Friday, January 31, 2025
Homeರಾಜ್ಯಮತಾಂಧ ಶಕ್ತಿಗಳಿಂದ ಸಂವಿಧಾನಕ್ಕೆ ಧಕ್ಕೆಯಾಗುತ್ತಿದೆ : ಸಿಎಂ

ಮತಾಂಧ ಶಕ್ತಿಗಳಿಂದ ಸಂವಿಧಾನಕ್ಕೆ ಧಕ್ಕೆಯಾಗುತ್ತಿದೆ : ಸಿಎಂ

The Constitution is being undermined by fanatical forces: CM

ಬೆಂಗಳೂರು,ಜ.30- ನಾವು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಇತ್ತೀಚಿನ ದಿನಗಳಲ್ಲಿ ಕೆಲ ಮತಾಂಧ ಶಕ್ತಿಗಳು ಸಂವಿಧಾನಕ್ಕೆ ಧಕ್ಕೆ ಉಂಟುಮಾಡುತ್ತಿದ್ದು, ಅದನ್ನು ರಕ್ಷಿಸುವ ಹೊಣೆ ಕಾಂಗ್ರೆಸ್ ಮೇಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಮಹಾತ ಗಾಂಧೀಜಿಯವರ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಏಕ ಧರ್ಮ, ಏಕ ಭಾಷೆ, ಏಕ ಸಂಸ್ಕೃತಿ ಎಂದು ಹಿಂದುತ್ವದ ಆಧಾರದ ಮೇಲೆ ಹಿಂದೂಸ್ಥಾನ ನಿರ್ಮಾಣ ಮಾಡಲು ಬಿಜೆಪಿ ಮತ್ತು ಆರ್ಎಸ್ಎಸ್ ಮುಂದಾಗಿವೆ. ಇದು ಅಂಬೇಡ್ಕರ್, ಮಹಾತಗಾಂಧಿಯವರ ನಿಲುವುಗಳಿಗೆ ಪೂರಕವಾಗಿವೆ ಎಂದರು.

ಮಹಾತಗಾಂಧೀಜಿಯವರು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಭಾಗವಹಿಸಿ 100 ವರ್ಷ ಮುಗಿದಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಶತಮಾನೋತ್ಸವ ಆಚರಿಸಲಾಯಿತು. ಇದೇ ವೇಳೆ ಸುವರ್ಣ ಸೌಧದ ಮುಂದೆ ಮಹಾತಗಾಂಧೀಜಿಯವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ಎಂದು ಸರಿಸಿಕೊಂಡರು.

ಇಡೀ ವರ್ಷ ಮಹಾತಗಾಂಧೀಜಿಯವರ ನೆನಪಿನಲ್ಲಿ ಶತಮಾನೋತ್ಸವ ಕಾರ್ಯಕ್ರಮಗಳನ್ನು ಆಚರಣೆ ಮಾಡಲಾಗುವುದು. ಗಾಂಧೀಜಿಯವರ ಆಲೋಚನೆ, ಅಂಬೇಡ್ಕರ್ರವರ ಸಂವಿಧಾನ ದೇಶಕ್ಕೆ ಅನಿವಾರ್ಯ ಮತ್ತು ಅಗತ್ಯ ಎಂದರು.

ಬಿಜೆಪಿ ಮತ್ತು ಆರ್ಎಸ್ಎಸ್ನವರು ಮಹಾತಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯಂತ ಮತಾಂಧನನ್ನು ಆರಾಧಿಸುತ್ತಾರೆ. ಮಹಾತ ಗಾಂಧೀಜಿ ಇಲ್ಲದೇ ಇದ್ದಿದ್ದರೆ ದೇಶಕ್ಕೆ ಸ್ವಾತಂತ್ರ ಸಿಗುತ್ತಿರಲಿಲ್ಲ, ದಾಸ್ಯರಿಂದ ಮುಕ್ತರಾಗಿ ಬಿಜೆಪಿಯವರೂ ಸೇರಿದಂತೆ ದೇಶದ ಜನರಿಗೆ ಸ್ವಾತಂತ್ರ ಸಿಗಬೇಕಾದರೆ ಗಾಂಧೀಜಿಯವರೇ ಕಾರಣ. ಅಂತವರನ್ನೇ ಕೊಂದು ಹಾಕಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ನವರು ಗಾಂಧೀಜಿ ವಂಶಸ್ಥರು. ಬಿಜೆಪಿಯವರು ಇತ್ತೀಚೆಗೆ ಸರ್ದಾರ್ ವಲ್ಲಭಾಬಾಯಿ ಪಟೇಲ್, ಅಂಬೇಡ್ಕರ್ ಸೇರಿದಂತೆ ಎಲ್ಲರನ್ನೂ ರಾಜಕೀಯಕ್ಕಾಗಿ ಪ್ರೀತಿಸಲು ಶುರು ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಅಂಬೇಡ್ಕರ್ ಅವರ ಸಂವಿಧಾನವನ್ನು ಆರ್ಎಸ್ಎಸ್ನವರು ವಿರೋಧಿಸಿದ್ದರು. ಅದರಲ್ಲಿ ಭಾರತೀಯತೆಯೇ ಇಲ್ಲ ಎಂದು ಲೇವಡಿ ಮಾಡಿದ್ದರು. ಬಿಜೆಪಿಯವರು ಸಂವಿಧಾನವನ್ನು ಮತ್ತೆ ಬರೆಯಬೇಕು ಎಂದು ಬಯಸಿದ್ದರು. ಆರ್ಎಸ್ಎಸ್ನವರು ಮನುಸತಿಯನ್ನು ಜಾರಿಗೊಳಿಸಲು ಮುಂದಾಗಿದ್ದರು.

ಕಾಂಗ್ರೆಸ್ಸಿಗರು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಸ್ವಾತಂತ್ರ ಸಂಗ್ರಾಮದಂತೆ ಎರಡನೇ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದು ಹೇಳಿದರು.
ಮಹಾತ ಗಾಂಧೀಜಿಯವರ ಆದರ್ಶಗಳು ಪ್ರಸ್ತುತ ಕಾಲಮಾನಕ್ಕೆ ಅನಿವಾರ್ಯವಾಗಿದೆ. ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಘೊಷಣೆಯಡಿ ಆಯೋಜಿಸಲಾಗುತ್ತಿರುವ ಗಾಂಧಿ ಭಾರತ ಕಾರ್ಯಕ್ರಮ ಜನರನ್ನು ತಲುಪಿದೆ ಎಂದರು.

ತಾವು ಬೇರೊಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅನುಪಸ್ಥಿತಿಯಲ್ಲಿ ಪುಷ್ಪಾರ್ಚನೆ ಮಾಡಿ ತೆರಳುತ್ತಿದ್ದೇನೆ ಎಂದು ಹೇಳಿದರು.

RELATED ARTICLES

Latest News