Saturday, October 4, 2025
Homeರಾಜ್ಯಜಿಲ್ಲೆಗಳಿಂದ ಜಿಲ್ಲೆಗೆ ಹಬ್ಬುತ್ತಿದೆ 'ಐ ಲವ್‌ ಮಹಮದ್‌' ಬ್ಯಾನರ್‌ ವಿವಾದ

ಜಿಲ್ಲೆಗಳಿಂದ ಜಿಲ್ಲೆಗೆ ಹಬ್ಬುತ್ತಿದೆ ‘ಐ ಲವ್‌ ಮಹಮದ್‌’ ಬ್ಯಾನರ್‌ ವಿವಾದ

The 'I Love Muhammad' banner controversy is spreading from district to district.

ಬೆಂಗಳೂರು,ಅ.4-ಐ ಲವ್‌ ಮಹಮದ್‌ ಬ್ಯಾನರ್‌ ಹಾವಳಿ ಜಿಲ್ಲೆಗಳಿಂದ ಜಿಲ್ಲೆಗೆ ಹಬ್ಬುತಿದ್ದು ಸಂಘರ್ಷಕ್ಕೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಪ್ರಪ್ರಥಮವಾಗಿ ಬೆಣ್ಣೆನಗರಿ ದಾವಣಗೆರೆಯಲ್ಲಿ ಈ ಬ್ಯಾನರ್‌ ಹಾವಳಿ ಕಾಣಿಸಿಕೊಂಡಿದ್ದು ಇದೀಗ ಬೆಳಗಾವಿ, ಕಲ್ಬುರ್ಗಿ ಜಿಲ್ಲೆಗಳಿಗೂ ಆವರಿಸಿದೆ.

ದಾವಣಗೆರೆ: ಕೆಲವು ದಿನಗಳ ಹಿಂದೆಯಷ್ಟೆ ದಾವಣಗೆರೆಯ ಕಾರ್ಲ್‌ಮಾರ್ಕ್ಸ್ ನಗರದಲ್ಲಿ ಐ ಲವ್‌ ಮಹಮದ್‌ ಬ್ಯಾನರ್‌ ಹಾಕಿದ್ದ ವಿಚಾರ ಹಿಂದೂ-ಮುಸ್ಲೀಂರ ನಡುವೆ ಸಂಘರ್ಷಕ್ಕೆ ಕಾರಣವಾಗಿ ಕಲ್ಲು ತೂರಾಟ ನಡೆದಿತ್ತು.

ಈ ಬರಹವುಳ್ಳ ಫ್ಲೇಕ್ಸ್ ಹಾಕಿದ್ದನ್ನು ಹರಿದು ಹಾಕಲಾಗಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಸಂಘರ್ಷ ನಡೆದಿತ್ತು. ನಂತರ ಪೊಲೀಸರು ತಿಳಿಗೊಳಿಸಿದರು.

ಬೆಳಗಾವಿ:ನಗರದ ಖಡಕ್‌ ಗಲ್ಲಿಯ ಮೆಹಬೂಬ್‌ ಸುಭಾನಿ ದರ್ಗಾದ ಉರುಸ್‌‍ ಮೆರವಣಿಗೆಯ ಸಮಯದಲ್ಲಿ ನಿನ್ನೆ ರಾತ್ರಿ ಹಿಂದೂಗಳು ಹಾಗೂ ಅವರ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ಅನುಮತಿ ನೀಡಿದ ದಾರಿ ಬಿಟ್ಟು ಬೇರೆ ಮಾರ್ಗದಲ್ಲಿ ಮೆರವಣಿಗೆ ನಡೆಸಿ ಐ ಲವ್‌ ಮುಹಮದ್‌ ಘೋಷಣೆ ಕೂಗಿದಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಲ್ಲು ತೂರಾಟ ನಡೆಸಲಾಗಿದೆ.
ಘಟನೆಯಿಂದ ಬೆಳಗಾವಿ ನಗರ ಉದ್ವಿಗ್ನಗೊಂಡಿದೆ. ಸ್ಥಳದಲ್ಲಿ ಪೊಲೀಸರು ಗಸ್ತಿನಲ್ಲಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಕಲ್ಬುರ್ಗಿ:
ವೈದ್ಯಕೀಯ ಶಿಕ್ಷಣ ಸಚಿವರ ತವರು ಕ್ಷೇತ್ರವಾದ ಸೇಡಂ ತಾಲ್ಲೂಕಿನ ಊಡಗಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಐ ಲವ್‌ ಮಹಮದ್‌ ಬ್ಯಾನರ್‌ ಕಂಡು ಬಂದಿದ್ದು, ವಿವಿಧ ಹಿಂದೂ ಸಂಘಟನೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಒಟ್ಟಾರೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುರುವಾಗಿ ದೇಶದ ವಿವಿಧೆಡೆ ಹಬ್ಬಿರುವ ಐ ಲವ್‌ ಮಹಮದ್‌ ಬ್ಯಾನರ್‌ ಹಾಗೂ ಘೋಷಣೆ ಈಗ ಕರ್ನಾಟಕದ ಹಲವು ಜಿಲ್ಲೆಗಳಿಗೆ ಹಬ್ಬಿರುವುದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

RELATED ARTICLES

Latest News