Thursday, September 19, 2024
Homeರಾಜ್ಯಸ್ಲೀಪರ್​​ ಸೆಲ್​​ಗಳ ತಾಣವಾಗುತ್ತಿವೆ ಮೈಸೂರು-ಮಲೆನಾಡು : ಸಿ.ಟಿ.ರವಿ ಹೊಸ ಬಾಂಬ್

ಸ್ಲೀಪರ್​​ ಸೆಲ್​​ಗಳ ತಾಣವಾಗುತ್ತಿವೆ ಮೈಸೂರು-ಮಲೆನಾಡು : ಸಿ.ಟಿ.ರವಿ ಹೊಸ ಬಾಂಬ್

Terror Sleeper Cells active in Mysuru : CT Ravi

ಮೈಸೂರು,ಸೆ.16– ಮೈಸೂರು- ಮಲೆನಾಡು ಸ್ಲೀಪರ್ ಸೆಲ್ಗಳ ತಾಣವಾಗುತ್ತಿದೆ, ಭಯೋತ್ಪಾದಕ ಕೃತ್ಯ ಎಸಗಲು ಇಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್ ಬಾವುಟ ಹಾರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಲೆನಾಡು ಸ್ಲೀಪರ್ ಸೆಲ್ಗಳ ತಾಣವಾಗುತ್ತಿದೆ, ಭಯೋತ್ಪಾದಕ ಕೃತ್ಯ ಎಸಗಲು ಇಲ್ಲಿ ತರಬೇತಿ ನೀಡಲಾಗುತ್ತಿದೆ. ಈ ಹಿಂದೆ ಕೊಪ್ಪದಲ್ಲಿ ಯಾಸೀನ್ ಭಟ್ಕಳ್ ನೇತೃತ್ವದಲ್ಲಿ ಭಯೋತ್ಪಾದಕ ತರಬೇತಿ ಶಿಬಿರ ನಡೆಸಲಾಗುತ್ತಿತ್ತು. ಅದನ್ನು ಬಜರಂಗದಳ ಪತ್ತೆ ಮಾಡಿತ್ತು. ದೇಶ ವಿರೋಧಿ ಚಟುವಟಿಕೆ ನಡೆಸಿದವರನ್ನು ಸಮಗ್ರ ತನಿಖೆ ನಡೆಸಬೇಕಿತ್ತು. ಆದರೆ ಯಾರೋ ಪ್ರಭಾವಿಗಳು ಹೇಳಿದ್ದಾರೆಂದು ಪೊಲೀಸರು ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ, ಇದು ಸರಿಯಲ್ಲ ಎಂದಿದ್ದಾರೆ.

ಇದೇ ವೇಳೆ ಬಿಜೆಪಿ ಶಾಸಕ ಮುನಿರತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮುನಿರತ್ನ ಆಡಿಯೋ ಪ್ರಕರಣದ ಹಿಂದೆ ಟೂಲ್ ಕಿಟ್ ಕೆಲಸ ಮಾಡಿದೆ. ಹನಮಂತಪ್ಪ ಆಡಿಯೋಯಿಂದ ಇದು ಸಾಬೀತಾಗಿದೆ. ಕಾಂಗ್ರೆಸ್ ತಮ ಪಕ್ಷದವರಿಗೆ ಒಂದು ನ್ಯಾಯ ಬಿಜೆಪಿಗೆ ಒಂದು ನ್ಯಾಯ ಅನ್ನೋ ನೀತಿ ಅನುಸರಿಸುತ್ತಿದ್ದಾರೆ.

ಕಾಂಗ್ರೆಸ್ ಶಾಸಕ ಚೆನ್ನರೆಡ್ಡಿ ಮೇಲೂ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಆತನನ್ನು ಬಂಧಿಸುವ ಬದಲು ಸಿಎಂ ತಮ ಮನೆಯಲ್ಲಿ ಬಿರಿಯಾನಿ ಊಟ ಹಾಕಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೃಷಿ ಸಚಿವ ಚೆಲುವರಾಯಸ್ವಾಮಿ, ಮಾಜಿ ಸಚಿವ ನಾಗೇಂದ್ರ ಸೇರಿ ಹಲವು ಕಾಂಗ್ರೆಸ್ ನಾಯಕರ ವಿರುದ್ಧ ದೂರು ದಾಖಲಾಗಿದೆ. ಯಾರನ್ನ ಬಂಧಿಸುವ ಕೆಲಸ ಮಾಡಿಲ್ಲ. ಮುನಿರತ್ನ ಅವರ ವಿರುದ್ಧ ಎಫ್ಐಆರ್ ದಾಖಲಾದ ದಿನವೇ ಬಂಧಿಸಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ ವರದಿ ಬರುವ ಮುನ್ನವೇ ಮುನಿರತ್ನ ಅವರನ್ನು ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಮಂಗಳೂರು ಬಿ.ಸಿ ರೋಡ್ ನಲ್ಲಿ ಹಿಂದುಗಳಿಗೆ ಸವಾಲಾಕಿರುವ ಪ್ರಕರಣದ ಕುರಿತು ಮಾತನಾಡಿರುವ ಸಿ.ಟಿ ರವಿ, ಇದು ಭಾರತದ ದೇಶಕ್ಕೆ ಹಾಕಿರುವ ಸಾವಲು. ಯುದ್ಧವನ್ನು ನಾವು ಯುದ್ಧವಾಗಿಯೇ ಸ್ವೀಕರಿಸಿ ಉತ್ತರ ಕೊಡುತ್ತೇವೆ ಎಂದು ಗುಡುಗಿದ್ದಾರೆ.

ಹಿಂದೆ ನಮ ಪೂರ್ವಜರು ಕತ್ತಿ ತೋರಿಸಿದಾಗ ಕತ್ತಿಯಿಂದಲೇ ಉತ್ತರ ಕೊಟ್ಟಿದ್ದರು. ಯುದ್ಧಕ್ಕೆ ಸವಾಲು ಹಾಕಿದಾಗ ಯುದ್ಧದ ಮೂಲಕವೇ ಗೆಲ್ಲಬೇಕು. ಸಲಹೆ ಎಲ್ಲಾ ಕೆಲಸ ಮಾಡಲ್ಲ. ನಾವು ಸಹ ಕತ್ತಿಯಿಂದಲೇ ಉತ್ತರ ಕೊಡುತ್ತೇವೆ. ಇಲ್ಲವಾದರೇ ನಮ ದೇಶ ಬಾಂಗ್ಲಾದೇಶ, ಪಾಕಿಸ್ತಾನದಂತೆ ಆಗುತ್ತದೆ. ಅದಕ್ಕೆ ನಾವು ಅವಕಾಶ ಕೊಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Latest News