Sunday, October 27, 2024
Homeಬೆಂಗಳೂರುಬೆಂಗಳೂರಲ್ಲಿ 2 ಕಡೆ ದರೋಡೆ, ಮೊಬೈಲ್‌ಗಳನ್ನು ದೋಚಿ ಪರಾರಿ

ಬೆಂಗಳೂರಲ್ಲಿ 2 ಕಡೆ ದರೋಡೆ, ಮೊಬೈಲ್‌ಗಳನ್ನು ದೋಚಿ ಪರಾರಿ

The robbers stole two mobile phones from two sides of the city and escaped

ಬೆಂಗಳೂರು,ಅ.27- ಕಳೆದ ರಾತ್ರಿ ನಗರದ ಎರಡು ಕಡೆ ದರೋಡೆಕೋರರು ಎರಡು ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. ಕಾರಿನಲ್ಲಿ ಹೋಗುತ್ತಿದ್ದ ಯುವಕನನ್ನು ದ್ವಿಚಕ್ರ ವಾಹದಲ್ಲಿ ಹಿಂಬಾಲಿಸಿದ ಇಬ್ಬರು ದರೋಡೆಕೋರರು ಅಡ್ಡಗಟ್ಟಿ ಬೆದರಿಸಿ ಮೊಬೈಲ್ ಪೋನ್ ದೋಚಿರುವ ಘಟನೆ ರಾತ್ರಿ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಗೆ ಸಂಭಂದಿಸಿದಂತೆ ಪರಶುರಾಮ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ರಾತ್ರಿ 9.30ರ ಸಂದರ್ಭದಲ್ಲಿ ಐಸಿರಿ ಗೋಸಾಲಾ ಬಳಿ ಪರಶುರಾಮ್ ಅವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಹೊಂಡಾ ಬೈಕ್‌ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ದರೋಡೆಕೋರರು ಅಡ್ಡಗಟ್ಟಿದ್ದಾರೆ.

ನಂತರ ಅವರ ಜೊತೆ ಜಗಳವಾಡಿ ಕಾರಿನಲ್ಲಿದ್ದ ಸುಮಾರು 8 ಸಾವಿರ ಮೊತ್ತದ ಮೊಬೈಲ್ ಎಗರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಮಹದೇವಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಹೈಗ್ರೌಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ತಿಮ್ಮಯ್ಯ ರಸ್ತೆಯಲ್ಲಿ ನಿತಿನ್ ಎಂಬುವವರು ನಡೆದುಕೊಂಡು ಹೋತ್ತಿದ್ದಾಗ ಹಿಂದಿನಿಂದ ಕಪ್ಪು ಬಣ್ಣದ ದ್ವಿಚಕ್ರ ವಾಹನದಲ್ಲಿ ಬಂದ ದರೋಡೆಕೋರರು ಏಕಾಏಕಿ ಅವರ ಕೈನಲ್ಲಿದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಕಳೆದ ರಾತ್ರಿ 10.15ರಲ್ಲಿ ಈ ಘಟನೆ ನಡೆದಿದೆ. ಸುದ್ದಿ ತಿಳಿದ ಹೈಗ್ರೌಂಡ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ದರೋಡೆಕೋರರ ಬಂಧನಕ್ಕೆ ಶೋಧನಡೆಸುತ್ತಿದ್ದಾರೆ.

RELATED ARTICLES

Latest News