Sunday, September 8, 2024
Homeರಾಜ್ಯಬುರ್ಖಾ ಧರಿಸಿ ಬಂದು ಚಿನ್ನ ದೋಚಿದ ಕಳ್ಳರು

ಬುರ್ಖಾ ಧರಿಸಿ ಬಂದು ಚಿನ್ನ ದೋಚಿದ ಕಳ್ಳರು

ಅರಕಲಗೂಡು, ಜು.15- ಪಟ್ಟಣದ ಆರ್‌ಆರ್‌ ಗೋಲ್ಸ್ ಡ ಪ್ಯಾಲೇಸ್‌‍ ಚಿನ್ನದ ಅಂಗಡಿಯಲ್ಲಿ ಚಿನ್ನದ ಖರೀದಿಸುವ ನೆಪದಲ್ಲಿ ಮಾರುವೇಷದಲ್ಲಿ ಬುರ್ಖಾ ಧರಿಸಿ ಬಂದಿದ್ದ ನಾಲ್ವರು ಒಡೆಗಳನ್ನು ಕದ್ದು ಪರಾರಿಯಾಗಿದ್ದಾರೆ.

ಒಡವೆಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದಿರುವ ಕಳ್ಳರು ಓಲೆ ತೋರಿಸಲು ಹೇಳಿ ಓಲೆ ಮತ್ತು ಮಾಂಗಲ್ಯ ಸರಗಳನ್ನು ನೋಡುತ್ತಾ ಸೇಲ್ಸ್ ಸ ಮ್ಯಾನ್‌ ದೀಪಿಕಾ ಅವರ ಗಮನವನ್ನು ಬೇರೆಡೆ ಸೆಳೆದು 94.715 ಗ್ರಾಂ ತೂಕದ 6,91,323 ರೂ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

7.466 ಗ್ರಾಂನ ಓಲೆ, 37.169 ಗ್ರಾಂ ನ ಚಿನ್ನದ ಕರಿಮಣಿ ಸರ, 50.080 ಗ್ರಾಂ ನ 916 ಚಿನ್ನದ ಸರ, ಎರಡು ಎಳೆ ಮಾಂಗಲ್ಯ ಸರ 37.466 ಗ್ರಾಂನ ತೂಕದ ಓಲೆ 37.16 9 ಗ್ರಾಂ ತೂಕದ ಕರಿಮಣಿ ಸರ, 50.080 ಎರಡೆಳೆ ಮಾಂಗಲ್ಯ ಸರವನ್ನು ಕದ್ದಿರುತ್ತಾರೆ. ಈ ಎಲ್ಲಾ ಕಳ್ಳತನದ ದೃಶ್ಯ ನಮ್ಮ ಅಂಗಡಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಾವು ಮರುದಿನ ಸ್ಟಾಕ್‌ ಚೆಕ್‌ ಮಾಡುವ ವೇಳೆ ಈ ಘಟನೆ ಕಂಡುಬಂದಿರುತ್ತದೆ. ಈ ಸಂದರ್ಭದಲ್ಲಿ ನಮ್ಮ ಅಂಗಡಿಯ ಎಕ್ಸಿಕ್ಯೂಟಿವ್‌ ದೀಪಿಕಾ ಅವರ ಗಮನವನ್ನು ಬೇರೆ ಸೆಳೆದು ನಾಲ್ಕು ಜನರು ಸಹ ಚಾಲಾಕಿತನದಿಂದ ಈ ಕಳ್ಳತನವನ್ನು ಮಾಡಿಕೊಂಡು ಹೋಗಿರುತ್ತಾರೆ.

ನಾವು ಅರಕಲಗೂಡು ಪಟ್ಟಣದ ಇತರೆ ಅಂಗಡಿಗಳು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿ ಅವರುಗಳು ಅನಕೃ ವೃತ್ತದವರೆಗೆ ನಡೆದುಕೊಂಡು ಬಂದಿದ್ದು ಆನಂತರ ಯಾವ ಕಡೆ ಹೋಗಿರುತ್ತಾರೆ ಎಂದು ತಿಳಿದು ಬಂದಿದಿಲ್ಲ. ದಿನೇ ದಿನೇ ಪಟ್ಟಣದಲ್ಲಿ ಕಳ್ಳತನಗಳು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಆರಕ್ಷಕ ಇಲಾಖೆಯವರು ತುರ್ತಾಗಿ ಕ್ರಮ ಕೈಗೊಂಡು ಕಳ್ಳತನಗಳುನ್ನು ತಡೆಗಟ್ಟಬೇಕೆಂದು ನಾವು ಎಲ್ಲರ ಪರವಾಗಿ ಕೇಳಿಕೊಳ್ಳುತ್ತೇನೆ ಎಂದರು. ಅರಕಲಗೂಡು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News