Saturday, May 3, 2025
Homeರಾಜ್ಯಹಿಂದೂಗಳನ್ನು ರಕ್ಷಿಸುವಂತ ಸರ್ಕಾರ ಇರಬೇಕೆ ಹೊರತು ಜಿಹಾದಿಗಳನ್ನು ಬೆಂಬಲಿಸುವ ಸರ್ಕಾರವಲ್ಲ : ಯತ್ನಾಳ್‌

ಹಿಂದೂಗಳನ್ನು ರಕ್ಷಿಸುವಂತ ಸರ್ಕಾರ ಇರಬೇಕೆ ಹೊರತು ಜಿಹಾದಿಗಳನ್ನು ಬೆಂಬಲಿಸುವ ಸರ್ಕಾರವಲ್ಲ : ಯತ್ನಾಳ್‌

There should be a government that protects Hindus,

ಬೆಂಗಳೂರು, ಮೇ 2-ಹಿಂದೂಗಳನ್ನು ರಕ್ಷಿಸುವಂತ ಸರ್ಕಾರ ಇರಬೇಕೆ ಹೊರತು, ರಾಜಕೀಯ ಕಾರಣಕ್ಕಾಗಿ ನಿಷೇಧಿತ ಪಿ.ಎಫ್.ಐ ರಂತ ಸಂಘಟನೆಗಳಿಗೆ ಸರ್ಕಾರ ಬೆಂಬಲ ನೀಡಬಾರದು ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಖಂಡಿಸಿರುವ ಅವರು, ಬಹುಸಂಖ್ಯಾತ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಈ ಸಂಚನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದೂ ಕಾರ್ಯಕರ್ತರು, ಬಜರಂಗ ದಳದವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಹೊರತು, ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ. ಗೋ ರಕ್ಷಣೆ, ಅಕ್ರಮ ಕಸಾಯಿ ಖಾನೆ ವಿರುದ್ಧ ಹೋರಾಟ ಮಾಡುತ್ತಿರುವುದು ಕೆಲವರಿಗೆ ಅಪಥ್ಯವಾಗಿದೆ. ಕೊಲೆಗಡುಕರು ಸ್ವೀಪರ್ ಸೆಲ್‌ ಗಳನ್ನೂ ಅವರಿಗೆ ಉತ್ತೇಜನ ಆರ್ಥಿಕ ನೆರವು, ಉಳಿದುಕೊಳ್ಳುವುದಕ್ಕೆ ಸ್ಥಳ ನೀಡಿದವರನ್ನು ಪತ್ತೆ ಹಚ್ಚಿ ಅವರನ್ನು ಗಲ್ಲಿಗೇರಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

2015ರ ಫೆಬ್ರವರಿಯಲ್ಲಿ ಹಿಂದೂ ಕಾರ್ಯಕರ್ತ ವಿಶ್ವನಾಥ್ ಅವರನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಉಗ್ರರಿಂದ ಹತ್ಯೆ ಮಾಡಲಾಗಿತ್ತು ಎಂದು ಆರೋಪಿಸಿರುವ ಅವರು, 2015 ರ ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಹಾಗೂ ಬಜರಂಗ ದಳದ ಕಾರ್ಯಕರ್ತ, ಗೋ ರಕ್ಷಣೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಪೂಜಾರಿ ಅವರನ್ನು ಮೂಡಬಿದ್ರೆಯಲ್ಲಿ ಕೊಲೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.

2015ರ ನವೆಂಬರ್‌ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರು ಹಾಗೂ ವಿಶ್ವ ಹಿಂದೂ ಪರಿಷದ್‌ ಸಂಘಟನಾ ಕಾರ್ಯದರ್ಶಿಗಳಾಗಿದ್ದ ಕುಟ್ಟಪ್ಪ ಅವರನ್ನು ಹಾಡ ಹಗಲಿನಲ್ಲೇ ದುಷ್ಕರ್ಮಿಗಳು ಕೊಡಗಿನಲ್ಲಿ ಬರ್ಬರವಾಗಿ ಹತ್ಯೆ ಮಾಡಿದರು. ಟಿಪ್ಪು ಜಯಂತಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಹರೀಶ್ ಅವರನ್ನು ಜಿಹಾದಿಗಳು ಕೊಲೆ ಮಾಡಿದರು. ಇದೆ ವೇಳೆ, ರಾಜು ಎಂಬುವವರನ್ನು ಸಹ ಹತ್ಯೆ ಮಾಡಲಾಗಿತ್ತು. 2016ರ ಆಗಸ್ಟ್‌ನಲ್ಲಿ ಬಜರಂಗ ದಳದ ಸಕ್ರಿಯ ಕಾರ್ಯಕರ್ತ ಚರಣ್ ಪೂಜಾರಿ ಅವರನ್ನು ಮಂಗಳೂರಿನ ವಾಮಂಜೂರಿನಲ್ಲಿ ಹತ್ಯೆ ಮಾಡಿದರು. ಹತ್ಯೆಯನ್ನು ಮೊಹಮ್ಮದ್ ಶಾಹ್ರರುಖ್, ಮುಸ್ತಫಾ, ರಹೀಫ್ ಮತ್ತು ನವಾಜ್ ಮಾಡಿದ್ದಾರೆಂದು ಪೊಲೀಸರು ಅರೆಸ್ಟ್ ಮಾಡಿದ್ದರು.

2016ರ ನವಂಬರ್‌ನಲ್ಲಿ ತಿಪಟೂರಿನ ರುದ್ರೇಶ್ ಅವರನ್ನು ಜಿಹಾದಿಗಳು ಹತ್ಯೆ ಮಾಡಿದರು. 2016ರ ಮಾರ್ಚ್‌ನಲ್ಲಿ ಮೈಸೂರಿನ ಉದಯಗಿರಿಯ ಚಹಾ ಅಂಗಡಿಯಲ್ಲಿ ಚಹಾ ಸೇವಿಸುತ್ತಿದ್ದ ಬಿಜೆಪಿ ಕಾರ್ಯಕರ್ತ ರಾಜು ಕ್ಯಾತಮಾರನಹಳ್ಳಿಯನ್ನು ಹತ್ಯೆ ಮಾಡಲಾಗಿತ್ತು. 2016ರ ಆಗಸ್ಟ್‌ನಲ್ಲಿ ಅಖಂಡ ಭಾರತ ಸಂಕಲ್ಪ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ತೆರಳುತ್ತಿದ್ದ ಪ್ರವೀಣ್ ಪೂಜಾರಿ ಅವರನ್ನು ಕೊಡಗಿನ ಕುಶಾಲನಗರದಲ್ಲಿ ಹತ್ಯೆ ಮಾಡಲಾಗಿತ್ತು. 2016ರ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರುದ್ರೇಶ್ ಅವರನ್ನು ಹತ್ಯೆ ಮಾಡಲಾಗಿತ್ತು.

2017ರ ಡಿಸೆಂಬರ್ ಹೊನ್ನಾವರದಲ್ಲಿ ವಿಶ್ವ ಹಿಂದೂ ಪರಿಷದ್‌ನ ಯುವ ಕಾರ್ಯಕರ್ತ ಪರೇಶ್ ಮೇಷ್ಟ್ರ ಅವರನ್ನು ಹತ್ಯೆ ಮಾಡಲಾಗಿತ್ತು 2024ರ ಡಿಸೆಂಬರ್‌ನಲ್ಲಿ ದಕ್ಷಿಣ ಕನ್ನಡದ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು ದಕ್ಷಿಣ ಕನ್ನಡ ಬೆಳ್ಳಾರೆ ಗ್ರಾಮದಲ್ಲಿ ಹತ್ಯೆ ಮಾಡಲಾಗಿತ್ತು. 2014ರ ಆಗಸ್ಟ್‌ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಫಣೀಂದ್ರ ಅವರನ್ನು ಬೆಂಗಳೂರಿನ ಜಾಲಹಳ್ಳಿಯಲ್ಲಿ ಹತ್ಯೆ ಮಾಡಲಾಗಿತ್ತು. ಪಟ್ಟಿ ಇನ್ನೂ ದೊಡ್ಡದಿದೆ ಎಂದು ಯತ್ನಾಳ್ ತಿಳಿಸಿದ್ದಾರೆ.

RELATED ARTICLES

Latest News