ಥಾಣೆ,ಮೇ 28- ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ 1.29 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾದ ಘಟನೆ ಲ್ಲಿ ನಡೆದಿದೆ.
ದತಿವಲಿ ರೈಲು ನಿಲ್ದಾಣದ ಬಳಿ ನಡೆದ ಈ ಘಟನೆ ನಡೆದಿದೆ.
ಯುವ ವೈದ್ಯರು ದಾದರ್-ಹುಬ್ಬಳ್ಳಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ದತಿವಲಿ ಬಳಿ ಬರುತ್ತಿದ್ದಂತೆ, ಅಪರಿಚಿತ ವ್ಯಕ್ತಿಯೊಬ್ಬ ಅವರ ಕೈಗೆ ಹೊಡೆದ ಪರಿಣಾಮ ಅವರ ಐಫೋನ್ ಕೆಳೆಗೆ ಬಿದ್ದಿದೆ.
ನಂತರ ದಾಳಿಕೋರ ಮೊಬೈಲ್ ಫೋನ್ ಎತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.ವೈದ್ಯರ ಕೈಗೆ ಗಾಯವಾಗಿ ಚಿಕಿತ್ಸೆ ಪಡೆದು ನಂತರ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಪೊಲೀಸರು ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.