ನವದೆಹಲಿ, ಅ.12- ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಭಾರತ ಪ್ರವಾಸದಲ್ಲಿರುವಾಗಲೇ ಅತ್ತ ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ತಾಲಿಬಾನ್ ಪಡೆಗಳು ಗಡಿಯಲ್ಲಿ ಪಾಕಿಸ್ತಾನಿ ಪಡೆಗಳ ಮೇಲೆ ಮುಗಿ ಬಿದಿದ್ದು, 25ಕ್ಕೂ ಹೆಚ್ಚು ಪಾಕ್ ಸೇನೆಯ ಕ್ಯಾಂಪ್ ಗಳನ್ನು ವಶಕ್ಕೆ ತೆಗೆದುಕೊಂಡಿವೆ. ಈ ಸಂಘರ್ಷದಲ್ಲಿ 150ಕ್ಕೂ ಹೆಚ್ಚು ಪಾಕ್ ಸೈನಿಕರ ಹತ್ಯೆಯಾಗಿದೆ ಎಂದು ಹೇಳಲಾಗಿದೆ.
ಶುಕ್ರವಾರ ರಾತ್ರಿ ಪಾಕಿಸ್ತಾನ ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ವಾಯುನೆಲೆ ಮೇಲೆ ದಾಳಿ ಮಾಡಿದ ಬೆನ್ನಲ್ಲೆ ಆಫ್ಘಾನಿಸ್ತಾನ ರೊಚ್ಚಿಗೆದ್ದಿದ್ದು, ಪಾಕಿಸ್ತಾನದ ಮೇಲೆರಗಿದೆ. ಪ್ರತಿಕಾರಕ್ಕಾಗಿ ನಡೆದ ಈ ದಾಳಿಯಿಂದ ಪಾಕಿಸ್ತಾನ ತತ್ತರಿಸಿದ್ದು, ಗಡಿಯಲ್ಲಿ ಪಾಕ್ ಸೈನಿಕರು ತಮ ಶಿಬಿರಗಳನ್ನು ಬಿಟ್ಟು ಓಡಿ ಹೋಗಿದ್ದಾರೆ. ತಾಲಿಬಾನ್ ಸೈನಿಕರು ಪಾಕಿಸ್ತಾನದ ಬಂಕರ್ಗಳನ್ನು ನಾಶ ಪಡಿಸಿದ್ದಾರೆ.
ಗಡಿ ಪ್ರದೇಶಗಳಲ್ಲಿ ಅಫ್ಘನ್ ಪಡೆಗಳು ನಡೆಸಿದ ಅಪ್ರಚೋದಿತ ದಾಳಿಗಳಿಗೆ ಪಾಕಿಸ್ತಾನ ಪ್ರತಿಕ್ರಿಯಿಸಿದ್ದು, ಹಲವಾರು ಅಫ್ಘನ್ ಗಡಿ ಠಾಣೆಗಳು, ತರಬೇತಿ ಶಿಬಿರಗಳು ಮತ್ತು ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಲಾಗಿದೆ ಎಂದು ಭದ್ರತಾ ಮೂಲಗಳು ಭಾನುವಾರ ತಿಳಿಸಿವೆ.
ತಾಲಿಬಾನ್ ಸರ್ಕಾರದ ರಕ್ಷಣಾ ಸಚಿವಾಲಯ ಭಾನುವಾರ ಮುಂಜಾನೆ ದಾಳಿಗಳನ್ನು ದೃಢಪಡಿಸಿದ್ದು, ತನ್ನ ಪಡೆಗಳು ಪ್ರತೀಕಾರಾತಕ ಮತ್ತು ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿವೆ ಎಂದು ಹೇಳಿದೆ.ಎದುರಾಳಿ ಪಕ್ಷವು ಮತ್ತೊಮೆ ಅಫ್ಘನಿಸ್ತಾನದ ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿದರೆ, ನಮ ಸಶಸ್ತ್ರ ಪಡೆಗಳು ದೇಶದ ಗಡಿಗಳನ್ನು ರಕ್ಷಿಸಲು ಸಂಪೂರ್ಣವಾಗಿ ಸಿದ್ಧವಾಗಿವೆ ಮತ್ತು ಬಲವಾದ ಪ್ರತಿಕ್ರಿಯೆಯನ್ನು ನೀಡುತ್ತವೆ ಎಂದು ಸಚಿವಾಲಯ ತಿಳಿಸಿದೆ.
ಅಫ್ಘನ್ ಪಡೆಗಳು ಖೈಬರ್, ಪಖ್ತುಂಖ್ವಾದ ಅಂಗೂರ್ ಅಡ್ಡಾ, ಬಜೌರ್, ಕುರ್ರಮ್, ದಿರ್ ಮತ್ತು ಚಿತ್ರಾಲ್ ಮತ್ತು ಬಲೂಚಿಸ್ತಾನದ ಬರಮ್ಚಾದಲ್ಲಿ ಪಾಕಿಸ್ತಾನಿ ಠಾಣೆಗಳನ್ನು ಗುರಿಯಾಗಿಸಿಕೊಂಡಿವೆ.ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ, ಗಡಿ ಠಾಣೆಗಳ ಮೇಲಿನ ತಾಲಿಬಾನ್ ದಾಳಿಯನ್ನು ಅಪ್ರಚೋದಿತ ಎಂದು ದೂರಿದ್ದು, ಆಫ್ಘನ್ ಪಡೆಗಳು ನಾಗರಿಕರ ಮೇಲೆ ಗುಂಡು ಹಾರಿಸಿವೆ ಎಂದು ಆರೋಪಿಸಿದ್ದಾರೆ.
ತಾಲಿಬಾನ್ ಪಡೆಗಳು ಪಾಕಿಸ್ತಾನಿ ಸೈನಿಕರ ವಿರುದ್ಧ ದಾಳಿ ನಡೆಸಿ, ಪುನರಾವರ್ತಿತ ಗಡಿ ಉಲ್ಲಂಘನೆ ಮಾಡಿವೆ ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕಿಸ್ತಾನಿ ಪಡೆಗಳು ಇಟ್ಟಿಗೆಗಳು, ಕಲ್ಲಿನಿಂದ ಪ್ರತಿಕ್ರಿಯಿಸುತ್ತಿವೆ ಎಂದು ಹೇಳಿದ್ದಾರೆ. ನಾಗರಿಕರ ಮೇಲೆ ಅಫ್ಘನ್ ಪಡೆಗಳು ಗುಂಡು ಹಾರಿಸುವುದು ಅಂತರರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಪಾಕಿಸ್ತಾನದ ಧೈರ್ಯಶಾಲಿ ಪಡೆಗಳು ತ್ವರಿತ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಯನ್ನು ನೀಡಿವೆ, ಯಾವುದೇ ಪ್ರಚೋದನೆಯನ್ನು ಸಹಿಸುವುದಿಲ್ಲ ಎಂದು ಅವರು ತಮ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಪಾಕಿಸ್ತಾನ ಗಡಿಯಲ್ಲಿ ಸುಮಾರು ಆರು ಸ್ಥಳಗಳಲ್ಲಿ ಅಫ್ಘನ್ ದಾಳಿಗಳು ನಡೆದಿವೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ರೇಡಿಯೋ ಸುದ್ದಿ ಪ್ರಸಾರ ಮಾಡಿದೆ.
ಅಫ್ಘನ್ ಪ್ರದೇಶದ ಮೇಲೆ ವಾಯುದಾಳಿಗಳಿಗೆ ಪ್ರತಿಕ್ರಿಯೆಯಾಗಿ ಪ್ರತೀಕಾರದ ದಾಳಿಗಳನ್ನು ನಡೆಸಲಾಗಿದೆ ಎಂದು ಅಫ್ಘನ್ ರಕ್ಷಣಾ ಸಚಿವಾಲಯದ ವಕ್ತಾರ ಎನಾಯತುಲ್ಲಾ ಖ್ವಾರಿಜಿ ಶನಿವಾರ ತಡರಾತ್ರಿ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನದ ದಾಳಿಯಿಂದಾಗಿ ಬಂದೂಕು, ಫಿರಂಗಿ ಸದ್ದು ಜೋರಾಗಿತ್ತು ಮತ್ತು ಕ್ಷಿಪಣಿಗಳ ದಾಳಿಯಿಂದ ಆಕಾಶದಲ್ಲಿ ರಾತ್ರಿಯ ವೇಳೆ ಬೆಳಕು ಕಾಣಿಸಿಕೊಂಡಿತ್ತು ಎಂದು ಆಫ್ಘನ್ ಪಡೆಗಳು ತಿಳಿಸಿದ್ದು, ವಿಡಿಯೋ ತುಣಕನ್ನು ಹಂಚಿಕೊಂಡಿವೆ. ಘರ್ಷಣೆಗಳು ಕೊನೆಗೊಂಡಿದೆ ಎಂದು ಆಫ್ಘನ್ ಪಡೆಗಳು ಹೇಳಿಲ್ಲ.
ಅಫ್ಘನ್ ರಾಜಧಾನಿ ಕಾಬೂಲ್ ಮೇಲೆ ವಾಯುದಾಳಿಯ ಸ್ಫೋಟದ ನಂತರ ಈ ಹೋರಾಟ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ಅಫ್ಘನ್ ಗಡಿಯ ಬಳಿ ಪಾಕಿಸ್ತಾನ ತಾಲಿಬಾನ್ ಸಶಸ್ತ್ರ ಗುಂಪಿನ ಮೂರು ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದು, ಕನಿಷ್ಠ 19 ಸೈನಿಕರು ಮತ್ತು 45 ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.
ವಾಯುವ್ಯ ಖೈಬರ್, ಪಖ್ತುಂಖ್ವಾಪ್ರಾಂತ್ಯದ ಜಿಲ್ಲೆಯ ಬಜೌರ್ನಲ್ಲಿ 22 ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಶನಿವಾರ ಸೇನೆ ತಿಳಿಸಿದೆ. ದಕ್ಷಿಣ ವಜೀರಿಸ್ತಾನ್ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಅದು ಹೇಳಿದೆ. ದಕ್ಷಿಣ ವಜೀರಿಸ್ತಾನ್ನಲ್ಲಿ 12 ಸೈನಿಕರು ಶೌರ್ಯದಿಂದ ಹೋರಾಡಿ, ಹುತಾತ್ಮರಾದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಲೋವರ್ ದಿರ್ ಪ್ರದೇಶದಲ್ಲಿ ನಡೆದ ಮತ್ತೊಂದು ಘರ್ಷಣೆಯಲ್ಲಿ, ಸೈನಿಕರು ಉಗ್ರಗಾಮಿ ಅಡಗುತಾಣವನ್ನು ಕಂಡುಹಿಡಿದ್ದು, ಗುಂಡಿನ ಚಕಮಕಿಯಲ್ಲಿ ಏಳು ಸೈನಿಕರು ಮತ್ತು 10 ಬಂಡಾಯ ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಸೇನೆ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.
ತೆಹ್ರೀಕ್-ಎ-ತಾಲಿಬಾನ್ (ಟಿಟಿಪಿ) ಎಂದೂ ಕರೆಯಲ್ಪಡುವ ಸಾಮಾಜಿಕ ಮಾಧ್ಯಮದ ಸಂದೇಶದಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇಸ್ಲಾಮಾಬಾದ್ ಅಫ್ಘಾನಿಸ್ತಾನದಲ್ಲಿ ನೆಲೆಗೊಂಡಿರುವುದಾಗಿ ಹೇಳಿಕೊಳ್ಳುವ ಈ ಗುಂಪು, ಪ್ರತ್ಯೇಕವಾಗಿದೆ ಆದರೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ನೊಂದಿಗೆ ನಿಕಟ ಸಂಬಂಧ ಹೊಂದಿದೆ. ಕಾಬೂಲ್ನಲ್ಲಿರುವ ತಾಲಿಬಾನ್ ಸರ್ಕಾರವು ತನ್ನ ಜವಾಬ್ದಾರಿಗಳನ್ನು ಎತ್ತಿಹಿಡಿಯಬೇಕು, ಪಾಕಿಸ್ತಾನದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ತನ್ನ ಮಣ್ಣನ್ನು ಬಳಸುವುದನ್ನು ನಿರಾಕರಿಸಬೇಕು ಎಂದು ಒತ್ತಾಯಿಸಿದೆ. ಕೊಲ್ಲಲ್ಪಟ್ಟ ಹೋರಾಟಗಾರರನ್ನು ಖ್ವಾರಿಜ್ ಎಂದು ಮಿಲಿಟರಿ ಬಣ್ಣಿಸಿದೆ, ಈ ಪದವನ್ನು ಪಾಕಿಸ್ತಾನ ಸರ್ಕಾರ ತಾಲಿಬಾನ್ಗೆ ಬಳಸುತ್ತದೆ ಮತ್ತು ಅವರು ಭಾರತದಿಂದ ಬೆಂಬಲಿತರಾಗಿದ್ದಾರೆ ಎಂದು ಆರೋಪಿಸಿದೆ, ಆದರೆ ಈ ಆರೋಪಕ್ಕೆ ಯಾವುದೇ ಪುರಾವೆಗಳನ್ನು ನೀಡಿಲ್ಲ.
ಈ ನಡುವೆ ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಅವರ ಭಾನುವಾರದ ಆಗ್ರಾ ಭೇಟಿಯನ್ನು ರದ್ದುಗೊಳಿಸಿದ್ದಾರೆ. ತಾಜ್ ಮಹಲ್ ನೋಡಲು ಅಫ್ಘಾನ್ ವಿದೇಶಾಂಗ ಸಚಿವರು ಆಗ್ರಾಕ್ಕೆ ಪ್ರಯಾಣಿಸಬೇಕಿತ್ತು. ಯಾವುದೇ ಕಾರಣ ನೀಡದೆ ಅವರ ಭೇಟಿ ರದ್ದುಗೊಂಡಿದೆ.
ಪಾಕಿಸ್ತಾನ ಗಡಿಯಲ್ಲಿ ಸುಮಾರು ಆರು ಸ್ಥಳಗಳಲ್ಲಿ ಅಫ್ಘನ್ ದಾಳಿಗಳು ನಡೆದಿವೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ರೇಡಿಯೋ ಸುದ್ದಿ ಪ್ರಸಾರ ಮಾಡಿದೆ. ಅಫ್ಘನ್ ಪ್ರದೇಶದ ಮೇಲೆ ವಾಯುದಾಳಿಗಳಿಗೆ ಪ್ರತಿಕ್ರಿಯೆಯಾಗಿ ಪ್ರತೀಕಾರದ ದಾಳಿಗಳನ್ನು ನಡೆಸಲಾಗಿದೆ ಎಂದು ಅಫ್ಘನ್ ರಕ್ಷಣಾ ಸಚಿವಾಲಯದ ವಕ್ತಾರ ಎನಾಯತುಲ್ಲಾ ಖ್ವಾರಿಜಿ ಶನಿವಾರ ತಡರಾತ್ರಿ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನದ ದಾಳಿಯಿಂದಾಗಿ ಬಂದೂಕು, ಫಿರಂಗಿ ಸದ್ದು ಜೋರಾಗಿತ್ತು ಮತ್ತು ಕ್ಷಿಪಣಿಗಳ ದಾಳಿಯಿಂದ ಆಕಾಶದಲ್ಲಿ ರಾತ್ರಿಯ ವೇಳೆ ಬೆಳಕು ಕಾಣಿಸಿಕೊಂಡಿತ್ತು ಎಂದು ಆಫ್ಘನ್ ಪಡೆಗಳು ತಿಳಿಸಿದ್ದು, ವಿಡಿಯೋ ತುಣಕನ್ನು ಹಂಚಿಕೊಂಡಿವೆ. ಘರ್ಷಣೆಗಳು ಕೊನೆಗೊಂಡಿದೆ ಎಂದು ಆಫ್ಘನ್ ಪಡೆಗಳು ಹೇಳಿಲ್ಲ.
ಅಫ್ಘನ್ ರಾಜಧಾನಿ ಕಾಬೂಲ್ ಮೇಲೆ ವಾಯುದಾಳಿಯ ಸ್ಫೋಟದ ನಂತರ ಈ ಹೋರಾಟ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ಅಫ್ಘನ್ ಗಡಿಯ ಬಳಿ ಪಾಕಿಸ್ತಾನ ತಾಲಿಬಾನ್ ಸಶಸ್ತ್ರ ಗುಂಪಿನ ಮೂರು ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದು, ಕನಿಷ್ಠ 58 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.