Thursday, November 14, 2024
Homeರಾಜ್ಯದೇವಸ್ಥಾನ-ಸರ್ಕಾರಿ ಶಾಲೆಗೂ ವಕ್ಫ್ ಕಂಟಕ

ದೇವಸ್ಥಾನ-ಸರ್ಕಾರಿ ಶಾಲೆಗೂ ವಕ್ಫ್ ಕಂಟಕ

ಮಂಡ್ಯ,ಅ.3- ಸಕ್ಕರೆ ನಾಡು ಮಂಡ್ಯಜಿಲ್ಲೆಯಲ್ಲಿ ವಕ್ಫ್ ಆಸ್ತಿ ವಿವಾದ ದಿನದಿನಕ್ಕೆ ಜೋರಾಗುತ್ತಿದೆ. ರೈತರ ಜಮೀನು, ಹಿಂದೂ ದೇಗುಲದ ಬಳಿಕ ಸರ್ಕಾರಿ ಶಾಲೆ ಜಾಗದ ಮೇಲೂ ವಕ್‌್ಫ ಮಂಡಳಿ ಕಣ್ಣಿಟ್ಟಂತೆ ಕಾಣುತ್ತಿದೆ. ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದ ಸರ್ಕಾರಿ ಶಾಲೆ ಜಾಗದ ಪಹಣಿಯಲ್ಲಿ ವಕ್‌್ಫ ಆಸ್ತಿ ಎಂದು ನಮೂದಾಗಿದೆ. ಸರ್ವೆ ನಂ.215ರ 30 ಗುಂಟೆ ಜಾಗದಲ್ಲಿ ಸರ್ಕಾರಿ ಶಾಲೆ ಇದ್ದು, ಜಾಗದ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ನಮೂದಾಗಿದೆ.

ಪ್ರಸ್ತುತ ಸರ್ಕಾರಿ ಶಾಲೆ ಜಾಗ ಕಬಳಿಕೆಗೆ ಮುಂದಾದ ವಕ್ಫ್ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. ಸರ್ಕಾರದ ವಿರುದ್ಧ ಕಿಡಿ ಕಾರಿ ರಾಜ್ಯದ ವಕ್‌್ಫ ಮಂಡಳಿ ವಜಾಗೊಳಿಸಲು ಆಗ್ರಹಿಸಿದ್ದಾರೆ. ಇನ್ನು ಮಹದೇವಪುರ ಗ್ರಾಮದಲ್ಲಿ 6 ಗುಂಟೆ ವ್ಯಾಪ್ತಿಯಲ್ಲಿರುವ ಚಿಕ್ಕಮ ದೇವಿ ಎಂಬ ದೇವಸ್ಥಾನವಿದ್ದು . ಹಲವು ವರ್ಷಗಳ ಹಿಂದೆಯೇ ಈ ದೇವಸ್ಥಾನ ಕಟ್ಟಿಸಿ ಗ್ರಾಮದ ಜನರು ಪೂಜಿಸುತ್ತಿದ್ದಾರೆ ಕಳೆದ 2023 ಜುಲೈ 17ರ ವರೆಗೆ ಈ ದೇವಸ್ಥಾನದ 6 ಗುಂಟೆ ಜಾಗದ ಆರ್‌ಟಿಸಿಯಲ್ಲಿ ಬಂಜರು ಎಂದು ಉಲ್ಲೇಖವಾಗಿದೆ, ಅಂದರೆ ಇದು ಸರ್ಕಾರಿ ಜಮೀನು ಎಂದರ್ಥ. ಇನ್ನೊಂದೆಡೆ ಸಾಗುವಳಿ ಕಾಲಂನಲ್ಲಿ ಚಿಕ್ಕಮನ ದೇವಸ್ಥಾನ ಎಂದು ಹೆಸರಿತ್ತು. ಆದರೆ ಇದೀಗ ಈ ದೇವಸ್ಥಾನ ಹಾಗೂ ಜಾಗವನ್ನು ವಕ್‌್ಫ ಆಸ್ತಿ ಎಂದು ಮಾಡಲಾಗಿದೆ.

ಹಿಂದೂ ದೇವಸ್ಥಾನವನ್ನು ವಕ್‌್ಫ ಆಸ್ತಿ ಎಂದು ಮಾಡುವ ಮೂಲಕ ಅಧಿಕಾರಿಗಳು ಗ್ರಾಮಸ್ಥರ ಬಾವನೆಯನ್ನು ಕೆಣಕಿದ್ದಾರೆ ಹಿಂದೂ ದೇವಸ್ಥಾನವನ್ನು ವಕ್‌್ಫ ಆಸ್ತಿ ಎಂದು ಮಾಡುವ ಮೂಲಕ ಅಧಿಕಾರಿಗಳು ಬಹುದೊಡ್ಡ ವಂಚನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ನಾಗಮಂಗಲ ನಂತರ ಶ್ರೀರಂಗಪಟ್ಟಣದತ್ತ ವಕ್‌್ಫ ಕಿಚ್ಚು ವ್ಯಾಪಿಸಿದೆ.

RELATED ARTICLES

Latest News