ಬೆಂಗಳೂರು,ಜು.24- ಗ್ಯಾರಂಟಿ ಹಣವನ್ನೇ ಬಿಡುಗಡೆ ಮಾಡದೇ ತಲಾದಾಯದಲ್ಲಿ ರಾಜ್ಯವೇ ಪ್ರಥಮ ಎಂದು ಹೇಳಲು ಕಾಂಗ್ರೆಸ್ ನಾಯಕರುಗಳಿಗೆ ನಾಚಿಕೆಯಾಗುವುದಿಲ್ಲವೇ ಎಂದು ಆಮ್ ಆದಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಪ್ರಶ್ನೆ ಮಾಡಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ, ಕಳೆದ ಫೆಬ್ರವರಿ ತಿಂಗಳಿನಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಲಕ್ಷಾಂತರ ಮಹಿಳೆಯರಿಗೆ ಗೃಹಲಕ್ಷಿಯ ಹಣವನ್ನೇ ಬಿಡುಗಡೆ ಮಾಡಿಲ್ಲ. ಎಲ್ಲ ಜಿಲ್ಲೆಗಳಲ್ಲಿಯೂ ಮಹಿಳೆಯರು ಸಾಕಷ್ಟು ಆಕೋಶಭರಿತರಾಗಿದ್ದಾರೆ. ಗ್ಯಾರೆಂಟಿ ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಚುನಾವಣೆಗಳಿಗಾಗಿ, ತಮ ನಕಲಿ ಸಾಧನ ಸಮಾವೇಶಗಳ ಸಮಯದಲ್ಲಿ ಮಹಿಳೆಯರ ಪ್ರಲೋಭನೆಗಾಗಿ ಮಾತ್ರ ಹಣವನ್ನು ಬಿಡುಗಡೆ ಮಾಡುತ್ತಿದ್ದಾರೆ. ಇನ್ನು ಮಿಕ್ಕೆಲ್ಲಾ ಗ್ಯಾರಂಟಿಗಳು ಸಂಪೂರ್ಣ ಹಳ್ಳ ಹಿಡಿದಿವೆ ಎಂದು ಹೇಳಿದ್ದಾರೆ.
ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಕಡ್ಡಾಯವಾಗಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ತಲಾ 5 ಕೆ.ಜಿ. ಅಕ್ಕಿಯನ್ನು ಅನ್ನಭಾಗ್ಯ ಎಂಬ ಹೆಸರಿನಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರವು ತನ್ನ ಕಾರ್ಯಕ್ರಮವೆಂದು ಬಿಂಬಿಸಿಕೊಳ್ಳುತ್ತಿರುವುದು ತೀರ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.
ಗೃಹ ಜ್ಯೋತಿ ಎಂಬ ಹೆಸರಿನಲ್ಲಿ 300 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆಂದು ಸುಳ್ಳು ಹೇಳಿ ಈಗ ಸರಾಸರಿಯ ನೆಪದಲ್ಲಿ 50 ಯೂನಿಟ್ ಗಳನ್ನು ನೀಡಲು ಸಹ ಸಾಧ್ಯವಾಗುತ್ತಿಲ್ಲ. ಅಂದಾದುಂದಿ ವಿದ್ಯುತ್ ಬೆಲೆಯನ್ನು ಏರಿಸಿ ರಾಜ್ಯದ ಕೈಗಾರಿಕಗಳ ಮೇಲೆ ಹಾಗೂ ಗೃಹಶಕ್ತಿ ಬಳಕೆದಾರರ ಬಿಲ್ಲುಗಳಲ್ಲಿ ಸುಲಿಗೆ ಮಾಡುತ್ತಿದ್ದಾರೆ. ಇದಲ್ಲದೆ ಈಗ ಪ್ರತಿಯೊಬ್ಬ ಬಳಕೆದಾರರು ಸಾರ್ಟ್ ಮೀರ್ಟ ಅಳವಡಿಸಿಕೊಳ್ಳಬೇಕೆಂಬ ಕಡ್ಡಾಯವನ್ನು ಸಹ ಹಾಕುವ ಮೂಲಕ ಸಿದ್ದರಾಮಯ್ಯ ಸರ್ಕಾರ ಹಗಲುದರೊಡೆಗೆ ಇಳಿದಿರುವುದು ರಾಜ್ಯದ ಜನತೆಯ ನತದೃಷ್ಟ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಆರೋಪಿಸಿದ್ದಾರೆ.
- ಮೇ ತಿಂಗಳಲ್ಲಿ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಪೂರ್ಣ
- ಬಿಹಾರದಲ್ಲಿ ಇಂಡಿಯಾ ಘಟಬಂಧನ್ ಗೆದ್ದರೆ ಎಲ್ಲಾ ಹುದ್ದೆಗಳು ಸಿಕ್ಕಂತೆ : ಡಿಕೆಶಿ
- ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ : 20 ಮಂದಿ ಸಾವು
- ಬೆಂಗಳೂರು ಟನಲ್ ರಸ್ತೆಯ ಟೆಂಡರ್ ಅವಧಿ ಮತ್ತೆ ವಿಸ್ತರಣೆ
- ಮೊನ್ನೆಯಷ್ಟೇ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ‘ವೀಣೆ ಬಹ್ಮ’ ಪೆನ್ನ ಓಬಳಯ್ಯ ನಿಧನ
