ಮೈಸೂರು, ಜೂ.19- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಾಮಾನ್ಯವಾಗಿ ಪ್ರತಿ ವರ್ಷ 10 ದಿನಗಳ ಕಾಲ ನಡೆಯುತ್ತದೆ. ಆದರೆ, ಈ ಬಾರಿ ಮಾತ್ರ 11 ದಿನದ ದಸರಾ ಮಹೋತ್ಸವ ದಾಖಲೆ ಬರೆಯಲಿದೆ.
ದಸರಾ ಎಂದರೆ ದಶ+ಹರ ಹತ್ತು ದಿನಗಳ ಆಚರಣೆ. ಆದರೆ ಈ ಬಾರಿಯ ದಸರಾ 10 ದಿನ ಅಲ್ಲ, 11 ದಿನ ನಡೆಯಲಿದೆ. ಈ ವರ್ಷ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ದಸರಾ ಆಚರಣೆ ಮಾಡಲಾಗುತ್ತದೆ. ಸೆಪ್ಟಂಬರ್ 26, ಸೆ.27 ಎರಡೂ ದಿನ ಪಂಚಮಿ ತಿಥಿ ಇರುವ ಹಿನ್ನೆಲೆಯಲ್ಲಿ ಈ ಬಾರಿ 11 ದಿನ ದಸರಾ ಆಚರಣೆ ನೆರವೇರಲಿದೆ.
ಇದು ಇತಿಹಾಸದಲ್ಲೇ ಕಂಡು- ಕೇಳರಿಯದ ರೀತಿಯ ದಸರಾ ಮಹೋತ್ಸವವಾಗಿದ್ದು, 400ಕ್ಕೂ ಹೆಚ್ಚು ವರ್ಷಗಳ ಇತಿಹಾಸದಲ್ಲೇ ಈ ರೀತಿ 11 ದಿನಗಳ ಕಾಲ ದಸರಾ ಆಚರಣೆ ಮಾಡುತ್ತಿರುವುದು ಇದೇ ಪ್ರಥಮ ಬಾರಿ..!
ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ದಿನಗಳು ವಿದ್ವಾಂಸರಲ್ಲಿಯೇ ಗೊಂದಲ ಹುಟ್ಟುಹಾಕಿದೆ.
1399ರ ವಿಜಯನಗರ ಸಾಮ್ರಾಜ್ಯದ ಆಳ್ವಿಕೆ, 1410ರ ಮೈಸೂರು ಸಂಸ್ಥಾನದ ಆಳ್ವಿಕೆ ಕಾಲದಿಂದ ದಸರಾ ಮಹೋತ್ಸವ ಆಚರಣೆ ಮಾಡಲಾಗುತ್ತಿದ್ದು, ಈವರೆಗೆ 11 ದಿನಗಳ ಕಾಲ ದಸರಾ ಮಹೋತ್ಸವ ಆಚರಿಸಿದ ಉದಾಹರಣೆಗಳಿಲ್ಲ.
ನವರಾತ್ರಿಯ ಮರುದಿನ ವಿಜಯದಶಮಿ ಆಚರಿಸುವುದು ಸಂಪ್ರದಾಯ. ವಿಜಯದಶಮಿಯಂದು ಅರಮನೆಯಲ್ಲಿ ಪೂಜೆ ಪುನಸ್ಕಾರಗಳು ನಡೆದರೇ ಸರ್ಕಾರದ ವತಿಯಿಂದ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ. ಇನ್ನು 11 ದಿನಗಳ ದಸರಾ ಆಚರಣೆ ಅಚ್ಚರಿ, ಕೌತುಕದ ಜೊತೆಗೆ ಚರ್ಚೆ ಹುಟ್ಟು ಹಾಕಿದ್ದು, ರಾಜ್ಯ ಸರ್ಕಾರ, ಯದುವಂಶದ ರಾಜವಂಶಸ್ಥರು ದಸರಾ ಹೇಗೆ ಆಚರಿಸ್ತಾರೆ? ಎಂಬುದನ್ನು ಕಾದು ನೋಡಬೇಕಿದೆ.
- ಒಂದೇ ಗಂಟೆಯಲ್ಲಿ ಡಿಸಿಇಟಿ ಕನ್ನಡ ಪರೀಕ್ಷೆ ಫಲಿತಾಂಶ ಪ್ರಕಟ
- ವಿಮಾನ ನಿಲ್ದಾಣಗಳ ಸುತ್ತಮುತ್ತ ಪ್ರದೇಶಗಳಿಗೆ ಬರಲಿದೆ ಹೊಸ ರೂಲ್ಸ್
- ಅಮೆರಿಕ ಕನ್ನಡ ಒಕ್ಕೂಟಗಳಿಂದ ಕಮಲ್ ಹಾಸನ್ ಚಿತ್ರಗಳಿಗೆ ಬಹಿಷ್ಕಾರ
- ಗೊಂದಲದ ಗೂಡಾದ ಬಿಜೆಪಿ- ಜೆಡಿಎಸ್ ಮೈತ್ರಿ
- ದೊಡ್ಡ ವರ್ಗವನ್ನು ಅಂಚಿನಲ್ಲಿಡುವ ಅಸಮಾನತೆ ಪರಿಹರಿಸದಿರುವ ರಾಷ್ಟ್ರ ಪ್ರಗತಿಪರ ಅಲ್ಲ ; ಸಿಜೆಐ