ಲೆಬನಾನ್, ಅ.8– ಕಳೆದ ಒಂದು ವರ್ಷದ ಹಿಂದೆ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯು ಗಾಜಾದಲ್ಲಿನ ಯುದ್ಧಕ್ಕೆ ಕಾರಣವಾಗಿದ್ದು, ಲೆಬನಾನ್ ಮೇಲೆ ಮುಗಿಬಿದ್ದಿರುವ ಇಸ್ರೇಲ್‍ಗೆ ಆಘಾತ ಎದುರಾಗಿದೆ.ಇಸ್ರೇಲ್ ಮೂರನೇ ಅತಿದೊಡ್ಡ ನಗರವಾದ ಹೈ-ವೇ ಮೇಲೆ ಹಿಜ್ಬುಲ್ಲಾ ಸಂಘಟನೆ ನೂರಾರು ರಾಕೆಟ್‍ಗಳನ್ನು ಹಾರಿಸಿದೆ. ಕಳೆದ ಕೆಲ ದಿನಗಳ ಹಿಂದೆ ಇಸ್ರೇಲ್ ಮೇಲೆ ಇರಾನ್ ಕೂಡ ದಾಳಿ ನಡೆಸಿದ್ದು, ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ.
ಇಸ್ರೇಲ್‍ನ ಹೈವೇ ಮೇಲೆ ಐದು ರಾಕೆಟ್ ಮತ್ತು ಟಿಬೇರಿಯಾಸ್ ಮೇಲೆ 15 ರಾಕೆಟ್‍ಗಳಿಂದ ಹಿಜ್ಬುಲ್ಲಾ ಸಂಘಟನೆ ದಾಳಿ ಮಾಡಿದೆ ಎಂದು ಇಸ್ರೇಲಿ ಸೇನೆ ಹೇಳಿದೆ ರಾಕೆಟ್ ದಾಳಿಯಿಂದ ಹಲವು ಕಟ್ಟಡಗಳು ಮತ್ತು ಆಸ್ತಿಗಳಿಗೆ ಹಾನಿಯಾಗಿದೆ. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಂದು ಹೈ-ವೇ ಪೋಲೀಸರು ತಿಳಿಸಿದ್ದಾರೆ.
ಹಮಾಸ್ ದಾಳಿಯ ಮೊದಲ ವಾರ್ಷಿಕೋತ್ಸವದಲ್ಲಿ, ಇಸ್ರೇಲ್ ಮತ್ತೊಮ್ಮೆ ಸೋಟಗಳಿಂದ ತತ್ತರಿಸಿದೆ. ಸೋಮವಾರ ಇಸ್ರೇಲ್ನ ಮೂರನೇ ಅತಿದೊಡ್ಡ ನಗರವಾದ ಹೈ-ವೇ ಮೇಲೆ ಹಿಜ್ಬುಲ್ಲಾ ಭಾರೀ ರಾಕೆಟ್ ಗಳ ಮಳೆಗರೆದಿದೆ.
ತಡರಾತ್ರಿ 11 ಗಂಟೆಯವರೆಗೆ ಹಿಜ್ಬುಲ್ಲಾ ಇಸ್ರೇಲ್ ಮೇಲೆ ಸುಮಾರು 190 ರಾಕೆಟ್ ಹಾರಿಸಿದೆ ಎಂದು ವರದಿಯಾಗಿದೆ. ಇದು ಇಸ್ರೇಲ್ ಉತ್ತರದ ನಗರದ ಮೇಲೆ ನಡೆದ ಮೊದಲ ನೇರ ದಾಳಿಯಾಗಿದೆ.ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಇರಾನ್ ಇಸಹಾನ್ ಬಳಿ ಸೋಟದ ಬಗ್ಗೆ ವರದಿಗಳಾಗಿವೆ. ಆದರೆ, ಖತಮ್ ಅಲ್-ಅನ್ಬಿಯಾ ಏರ್ ಡಿ-ಯನ್ಸ್ ಬೇಸ್ನ ಇರಾನ್ ಅಧಿಕಾರಿಗಳು ಮಂಗಳವಾರ ಮುಂಜಾನೆ, ಸೋಟಗಳ ವರದಿಗಳನ್ನು ನಿರಾಕರಿಸಿದ್ದಾರೆ ಎಂದು ವೈನೆಟ್ ವರದಿ ಮಾಡಿದೆ. ಇತ್ತ ಹಿಜ್ಬುಲ್ಲಾ ಇಸ್ರೇಲ್ ಕಡೆಗೆ ಹಲವಾರು ಸ್ಪೋಟಕಗಳನ್ನು ಉಡಾಯಿಸಿದೆ ಎಂದು ಇಸ್ರೇಲಿ ರಕ್ಷಣಾ ಪಡೆಗಳು ಎಕ್ಸ್ನಲ್ಲಿನ ಪೊಲೀಸ್ ತಿಳಿಸಿದೆ.
ಇರಾನ್ ಬೆಂಬಲಿತ ಹಿಜ್ಬುಲ್ಲಾ, ಲೆಬನಾನ್ನಲ್ಲಿ ಪ್ಯಾಲೆಸ್ಟೀನಿಯನ್ ಉಗ್ರಗಾಮಿ ಗುಂಪು ಹಮಾಸ್ನ ಮಿತ್ರ ಪಕ್ಷವು ದಕ್ಷಿಣದಲ್ಲಿ ಮಿಲಿಟರಿ ನೆಲೆಯನ್ನು ಗುರಿಯಾಗಿಸಿ -ಎಡಿ 1 ಕ್ಷಿಪಣಿ ಉಡಾಯಿಸಿದೆ. 65 ಕಿಮೀ ದೂರದಲ್ಲಿರುವ ಟಿಬೇರಿಯಾಸ್ ಮೇಲೆ ಮತ್ತೊಂದು ದಾಳಿಯನ್ನು ನಡೆಸಿತು ಎಂದು ಹೇಳಿದೆ.
ನಿನ್ನೆ ಸುಮಾರು 190 ಸ್ಪೋಟಕಗಳು ಇಸ್ರೇಲ್ ಪ್ರದೇಶವನ್ನು ಪ್ರವೇಶಿಸಿವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಲೆಬನಾನ್ನಲ್ಲಿನ ಹಿಜ್ಬುಲ್ಲಾ ಗುರಿಗಳ ಮೇಲೆ ವಾಯುಪಡೆಯು ವ್ಯಾಪಕವಾದ ಬಾಂಬ್ ದಾಳಿಗಳನ್ನು ನಡೆಸುತ್ತಿದೆ. ಇಬ್ಬರು ಇಸ್ರೇಲಿ ಸೈನಿಕರು ಕೊಲ್ಲಲ್ಪಟ್ಟಿದ್ದು ಲೆಬನಾನ್ನೊಳಗೆ ಇಸ್ರೇಲಿ ಮಿಲಿಟರಿ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಇಸ್ರೇಲ್ ಮೇಲೆ ಹಿಜ್ಬುಲ್ಲಾದ ರಾಕೆಟ್ ದಾಳಿಯ ಬಗ್ಗೆ ಹೇಳಿಕೆ ನೀಡಿದೆ. ಸ್ವಲ್ಪ ಸಮಯದ ಹಿಂದೆ ನಡೆದ ದಾಳಿಯಲ್ಲಿ, ಮಧ್ಯ ಇಸ್ರೇಲ್ನಲ್ಲಿ ಲೆಬನಾನ್ನಿಂದ ಐದು ದೀರ್ಘ-ಶ್ರೇಣಿಯ ರಾಕೆಟ್‍ಗಳನ್ನು ಹಾರಿಸಲಾಗಿದೆ. ಕೆಲವು ರಾಕೆಟ್‍ಗಳನ್ನು ವಾಯು ರಕ್ಷಣಾ ವ್ಯವಸ್ಥೆಯಿಂದ ಗಾಳಿಯಲ್ಲಿ ಹೊಡೆದುರುಳಿಸಲಾಗಿದ್ದು, ಉಳಿದವು ತೆರೆದ ಪ್ರದೇಶದಲ್ಲಿ ಬಿದ್ದವು ಎಂದು ಇಸ್ರೇಲಿ ಸೇನೆ ಹೇಳಿದೆ.