Tuesday, July 2, 2024
Homeಇದೀಗ ಬಂದ ಸುದ್ದಿಬಿಜೆಪಿ-ಜೆಡಿಎಸ್‌‍ ದೋಸ್ತಿಗೆ ಪರೀಕ್ಷೆ, ಚನ್ನಪಟ್ಟಣದಲ್ಲಿ ತ್ಯಾಗ ಮಾಡೋರು ಯಾರು..?

ಬಿಜೆಪಿ-ಜೆಡಿಎಸ್‌‍ ದೋಸ್ತಿಗೆ ಪರೀಕ್ಷೆ, ಚನ್ನಪಟ್ಟಣದಲ್ಲಿ ತ್ಯಾಗ ಮಾಡೋರು ಯಾರು..?

ಬೆಂಗಳೂರು,ಜೂ.21- ಪ್ರತಿಷ್ಠೆಯ ಕಣವಾಗಿ ಪರಿಣಮಿಸಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವುದೇ ಬಿಜೆಪಿ ಹಾಗೂ ಜೆಡಿಎಸ್‌‍ಗೆ ಸವಾಲಾಗಿ ಪರಿಣಮಿಸಿದೆ. ಈ ಕ್ಷೇತ್ರದಿಂದ ಎರಡೂ ಪಕ್ಷಗಳಿಂದ ಒಮತದ ಅಭ್ಯರ್ಥಿ ಕಣಕ್ಕಿಳಿಸಬೇಕೆಂಬ ಲೆಕ್ಕಾಚಾರ ಎಲ್ಲಾ ನಾಯಕರಲ್ಲೂ ಇದೆ. ಆದರೆ ಕ್ಷೇತ್ರವನ್ನು ಯಾರು ತ್ಯಾಗ ಮಾಡುತ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ರಾಮನಗರ ಹೇಳಿಕೇಳಿ ಒಂದು ಕಾಲದಲ್ಲಿ ಜೆಡಿಎಸ್‌‍ನ ಭದ್ರಕೋಟೆಯಾಗಿತ್ತು. 2018ರಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳನ್ನು ಗೆದ್ದಿದ್ದರೆ 2023ರಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಿಂದ ಕೇವಲ ಚನ್ನಪಟ್ಟಣದಲ್ಲಿ ಮಾತ್ರ ಜೆಡಿಎಸ್‌‍ ಗೆದ್ದಿತ್ತು.

ಇದೀಗ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರವನ್ನು ಗೆದ್ದು ಬೀಗಿರುವ ಜೆಡಿಎಸ್‌‍ ಸದ್ಯ ಫೀನಿಕ್‌್ಸನಂತೆ ಮೇಲೆದ್ದಿದೆ. ಅಸ್ತಿತ್ವ ಕಳೆದುಕೊಂಡಿರುವ ಜಿಲ್ಲೆಯಲ್ಲೇ ತನ್ನ ಪ್ರಾಬಲ್ಯ ಮೆರೆಯಬೇಕೆಂಬುದು ದಳಪತಿಗಳ ಲೆಕ್ಕಾಚಾರ. ಕಳೆದೆರಡು ಚುನಾವಣೆಯಲ್ಲಿ ಸೋತು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಮಾಜಿ ಸಚಿವ, ಹಾಲಿ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಕೂಡ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ.

ಚುನಾವಣೆಯಲ್ಲಿ ಸೋತಿದ್ದರೂ ಚನ್ನಪಟ್ಟಣದಲ್ಲಿ ಸೈನಿಕ ತನ್ನದೇ ಆದ ಹಿಡಿತ ಮತ್ತು ಬೆಂಬಲಿಗರನ್ನು ಹೊಂದಿದ್ದಾರೆ. ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಆದರೆ ತಾನು ಗೆದ್ದಿರುವ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲು ಜೆಡಿಎಸ್‌‍ ಒಪ್ಪುತ್ತದೆಯೇ ಎಂದು ಊಹೆಗೂ ನಿಲುಕದ ಪ್ರಶ್ನೆ. ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭೆಯಲ್ಲಿ ಸೋತು ಸುಣ್ಣವಾಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ತಮ ಪುತ್ರ ನಿಖಿಲ್‌ಕುಮಾರಸ್ವಾಮಿಗೆ ಇದೇ ಕ್ಷೇತ್ರದಿಂದಲೇ ರಾಜಕೀಯ ಪುರ್ನಜನ ನೀಡಬೇಕೆಂಬ ಮಹಾದಾಸೆಯನ್ನು ಹೊಂದಿದ್ದಾರೆ.

ಉಭಯ ಪಕ್ಷಗಳ ನಾಯಕರು ಒಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮೈತ್ರಿಗೆ ಲಾಭವಾಗುತ್ತದೆ ಎಂಬುದು ಲೋಕಸಭೆ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ.ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭವಾಗುವಂತೆ ಬಿಜೆಪಿ-ಜೆಡಿಎಸ್‌‍ ಪ್ರತ್ಯೇಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್‌‍ಗೆ ಲಾಭವಾಗಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಇಲ್ಲಿ ಕ್ಷೇತ್ರವನ್ನು ಯಾರಿಗೆ ಬಿಟ್ಟು ಕೊಟ್ಟು ತ್ಯಾಗ ಮಾಡುವವರು ಯಾರು ಎಂಬುದು ಎದುರಾಗಿರುವ ಪ್ರಶ್ನೆ.

ಬದಲಾದ ಪರಿಸ್ಥಿತಿ:
ಈವರೆಗೂ ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್‌‍ ಅಭ್ಯರ್ಥಿಯಾಗಿ ಸ್ಥಳೀಯ ಕಾರ್ಯಕರ್ತರೊಬ್ಬರು ಕಣಕ್ಕಿಳಿಯಬಹುದೆಂಬ ಲೆಕ್ಕಾಚಾರವಿತ್ತು.
ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಏಕೆಂದರೆ ಖುದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಖಾಡಕ್ಕಿಳಿದಿರುವುದು ಚುನಾವಣಾ ಕಾವು ರಂಗೇರುವಂತೆ ಮಾಡಿದೆ.

ಕ್ಷೇತ್ರದ ಮತದಾರರು ಬಯಸಿದರೆ ನಾನು ಸ್ಪರ್ಧಿಸಲು ಸಿದ್ಧ ಎಂದು ಹೇಳಿರುವುದು ಬಿಜೆಪಿ, ಜೆಡಿಎಸ್‌‍ ರಣತಂತ್ರವನ್ನು ಬದಲಾಯಿಸಿದೆ.
ಮುಖ್ಯವಾಗಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌‍ ಸಂಸದರಾಗಿದ್ದ ಡಿ.ಕೆ.ಸುರೇಶ್‌ ಸೋಲು ಅನುಭವಿಸಿದ್ದಾರೆ. ಇದರ ಸೇಡು ತೀರಿಸಿಕೊಳ್ಳಬೇಕೆಂದು ಹಿರಿಯ ಸಹೋದರ, ಡಿಸಿಎಂ ಡಿ.ಕೆ.ಶಿವಕುಮಾರ್‌ ಪಣ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಹೆಚ್‌ಡಿಕೆ ರಾಜೀನಾಮೆಯಿಂದ ತೆರವಾದ ಚನ್ನಪಟ್ಟಣಕ್ಕೆ ಉಪ ಚುನಾವಣೆ ಘೋಷಣೆಯಾಗುವ ಮುನ್ನವೇ ಅವರು ಶಸಾ್ತ್ರಭ್ಯಾಸಕ್ಕೆ ಇಳಿದಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ನೆಪದಲ್ಲಿ ಡಿಕೆಶಿ ಜನರ ನಾಡಿಮಿಡಿತ ಅರಿಯುತ್ತಿದ್ದಾರೆ. ಉಪಚುನಾವಣೆಯಲ್ಲಿ ಯಾರನ್ನು ಸ್ಪರ್ಧೆಗಿಳಿಸಿದರೆ ಗೆಲುವು ಸಾಧ್ಯ ಎಂಬ ಬಗ್ಗೆ ಜನಾಭಿಪ್ರಾಯ ಕಲೆ ಹಾಕುತ್ತಿದ್ದಾರೆ. ಜೆಡಿಎಸ್‌‍ ಕೂಡ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದೆ. ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್‌‍ನಲ್ಲಿ ಈ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಪೈಪೋಟಿ ಏರ್ಪಟ್ಟಿದೆ.

ಆದರೆ ಉಪಚುನಾವಣೆಗೆ ಯಾರಿಗೆ ಟಿಕೆಟ್‌ ಎಂಬ ಸುಳಿವನ್ನು ಯಾವ ಪಕ್ಷಗಳೂ ಬಿಟ್ಟುಕೊಟ್ಟಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿರುವ ಕುಮಾರಸ್ವಾಮಿ, ಕೇಂದ್ರದಲ್ಲಿ ಮಂತ್ರಿ ಸ್ಥಾನವನ್ನೂ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಕ್ಷೇತ್ರದ ವ್ಯಾಪ್ತಿಗೆ ಬರುವ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌‍ ನಿರೀಕ್ಷೆಗೂ ಮೀರಿದ ಮತಗಳನ್ನು ಪಡೆದಿದೆ. ಇದು ಹೆಚ್‌ಡಿಕೆ ಹಾಗೂ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್‌ ಅವರಿಗೆ ಹೊಸ ಸವಾಲು ತಂದೊಡ್ಡಿದೆ.

ಅಲ್ಲದೇ, ಮುಂಬರುವ ಉಪಚುನಾವಣೆಯಲ್ಲಿ ಸೋಲೊಪ್ಪಿಕೊಳ್ಳಲು ಹೆಚ್‌ಡಿಕೆ ಅವರಿಗೆ ಸಾಧ್ಯವಿಲ್ಲ. ಇದರ ನಡುವೆ ಡಿಕೆಶಿ ಚನ್ನಪಟ್ಟಣದತ್ತ ತಮ ದೃಷ್ಟಿ ನೆಟ್ಟಿದ್ದಾರೆ. ಚನ್ನಪಟ್ಟಣ ಈ ಹಿಂದೆ ಅವರ ಹಿಡಿತದಲ್ಲಿಯೇ ಇದ್ದ ಕ್ಷೇತ್ರ. ಹೀಗಾಗಿ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಬಿಜೆಪಿ- ಜೆಡಿಎಸ್‌‍ನ ಸ್ಥಳೀಯ ಮುಖಂಡರ ದೊಡ್ಡ ಪಟ್ಟಿ ಸಿದ್ಧಪಡಿಸಿ, ಹಂತಹಂತವಾಗಿ ಅವರನ್ನು ತಮತ್ತ ಸೆಳೆಯಲು ಮುಂದಾಗಿದ್ದಾರೆ ಎಂದೇ ಹೇಳಲಾಗುತ್ತಿದೆ.

ಡಿಕೆಶಿ ಕಾರ್ಯತಂತ್ರ ಯಶಸ್ವಿಯಾದರೆ ಖಂಡಿತವಾಗಿಯೂ ಮೈತ್ರಿ ಅಭ್ಯರ್ಥಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಆದರೆ, ಇದಕ್ಕೆ ಅವಕಾಶ ನೀಡದಂತೆ ಮೈತ್ರಿ ಪಕ್ಷಗಳ ನಾಯಕರಾದ ಹೆಚ್‌ ಡಿಕೆ ಮತ್ತು ಯೋಗೇಶ್ವರ್‌ ರಚಿಸುವ ಚಕ್ರವ್ಯೂಹವನ್ನು ಡಿಕೆಶಿ ಭೇದಿಸಲೇಬೇಕಾಗುತ್ತದೆ.

ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್‌ಗೆ ಚನ್ನಪಟ್ಟಣ ಕ್ಷೇತ್ರ ಕಬ್ಬಿಣದ ಕಡಲೆಯಾಗಿದೆ. ಹಿಂದಿನ ವಿಧಾನಸಭೆ ಉಪಚುನಾವಣೆಗಳು ಆಡಳಿತ ಪಕ್ಷಕ್ಕೆ ಒಲಿದಿರುವ ಸಾಕಷ್ಟು ಉದಾಹರಣೆಗಳಿವೆ. ಕಾಂಗ್ರೆಸ್‌‍ ಸರ್ಕಾರ ಅಧಿಕಾರದಲ್ಲಿದ್ದರೂ ಚನ್ನಪಟ್ಟಣವನ್ನು ಅಷ್ಟು ಸುಲಭದಲ್ಲಿ ಕೈವಶ ಮಾಡಿಕೊಳ್ಳಲಾಗದು. ಇದರ ಅಂದಾಜು ಡಿಕೆಶಿಗೆ ಇರುವುದರಿಂದಲೇ ಚುನಾವಣೆ ಘೋಷಣೆಗೂ ಮುನ್ನವೇ ಮತಗಳ ಕ್ರೋಢೀಕರಣಕ್ಕೆ ಕೈ ಹಾಕಿದ್ದಾರೆ ಎನ್ನಲಾಗುತ್ತಿದೆ.

RELATED ARTICLES

Latest News