Thursday, August 7, 2025
Homeರಾಜ್ಯಹೆಣ್ಣು ಕೊಟ್ಟ ಮಾವನನ್ನು ಕೊಂದು ಸುಟ್ಟು ಹಾಕಿದ ಅಳಿಯ

ಹೆಣ್ಣು ಕೊಟ್ಟ ಮಾವನನ್ನು ಕೊಂದು ಸುಟ್ಟು ಹಾಕಿದ ಅಳಿಯ

The son-in-law who killed and burned his father-in-law

ಬೆಂಗಳೂರು, ಆ.2- ಹೆಣ್ಣು ಕೊಟ್ಟ ಮಾವನನ್ನು ಅಳಿಯ ಕೊಲೆ ಮಾಡಿದರೆ, ಶವವನ್ನು ತಾಯಿ ಮತ್ತು ಮಗಳು ಸುಟ್ಟು ಹಾಕಿರುವಂತಹ ಹೃದಯ ವಿದ್ರಾವಕ ಘಟನೆಯೊಂದು ಕಾಡುಗೋಡಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ದೇವನಹಳ್ಳಿ ಮೂಲದ ಬಾಬು (48) ಅಳಿಯನಿಂದಲೇ ಕೊಲೆಯಾದ ಮಾವ.

ಅಳಿಯ ರಾಮಕೃಷ್ಣ ಹಾಗೂ ಬಾಬು ಅವರ ಪತ್ನಿ ಮುನಿರತ್ನ ಮತ್ತು ಪುತ್ರಿಯಿಂದ ಕೃತ್ಯವೆಸಗಲಾಗಿದ್ದು, ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಹಲವು ವರ್ಷದಿಂದ ಕಾಡುಗೋಡಿಯಲ್ಲಿ ಈ ಕುಟುಂಬ ವಾಸವಿದೆ. ಗೋದಾಮು ಒಂದರಲ್ಲಿ ಬಾಬು ಕೆಲಸ ಮಾಡಿಕೊಂಡಿದ್ದರು. ಈ ನಡುವೆ ಬಾಬು ಪುತ್ರಿ 3 ತಿಂಗಳ ಹಿಂದೆ ರಾಮಕೃಷ್ಣನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಈ ಮದುವೆ ಬಾಬುಗೆ ಇಷ್ಟವಿರಲಿಲ್ಲ.
ಜು. 26ರಂದು ತವರು ಮನೆಗೆ ಮಗಳು ಹಾಗೂ ಅಳಿಯ ರಾಮಕೃಷ್ಣ ಬಂದಿದ್ದಾರೆ.

ಆ ಸಂದರ್ಭದಲ್ಲಿ ಮೊದಲೇ ಮಗಳ ಮೇಲೆ ಬೇಸರಗೊಂಡಿದ್ದ ಬಾಬು ಅವರು ಬಾಯಿಗೆ ಬಂದಂತೆ ಬೈದಿದ್ದಾರೆ. ಗಲಾಟೆ ವೇಳೆ ಪತ್ನಿ ಮುನಿರತ್ನ ಅವರ ಕಪಾಳಕ್ಕೂ ಹೊಡೆದಿದ್ದರು. ಇದರಿಂದ ಕೋಪಗೊಂಡ ಅಳಿಯ ರಾಮಕೃಷ್ಣ ಅತ್ತೆಗೆ ಹೊಡಿಯುತ್ತೀರಾ ಎಂದು ಕಪಾಳಮೋಕ್ಷ ಮಾಡಿದ ಏಟಿಗೆ ಸ್ಥಳದಲ್ಲೇ ಬಾಬು ಮೃತಪಟ್ಟಿದ್ದಾರೆ.

ಆಗ ಮೂವರು ಸೇರಿಕೊಂಡು ಮೃತದೇಹವನ್ನು ಏನು ಮಾಡಬೇಕೆಂದು ಯೋಚಿಸಿ ನಂತರ ಸಂಬಂಧಿಕರೊಬ್ಬರ ಆ್ಯಂಬುಲೆನ್ಸ್ ತರಿಸಿಕೊಂಡು ಮುಂಜಾನೆ 3 ಗಂಟೆಗೆ ಬಾಬು ಮೃತದೇಹವನ್ನು ಆ್ಯಂಬುಲೆನ್ಸ್ ನಲ್ಲಿ ಕೋಲಾರದ ಬಳಿ ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್‌ ಸುರಿದು ಬಾಬು ಶವ ಸುಟ್ಟು ಆರೋಪಿಗಳು ಮನೆಗೆ ಹಿಂದಿರುಗಿದ್ದಾರೆ.

ಇದೆಲ್ಲವನ್ನ ನೋಡಿದ್ದ ಕಿರಿಮಗಳು ನಾಲ್ಕು ದಿನದ ಬಳಿಕ ಸಂಬಂಧಿಕರ ಬಳಿ ಹೇಳಿದ್ದಾಳೆ. ಬಾಬು ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡ ಕಾಡುಗೋಡಿ ಠಾಣೆ ಪೊಲೀಸರು, ಈ ಮೂವರನ್ನು ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ.

RELATED ARTICLES

Latest News