ಅರಸೀಕೆರೆ, ಜು.17– ಸಿನಿಮೀಯ ಮಾದರಿಯಲ್ಲಿ ದೇವಸ್ಥಾನಕ್ಕೆ ಕನ್ನ ಹಾಕಿರುವ ಚಾಲಾಕಿ ಕಳ್ಳರು, ದೇವಾಲಯದ ಹುಂಡಿಯಲ್ಲಿದ್ದ ಸಾವಿರಾರು ರೂಪಾಯಿಗಳನ್ನು ದೋಚಿರುವ ಘಟನೆ ತಾಲೂಕಿನ ಬೆಂಡೆಕೆರೆ ಸಮೀಪದ ಮೂಡಲಗಿರಿ ತಿಮ್ಮಪ್ಪ ದೇವಾಲಯದಲ್ಲಿ ನಡೆದಿದೆ.
ಚಾಲಾಕಿ ಕಳ್ಳರು ದೇವಾಲಯದ ಆವರಣದಲ್ಲೇ ಇದ್ದ. ಅಡುಗೆ ಮನೆಯಲ್ಲಿದ್ದ ಬೀಗ ಒಡೆದು ಅಲ್ಲಿದ್ದ ಗ್ಯಾಸ್ ಸಿಲಿಂಡರ್ ಬಳಸಿಕೊಂಡು, ಕ್ಯಾಸ್ ಕಟರ್ ಮೂಲಕ ದೇವಾಲಯದ ಮುಖ್ಯದ್ವಾರವನ್ನು ಕಡಿತ ಮಾಡಿ ಒಳ ಪ್ರವೇಶ ಮಾಡಿದ್ದಾರೆ.
ಇದಕ್ಕೂ ಮುನ್ನ, ದೇವಾಲಯದ ಆವರಣದಲ್ಲಿ ಅಳವಡಿಸಿದ್ದ, ಸಿಸಿ ಕ್ಯಾಮೆರಾವನ್ನೂ ಸಹ, ಮೇಲ್ಮುಖವಾಗಿ ತಿರುಗಿಸಿ ಕಳವು ಕೃತ್ಯದಿಂದ ಬಚಾವಾಗುವ ಚಾಣಾಕ್ಯತನ ಮೆರೆದಿದ್ದಾರೆ. ಐನಾತಿ ಕಳ್ಳರ ಕೈ ಚಳಕಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಘಟನೆ ತಿಳಿದ ಬಾಣಾವಣ ಠಾಣೆ ಪಿಎಸ್‌ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ದೇವಸ್ಥಾನದ ಅಭಿವೃದ್ಧಿ ಸಮಿತಿ ಪ್ರಕರಣ ದಾಖಲು ಮಾಡಿದೆ. ಈ ಕುರಿತು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗಭೂಷಣ್ ಮಾತನಾಡಿ, ಎಂದಿನಂತೆ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೀಗ ಒಡೆದಿರುವುದು ಕಂಡು ಬಂತು. ಕೂಡಲೇ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದೇವೆ. ಅವರೂ ಸಹ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು.
ಹುಂಡಿಯಲ್ಲಿ 40-50 ಸಾವಿರ ಹಣ ಇತ್ತು ಎಂದಿರುವ ಅವರು, ದೇವಾಲಯದ ದ್ವಾರ, ಸಿಸಿ ಕ್ಯಾಮೆರಾ ಅಡುಗೆ ಮನೆ ದ್ವಾರವನ್ನು ಕಳ್ಳರು ಮುರಿದು ಹಾಳು ಮಾಡಿದ್ದು ಲಕ್ಷಾಂತರ ನಷ್ಟ ಸಂಭವಿಸಿದೆ ಎಂದು ಮಾಹಿತಿ ನೀಡಿದರು.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-07-2025)
- ರೌಡಿ ಬಿಕ್ಲುಶಿವ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
- ನೈರುತ್ಯ ವಿಭಾಗದ ಡಿಸಿಪಿ ಕಚೇರಿ ಕಾರ್ಯಾರಂಭ
- ವೈಭವದಿಂದ ಜರುಗಿದ ಚಾಮುಂಡೇಶ್ವರಿ ವರ್ಧಂತಿ ಉತ್ಸವ
- ಕೊಡಗು, ಉತ್ತರ ಕನ್ನಡದಲ್ಲಿ ಮಳೆ ಅಬ್ಬರ, ಶಾಲೆಗಳಿಗೆ ರಜೆ