Saturday, January 4, 2025
Homeಬೆಂಗಳೂರುಎನ್‌ಫೀಲ್ಡ್ ಬೈಕ್‌ಗಳನ್ನು ಕದಿಯುತ್ತಿದ್ದ 'ರಾಯಲ್' ಕಳ್ಳ ಅಂದರ್

ಎನ್‌ಫೀಲ್ಡ್ ಬೈಕ್‌ಗಳನ್ನು ಕದಿಯುತ್ತಿದ್ದ ‘ರಾಯಲ್’ ಕಳ್ಳ ಅಂದರ್

thief arrested who was stealing Royal Enfield bikes

ಬೆಂಗಳೂರು,ಡಿ.31- ನಗರದ ವಿವಿಧ ಕಡೆಗಳಲ್ಲಿ ರಾಯಲ್ ಎನ್‌ಫೀಲ್ಡ್ ದ್ವಿ-ಚಕ್ರ ವಾಹನಗಳನ್ನೇ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ಬಂಧಿಸಿ 15 ಲಕ್ಷ ರೂ. ಮೌಲ್ಯದ 7 ರಾಯಲ್ ಎನ್‌ಫೀಲ್ಡ್ ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ತಾವರೆಕೆರೆ ನಿವಾಸಿ ಬಂಧಿತ ಆರೋಪಿ. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರೆದಿದೆ. ಕೃಷ್ಣಮೂರ್ತಿ ಲೇಔಟ್ನ ನಿವಾಸಿಯೊಬ್ಬರು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್-350 ಬೈಕ್ನ್ನು ಮನೆಯ ಮುಂಭಾಗ ನಿಲ್ಲಿಸಿದ್ದು, ಮಾರನೆಯ ದಿನ ನೋಡಿದಾಗ ವಾಹನ ಕಳವು ಆಗಿತ್ತು.

ಈ ಬಗ್ಗೆ ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ವಿವಿಧ ಆಯಾಮಗಳಲ್ಲಿ ಮಾತಿಯನ್ನು ಕಲೆಹಾಕಿ ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್ನ ಮನೆಯೊಂದರಲ್ಲಿ ಆರೋಪಿಯನ್ನು ವಶಕ್ಕೆ ಪಡೆದು. ವಿಚಾರಣೆಗೊಳಪಡಿಸಿದಾಗ ರಾಯಲ್ ಎನ್ ಫೀಲ್‌್ಡ ದ್ವಿ-ಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾನೆ.
ಅಲ್ಲದೆ ಇತರೆ 6 ರಾಯಲ್ ಎನ್ ಫೀಲ್‌್ಡ ದ್ಚಿ-ಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ಆರೋಪಿ ಹೇಳಿದ್ದಾನೆ.

ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಇತರೆ ಇಬ್ಬರು ಸಹಚರರ ಜೊತೆ ಸೇರಿ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿರುವ ಬಗ್ಗೆ ತಿಳಿಸಿದ್ದು, ಕಳವು ಮಾಡಿದ ಒಟ್ಟು 7 ರಾಯಲ್ ಎನ್‌ಫೀಲ್ಡ್ ದ್ವಿ-ಚಕ್ರ ವಾಹನಗಳ ಪೈಕಿ, 2 ಬೆಳಗಾವಿ ಸಿಟಿ ಬಸ್ ನಿಲ್ದಾಣದ ಬಳಿ, 3 ಬೆಳಗಾವಿ ಮಾರ್ಕೆಟ್ ಬಸ್ ನಿಲ್ದಾಣದ ಬಳಿ, 1ಬೆಳಗಾವಿಯ ಫಾರೆಸ್ಟ್ ಕಛೇರಿಯ ಮುಂಭಾಗ ನಿಲ್ಲಿಸಿರುವುದಾಗಿ ತಿಳಿಸಿರುತ್ತಾನೆ.

ಒಂದು ರಾಯಲ್ ಎನ್ ಫೀಲ್‌್ಡ ದ್ವಿ-ಚಕ್ರ ವಾಹನವನ್ನು ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆ, ಸತಾನ ತಾಲ್ಲೂಕು, ತಂಡಲವಾಡಿ ಗ್ರಾಮದಲ್ಲಿ ಮಾರಾಟ ಮಾಡಿರುವುದಾಗಿ ಹೇಳಿದ್ದು, ಪೊಲೀಸರು ತನಿಖೆ ಮುಂದುವರೆಸಿ ಬೆಳಗಾವಿಯ ಸಿಟಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ 2-ರಾಯಲ್ ಎನ್ ಫೀಲ್‌್ಡ ದ್ವಿ-ಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಮಾರಾಟ ಮಾಡಿದ್ದ ಮತ್ತೊಂದು ರಾಯಲ್ ಎನ್‌ಫೀಲ್ಡ್ ದ್ವಿ-ಚಕ್ರ ವಾಹನವನ್ನು ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆ, ಸತಾನ ತಾಲ್ಲೂಕು, ತಂಡಲವಾಡಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಲ್ಲದೇ ಬೆಳಗಾವಿಯ ಮಾರ್ಕೆಟ್ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ 3-ರಾಯಲ್ ಎನ್ ಫೀಲ್‌್ಡ ದ್ವಿ-ಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ.

ಬೆಳಗಾವಿಯ ಫಾರೆಸ್ಟ್ ಕಛೇರಿಯ ಮುಂಭಾಗ ನಿಲ್ಲಿಸಿದ್ದ ಮತ್ತೊಂದು ರಾಯಲ್ ಎನ್ ಫೀಲ್‌್ಡ ದ್ವಿ-ಚಕ್ರ ವಾಹನ ಸೇರಿ ಒಟ್ಟು 7 ರಾಯಲ್ ಎನ್‌ಫೀಲ್ಡ್ ದ್ವಿ-ಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 15 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಆರೋಪಿಯ ಬಂಧನದಿಂದ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಯ 7-ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.

ಈ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾರಾ ಫಾತೀಮಾ ನಿರ್ದೇಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತ ಶಿವಶಂಕರ ರೆಡ್ಡಿ, ಇನ್ಸ್ ಪೆಕ್ಟರ್ ಮಾರುತಿ ಜಿ. ನಾಯಕ ನೇತೃತ್ವದಲ್ಲಿ ಸಿಬ್ಬಂದಿಗಳು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

RELATED ARTICLES

Latest News