ಇಸಿಜಿ ವ್ಯವಸ್ಥೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಸದಸ್ಯ ಡಾ.ಧನಂಜಯ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಟೆಲಿ ಇಸಿಜಿ ವ್ಯವಸ್ಥೆ ಕೆಲವೇ ಆಸ್ಪತ್ರೆಗಳಲ್ಲಿ ಮಾತ್ರ ಇವೆ.45 ವರ್ಷದೊಳಗಿನವರು ಹಠಾತ್‌ ಹೃದಾಯಾಘಾತದಿಂದ ಮೃತಪಡುತ್ತಿರುವುದು ಸರ್ಕಾರದ ಗಮನಕ್ಕಿದೆ. ಕಳೆದ ಮೂರು ವರ್ಷಗಳಲ್ಲಿ 1004 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೂರು ವರ್ಷದಲ್ಲಿ ಜಯದೇವದಲ್ಲಿ 61299 ಜನ ದಾಖಲಾಗಿದ್ದು, ಇವರಲ್ಲಿ 45 ವರ್ಷದೊಳಗಿನ 472 ಜನ ಹಠಾತ್‌ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದರು.

ಕಾರ್ಡಿಯಾಕ್‌ ಬೈಪಾಸ್‌‍ ಸರ್ಜರಿಗೆ ಮಧ್ಯ ಕರ್ನಾಟಕ ಭಾಗದಲ್ಲಿ ವ್ಯವಸ್ಥೆ ಮಾಡಬೇಕು. ಆರೋಗ್ಯದ ಬಗ್ಗೆಯೂ ಜನತೆಗೆ ಮಾಹಿತಿ ನೀಡಬೇಕು. ಎಲ್ಲ ಜಿಲ್ಲೆಗಳಲ್ಲಿ ಕ್ಯಾತಲ್ಯಾಬ್‌ ವ್ಯವಸ್ಥೆ ಮಾಡಬೇಕು ಎಂದು ಧನಂಜಯ ಸರ್ಜಿ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಸಚಿವರು, ಅತಿಯಾದ ಮಾಲಿನ್ಯದಿಂದ ಹೃದಯಾಘಾತ ಆಗುತ್ತಿದೆ. ಮಾನಸಿಕ ಒತ್ತಡ, ಬೊಜ್ಜುತನವೂ ಕಾರಣ.ಬಿಪಿ, ಶುಗರ್‌ ಇರುವವರಿಗೆ ಶಾಶ್ವತವಾಗಿ ಔಷದ ನೀಡಬೇಕು. ಇದನ್ನ ನಿಯಂತ್ರಿಸಿದರೆ ಉಳಿದ ಖಾಯಿಲೆ ನಿಯಂತ್ರಣವಾಗಲಿದೆ ಎಂದರು.
86 ಆಸ್ಪತ್ರೆಗಳಲ್ಲಿ ಕ್ಯಾತ್ಲಾಬ್‌ ಇದೆ. ಟೆಲಿ ಇಸಿಜಿ ಇಡಿ ರಾಜ್ಯಕ್ಕೆ ವಿಸ್ತರಣೆ ಮಾಡುತ್ತಿದ್ದೇವೆ. ಟೆನೆಕ್ಟೆಪ್ಲೆಸ್‌‍ ಇಂಜೆಕ್ಷನ್‌ ಕೂಡ ಟೆಲಿ ಇಸಿಜಿ ಇರುವ ಕಡೆ ಇರಲಿದೆ (ಉಚಿತ) ಏಡ್‌(ಎಐಡಿಡಿ) ಡಿವೈಸ್‌‍ ಕೂಡ ಎಲ್ಲ ಆಸ್ಪತ್ರೆಗೆ ನೀಡುತ್ತಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.

RELATED ARTICLES

Latest News