Saturday, July 19, 2025
Homeಮನರಂಜನೆತೆಲುಗು ಚಿತ್ರರಂಗದ ಹಾಸ್ಯ ನಟ ಫಿಶ್ ವೆಂಕಟ್ ವಿಧಿವಶ

ತೆಲುಗು ಚಿತ್ರರಂಗದ ಹಾಸ್ಯ ನಟ ಫಿಶ್ ವೆಂಕಟ್ ವಿಧಿವಶ

Telugu Actor Venkat Raj Dies At 53 Due To Kidney Failure

ಹೈದರಾಬಾದ್, ಜು.19- ತೆಲುಗು ಚಿತ್ರರಂಗದ ಹಾಸ್ಯ ನಟ ಫಿಶ್ ವೆಂಕಟ್ ಅವರು ಮೂತ್ರಪಿಂಡದ ತೊಂದರೆಯಿಂದ ಇಹ ಲೋಕ ತ್ಯಜಿಸಿದ್ದಾರೆ.ಅನಾರೋಗ್ಯದಿಂದ ನರಳುತ್ತಿದ್ದ ಅವರಿಗೆ ಪವನ್ ಕಲ್ಯಾಣ್ ಆರ್ಥಿಕ ನೆರವು ನೀಡಿದ್ದರೂ ಹಣಕಾಸಿನ ತೊಂದರೆಯಿಂದ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ತೆಲುಗು ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿ ಗಮನ ಸೆಳೆದಿದ್ದ ಫಿಶ್ ವೆಂಕಟ್ ಅವರಿಗೆ 54 ವರ್ಷ ವಯಸ್ಸಾಗಿತ್ತು. ಕೆಲವು ಸಮಯದಿಂದ ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದರು. ಅವರ ಎರಡೂ ಮೂತ್ರಪಿಂಡಗಳು ಹಾನಿಗೊಳಗಾಗಿದ್ದರಿಂದ, ಅವರ ಕುಟುಂಬ ಸದಸ್ಯರು ಕೆಲವು ದಿನಗಳ ಹಿಂದೆ ಡಯಾಲಿಸಿಸ್ ಗಾಗಿ ಬೋಡುಪ್ಪಲ್‌ನ ಆಸ್ಪತ್ರೆಗೆ ದಾಖಲಿಸಿದ್ದರು.

ವೈದ್ಯರು ಎರಡೂ ಮೂತ್ರಪಿಂಡಗಳನ್ನು ಕಸಿ ಮಾಡಲು ಹೇಳಿದ್ದರು. ಅವರ ಆರ್ಥಿಕವಾಗಿ ಸಬಲರಾಗಿಲ್ಲ. ಹೀಗಾಗಿ, ವೈದ್ಯಕೀಯ ಸೇವೆಗಳನ್ನು ಪಡೆಯಲು ಸಾಧ್ಯವಾಗಿಲ್ಲ. ದಾನಿಗಳಿಂದ ಸಹಾಯಕ್ಕಾಗಿ ಮನವಿ ಮಾಡಿದ ಕೆಲವೇ ದಿನಗಳಲ್ಲಿ ಫಿಶ್ ವೆಂಕಟ್ ಸಾವನ್ನಪ್ಪಿದ್ದರಿಂದ ಕುಟುಂಬ ಸದಸ್ಯರು ಕಣ್ಣೀರು ಹಾಕುತ್ತಿದ್ದಾರೆ.

ಪವನ್ ಕಲ್ಯಾಣ್ ಅವರು ಈ ಮೊದಲು ನಟನಿಗೆ ಸಹಾಯ ಮಾಡಿದ್ದರು.ಫಿಶ್ ವೆಂಕಟ್ ಅವರ ನಿಜವಾದ ಹೆಸರು ಮಂಗಳಂಪಲ್ಲಿ ವೆಂಕಟೇಶ್.ಮುಶೀರಾಬಾದ್ ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುವ ಮೂಲಕ ಅವರು ಫಿಶ್ ವೆಂಕಟ್ ಎಂದು ಗುರುತಿಸಿಕೊಂಡಿದ್ದರು. ಅವರು ಮುಶೀರಾಬಾದ್‌ನಲ್ಲಿ ವಾಸಿಸುತ್ತಿದ್ದರು. ನಟ ಶ್ರೀಹರಿ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ನಿರ್ದೇಶಕ ವಿ.ವಿ. ವಿನಾಯಕ್ ಅವರನ್ನು ನಟನಾಗಿ ಪರಿಚಯಿಸಿದರು.

ಫಿಶ್ ವೆಂಕಟ್ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯನಟ ಮತ್ತು ಪಾತ್ರ ಕಲಾವಿದನಾಗಿ ಚಲನಚಿತ್ರ ಪ್ರಿಯರನ್ನು ರಂಜಿಸಿದ್ದಾರೆ. ಅವರು ಆದಿ, ದಿಲ್, ಬನ್ನಿ, ಅತ್ತಾರಿಂಟಿಕಿ ದಾರೇದಿ, ಡಿಜೆ ಟಿಲ್ಲು ಮುಂತಾದ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿ ಉತ್ತಮ ಮನ್ನಣೆ ಗಳಿಸಿದ್ದಾರೆ. ಅವರು ಎರಡು ತಮಿಳು ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ಯಾವುದೇ ಸಿನಿಮಾ ಮಾಡಿಲ್ಲ.

RELATED ARTICLES

Latest News